• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾ ಸಿಂಗ್‌ ವಿಡಿಯೋ ವೈರಲ್‌: ಅನೇಕ ಮಂದಿಗೆ ಆಶ್ಚರ್ಯ

|
Google Oneindia Kannada News

ಭೋಪಾಲ್‌, ಜು. 03: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ.

ಇತ್ತೀಚೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್‌ ಠಾಕೂರ್, ಭಾರೀ ಸರಳ, ಸುಲಭವಾಗಿ ಬಾಸ್ಕೆಟ್ ಬಾಲ್ ಅನ್ನು ಆಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಕೆಲವು ಸ್ಥಳೀಯ ನಾಯಕರು ಮತ್ತು ಛಾಯಾಗ್ರಾಹಕರು ಜೊತೆಯಲ್ಲೇ ಇದ್ದ ಸಂದರ್ಭದಲ್ಲಿ ಪ್ರಗ್ಯಾ ಚೆಂಡನ್ನು ಸರಿಯಾಗಿ ಬಾಸ್ಕೆಟ್‌ಗೆ ಹಾಕುವಲ್ಲಿ ಸಫಲರಾಗಿ ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ.

'ಪ್ರಗ್ಯಾ ವಿಚಾರದಲ್ಲಿ ಪಿಎಂ ಮನಸ್ಸು ಬದಲಾಯಿಸಿದ್ದಾರೆಯೇ?' - ಕಾಂಗ್ರೆಸ್‌ ಟೀಕೆ 'ಪ್ರಗ್ಯಾ ವಿಚಾರದಲ್ಲಿ ಪಿಎಂ ಮನಸ್ಸು ಬದಲಾಯಿಸಿದ್ದಾರೆಯೇ?' - ಕಾಂಗ್ರೆಸ್‌ ಟೀಕೆ

ಗುರುವಾರ, ಸಂಸದೆ ತೋಟಗಾರಿಕೆಗಾಗಿ ಶಕ್ತಿ ನಗರ ಪ್ರದೇಶದ ಬಾಸ್ಕೆಟ್ ಬಾಲ್ ಅಂಕಣಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅಂಕಣದಲ್ಲಿದ್ದ ಆಟಗಾರರನ್ನು ನೋಡಿ ಸಂಸದೆ ಕೂಡಾ ಒಂದು ಶಾಟ್‌ ಚೆಂಡು ಹೊಡೆಯುವ ನಿರ್ಧಾರ ಮಾಡಿದ್ದಾರೆ.

ಮಾರ್ಚ್‌ನಲ್ಲಿ ಪ್ರಗ್ಯಾ ಠಾಕೂರ್‌, ಉಸಿರಾಟದ ತೊಂದರೆಯ ಕಾರಣ ನವದೆಹಲಿಯಿಂದ ಮುಂಬೈಗೆ ತೆರಳಿದ್ದರು. ಒಂದು ತಿಂಗಳೊಳಗೆ ಎರಡನೇ ಬಾರಿಗೆ ಪ್ರಗ್ಯಾರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಫೆಬ್ರವರಿ 19 ರಂದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ಪ್ರಗ್ಯಾ ದಾಖಲಾಗಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, ''ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಠಾಕೂರ್ ಗಾಲಿ ಕುರ್ಚಿಯಲ್ಲೇ ಕೂತಿದ್ದನ್ನು ಇತ್ತೀಚೆಗೆ ನೋಡಿದ್ದೆ. ಆದರೆ ಇಂದು ಅವರು ಭೋಪಾಲ್‌ನ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ. ಇದನ್ನು ನೋಡಿ ಬಹಳ ಸಂತೋಷವಾಯಿತು,'' ಎಂದು ಹೇಳಿದ್ದಾರೆ.

ನಾನು ದಿನಾ ಗಂಜಲ ಕುಡಿಯುತ್ತೇನೆ. ಹೀಗಾಗೇ ಕೊರೊನಾ ಬಂದಿಲ್ಲ; ಪ್ರಗ್ಯಾ ಸಿಂಗ್ನಾನು ದಿನಾ ಗಂಜಲ ಕುಡಿಯುತ್ತೇನೆ. ಹೀಗಾಗೇ ಕೊರೊನಾ ಬಂದಿಲ್ಲ; ಪ್ರಗ್ಯಾ ಸಿಂಗ್

''ಹಾಗೆಯೇ ಈವರೆಗೆ ನನಗೆ ಲಭಿಸಿದ ಮಾಹಿತಿ ಪ್ರಕಾರ ಯಾವುದೋ ಒಂದು ಗಾಯದ ಕಾರಣದಿಂದಾಗಿ ಪ್ರಗ್ಯಾ ಸರಿಯಾಗಿ ನಿಂತು ನಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿತ್ತು. ದೇವರು ಅವರನ್ನು ಯಾವಾಗಲೂ ಆರೋಗ್ಯವಾಗಿರಿಸಲಿ,'' ಎಂದು ಹಾರೈಸಿದ್ದಾರೆ.

10 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್‌ ಆರೋಪಿಯಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಪ್ರಗ್ಯಾ ಸಿಂಗ್‌ ಜಾಮೀನು ಪಡೆದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ನನ್ನು 3.6 ಲಕ್ಷ ಮತಗಳಿಂದ ಪ್ರಗ್ಯಾ ಸೋಲಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
A video that has been widely shared on social media shows BJP MP Pragya Singh Thakur playing basketball in Bhopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X