ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಗದ್ದಲವೆಬ್ಬಿಸಿದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್

|
Google Oneindia Kannada News

Recommended Video

ಬಿಜೆಪಿ ಸಂಸದೆಗೆ ಬೆವರಿಳಿಸಿದ ಪ್ರಯಾಣಿಕರು | BJP | PRAGYA THAKUR | ONEINDIA KANNADA

ಭೋಪಾಲ್, ಡಿಸೆಂಬರ್ 23: ವಿವಾದಾತ್ಮಕ ರಾಜಕಾರಣಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ದೆಹಲಿಯಿಂದ ಭೋಪಾಲ್‌ಗೆ ಸ್ಪೈಸ್‌ಜೆಟ್‌ನಲ್ಲಿ ತೆರಳುವ ವೇಳೆ ತಾವು ಕಾಯ್ದಿರಿಸಿದ ಸೀಟಿನಲ್ಲಿ ಕೂರಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಜತೆಗೆ ಸಹ ಪ್ರಯಾಣಿಕರ ಜತೆಗೆ ಜಗಳವನ್ನೂ ಮಾಡಿದ್ದಾರೆ.

ಪ್ರಗ್ಯಾ ಠಾಕೂರ್ ಸ್ಪೈಸ್‌ ಜೆಟ್‌ನ ಎಸ್‌ಜಿ 2489ರಲ್ಲಿ ಭೂಪಾಲ್‌ಗೆ ಬಂದಿಳಿದ ಬಳಿಕ ರಾಜ ಭೋಜ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ದೂರು ನೀಡಿದ್ದಾರೆ. ಭೋಪಾಲ್‌ನಲ್ಲಿ ವಿಮಾನ ನಿಂತ ಮೇಲೆ ಹಲವು ಸಮಯ ಕೆಳಕ್ಕಿಳಿಯಲು ನಿರಾಕರಿಸಿದ್ದ ಅವರು, ಸೀಟ್‌ನಲ್ಲಿಯೇ ಕುಳಿತಿದ್ದರು.

ಲೋಕಸಭೆಯಲ್ಲಿ Sorry, Sorry, Sorry, ಎಂದರಲ್ಲ ಸಾದ್ವಿ ಪ್ರಗ್ಯಾ ಸಿಂಗ್! ಲೋಕಸಭೆಯಲ್ಲಿ Sorry, Sorry, Sorry, ಎಂದರಲ್ಲ ಸಾದ್ವಿ ಪ್ರಗ್ಯಾ ಸಿಂಗ್!

ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಗ್ಯಾ, 'ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರ ಜತೆಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ನಾನು ಕಾಯ್ದಿರಿಸಿದ ಸೀಟ್‌ಅನ್ನು ನನಗೆ ನೀಡಲಿಲ್ಲ. ಹಾಗೆ ನಿರಾಕರಿಸಿದ್ದಕ್ಕೆ ನಿಯಮಗಳಿದ್ದರೆ ತೋರಿಸಿ ಎಂದು ಕೇಳಿದ್ದೆ. ನಿರ್ದೇಶಕರಿಗೆ ಕರೆ ಮಾಡಿ ದೂರು ನೀಡಿದ್ದೇನೆ' ಎಂದು ಹೇಳಿದರು. ನನಗೆ ಕೊಟ್ಟ ಸೀಟಿನಲ್ಲಿ ಕೂರಲು ನಿರಾಕರಿಸಿದ್ದೇನೆಯೇ ವಿನಾ, ವಿಮಾನದೊಳಗೆ ಧರಣಿಯನ್ನೇನೂ ನಡೆಸಿಲ್ಲ ಎಂದು ಹೇಳಿದರು.

