• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ಯಾನ್ಸ್‌ ಮಾಡಿ ಸುದ್ದಿಯಾಗಿದ್ದ ಬಿಜೆಪಿಯ ಪ್ರಗ್ಯಾಗೆ ಮನೆಯಲ್ಲೇ ಕೋವಿಡ್‌ ಲಸಿಕೆ!

|
Google Oneindia Kannada News

ಭೋಪಾಲ್‌, ಜು.16:ಬಿಜೆಪಿ ಸಂಸದ ಪ್ರಗ್ಯಾ ಸಿಂಗ್‌ ಠಾಕೂರ್ ಈ ವಾರ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮತ್ತೆ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಭೋಪಾಲ್ ಸಂಸದರು ಲಸಿಕೆ ಸ್ವೀಕರಿಸಿರುವುದು ವಿಡಿಯೋ ವೈರಲ್‌ ಆಗಿದ್ದು, ವಿಪಕ್ಷ ನಾಯಕರ ವಾಗ್ದಾಳಿಗೆ ಬಲಿಯಾಗಿದ್ದಾರೆ. ರಾಜ್ಯ ಆಡಳಿತದ ಪ್ರಕಾರ, "ವೃದ್ಧರು ಮತ್ತು ಅಂಗವಿಕಲರಿಗೆ" ವಿಶೇಷ ನಿಯಮಗಳ ಅಡಿಯಲ್ಲಿ ಮನೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮದಡಿ ಪ್ರಗ್ಯಾ ಸಿಂಗ್‌ ಮನೆಯಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ರಾಜ್ಯ ರೋಗನಿರೋಧಕ ಅಧಿಕಾರಿ ಸಂತೋಷ್ ಶುಕ್ಲಾ, "ಈ ನೀತಿಯ ಪ್ರಕಾರ, ವೃದ್ಧರು ಮತ್ತು ಅಂಗವಿಕಲರಿಗೆ ಮನೆಗಳಿಗೆ ಲಸಿಕೆ ನೀಡಲಾಗುವುದು. ಆದ್ದರಿಂದ ಪ್ರಗ್ಯಾಗೆ ಮೊದಲ ಡೋಸ್‌ ಲಸಿಕೆ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿಲ್ಲ," ಎಂದು ಹೇಳಿದ್ದಾರೆ.

ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾ ಸಿಂಗ್‌ ವಿಡಿಯೋ ವೈರಲ್‌: ಅನೇಕ ಮಂದಿಗೆ ಆಶ್ಚರ್ಯ ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾ ಸಿಂಗ್‌ ವಿಡಿಯೋ ವೈರಲ್‌: ಅನೇಕ ಮಂದಿಗೆ ಆಶ್ಚರ್ಯ

ಆದರೆ ಇದೇ ವೇಳೆ ಈ ಹಿಂದೆ ಬ್ಯಾಸ್ಕೆಟ್‌ಬಾಲ್ ಆಡಿದ್ದ ಹಾಗೂ ತನ್ನ ಮನೆಯಲ್ಲಿ ನಡೆಸಿದ್ದ ವಿವಾಹದಲ್ಲಿ ನೃತ್ಯ ಮಾಡಿದ್ದ ಪ್ರಗ್ಯಾ, ಈಗ "ವೃದ್ಧರು ಮತ್ತು ಅಂಗವಿಕಲರಿಗೆ" ಲಸಿಕೆ ನೀಡಲಾಗುವ ವಿಶೇಷ ನಿಯಮಗಳ ಅಡಿಯಲ್ಲಿ ಲಸಿಕೆ ಪಡೆಯುವ ಮೂಲಕ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, "ಕೆಲವೇ ದಿನಗಳ ಹಿಂದೆ, ಬ್ಯಾಸ್ಕೆಟ್‌ಬಾಲ್ ಆಡಿದ್ದ ಮತ್ತು ನೃತ್ಯ ಮಾಡುತ್ತಿದ್ದ ನಮ್ಮ ಭೋಪಾಲ್ ಸಂಸದೆ ಪ್ರಗ್ಯಾ ಠಾಕೂರ್ ಇಂದು ಮನೆಗೆ ತಂಡವನ್ನು ಕರೆದು ಲಸಿಕೆ ಡೋಸ್ ಪಡೆದಿದ್ದಾರೆಯೇ? ಮೋದಿಜಿಯಿಂದ ಶಿವರಾಜ್‌ಜಿ ಮತ್ತು ಎಲ್ಲಾ ಬಿಜೆಪಿ ನಾಯಕರು ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ, ಆದರೆ ನಮ್ಮ ಏಕೆ ಮತ್ತು ಯಾವ ಆಧಾರದ ಮೇಲೆ ಸಂಸದರಿಗೆ ಈ ವಿನಾಯಿತಿ?," ಎಂದು ಪ್ರಶ್ನಿಸಿದ್ದಾರೆ.

ಬಾಸ್ಕೆಟ್ ಬಾಲ್ ಬಳಿಕ ಈಗ ಪ್ರಗ್ಯಾ ಡ್ಯಾನ್ಸ್‌ ವಿಡಿಯೋ ವೈರಲ್‌: ಕಾಂಗ್ರೆಸ್‌ ಟಾಂಗ್‌ಬಾಸ್ಕೆಟ್ ಬಾಲ್ ಬಳಿಕ ಈಗ ಪ್ರಗ್ಯಾ ಡ್ಯಾನ್ಸ್‌ ವಿಡಿಯೋ ವೈರಲ್‌: ಕಾಂಗ್ರೆಸ್‌ ಟಾಂಗ್‌

51 ವರ್ಷದ ಪ್ರಗ್ಯಾ ಠಾಕೂರ್‌ 10 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಪ್ರಗ್ಯಾ 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಪ್ರಗ್ಯಾ ಸಿಂಗ್‌ ಜಾಮೀನು ಪಡೆದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ನನ್ನು 3.6 ಲಕ್ಷ ಮತಗಳಿಂದ ಪ್ರಗ್ಯಾ ಸೋಲಿಸಿದ್ದಾರೆ.

ವೈದ್ಯಕೀಯ ಕಾರಣಗಳಿಗಾಗಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ಪ್ರಗ್ಯಾ, ಆರೋಗ್ಯವನ್ನು ಉಲ್ಲೇಖಿಸಿ ಹಲವಾರು ನ್ಯಾಯಾಲಯದ ವಿಚಾರಣೆಗಳಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಕಳೆದ ತಿಂಗಳು, ಭೋಪಾಲ್ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಆಟವಾಡಿದ್ದಾರೆ. ತೀರಾ ಇತ್ತೀಚೆಗೆ, ತಮ್ಮ ಮನೆಯಲ್ಲಿ ಬಡ ಹೆಣ್ಣು ಮಕ್ಕಳಿಬ್ಬರ ವಿವಾಹ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಗ್ಯಾ ನೃತ್ಯ ಮಾಡಿದ್ದರು. ಇವೆರಡೂ ಘಟನೆಯ ಬಳಿಕ ಕಾಂಗ್ರೆಸ್‌ ನಾಯಕ ನರೇಂದ್ರ ಸಲೂಜಾ ಪ್ರಗ್ಯಾ ಟ್ವೀಟ್‌ ಮೂಲಕ ಕಾಲೆಳೆದಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
BJP MP Pragya Thakur is engulfed in a new controversy over her vaccination at home this week. The Bhopal MP is seen in a video receiving the jab, which was later revealed to be her first dose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X