ಮಾಹಿತಿ ನೀಡಿರದ ಸ್ಪೈಸ್ ಜೆಟ್

ಮಾಹಿತಿ ನೀಡಿರದ ಸ್ಪೈಸ್ ಜೆಟ್

ಪ್ರಗ್ಯಾ ಅವರಿಗೆ ಸೀಟು ಬದಲಿಸಿ ಕೂರುವಂತೆ ಮನವಿ ಮಾಡಲಾಗಿತ್ತು. ಆದರೆ ಅವರು ವಿಮಾನಯಾನ ಸಿಬ್ಬಂದಿ ಜತೆಗೆ ಸಹಕರಿಸಲು ನಿರಾಕರಿಸಿದರು ಎಂದು ಸ್ಪೈಸ್‌ಜೆಟ್ ಹೇಳಿದೆ.

ಪ್ರಗ್ಯಾ ಠಾಕೂರ್ ಅವರು ಒಂದು ಸೀಟನ್ನು ಕಾಯ್ದಿರಿಸಿದ್ದರು. ಆದರೆ ತಾವು ಗಾಲಿಕುರ್ಚಿಯೊಂದಿಗೆ ಬರುತ್ತಿರುವ ಮಾಹಿತಿ ನೀಡಿರಲಿಲ್ಲ. ಪ್ರಗ್ಯಾ ಅವರು ಕಾಯ್ದಿರಿಸಿದ್ದ ಸೀಟ್‌ನಲ್ಲಿ ಸುರಕ್ಷತೆಯ ಕಾರಣಕ್ಕೆ ವೀಲ್‌ಚೇರ್‌ನಲ್ಲಿರುವ ಪ್ರಯಾಣಿಕರಿಗೆ ಕೂರಲು ಅನುಮತಿ ನೀಡುವಂತಿರಲಿಲ್ಲ. ಗಾಲಿಕುರ್ಚಿಯ ಕುರಿತು ಸಿಬ್ಬಂದಿಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಕೂರುವ ಸ್ಥಳವನ್ನು 'ನಾನ್ ಎಮರ್ಜೆನ್ಸಿ' ಸಾಲಿಗೆ ಬದಲಿಸುವಂತೆ ಕೋರಲಾಯಿತು ಎಂದು ಅದು ತಿಳಿಸಿದೆ.

ಕೊನೆಗೂ ಒಪ್ಪಿದ ಪ್ರಗ್ಯಾ

ಕೊನೆಗೂ ಒಪ್ಪಿದ ಪ್ರಗ್ಯಾ

ಪ್ರಗ್ಯಾ ಕಾಯ್ದಿರಿಸಿದ್ದ ಸೀಟ್ ತುರ್ತು ನಿರ್ಗಮನದ ವ್ಯವಸ್ಥೆಯ ಜಾಗದಲ್ಲಿತ್ತು. ಹೀಗಾಗಿ ಆಸನ ಬದಲಾವಣೆಗೆ ಕೋರಿದರೂ ಪ್ರಗ್ಯಾ ಒಪ್ಪಲಿಲ್ಲ. ಅದಕ್ಕೆ ಇರುವ ಮಾರ್ಗಸೂಚಿಗಳನ್ನು ತೋರಿಸಿದರೂ ಅವರು ಹಠ ಬಿಡಲಿಲ್ಲ. ಇದರಿಂದ ಇತರೆ ಪ್ರಯಾಣಿಕರಿಗೂ ತೊಂದರೆಯಾಯಿತು. ಕೊನೆಗೂ ಪ್ರಗ್ಯಾ 1ಎದಿಂದ 2ಬಿಗೆ ಸೀಟು ಬದಲಿಸಲು ಒಪ್ಪಿದರು.

ಪ್ರಗ್ಯಾ ಸಿಂಗ್ ರನ್ನು ಸುಟ್ಟುಬಿಡುತ್ತೇನೆ ಎಂದ ಕಾಂಗ್ರೆಸ್ ಶಾಸಕಪ್ರಗ್ಯಾ ಸಿಂಗ್ ರನ್ನು ಸುಟ್ಟುಬಿಡುತ್ತೇನೆ ಎಂದ ಕಾಂಗ್ರೆಸ್ ಶಾಸಕ

ನಿಮ್ಮ ಕೆಲಸ ತೊಂದರೆ ಕೊಡುವುದಲ್ಲ

ಪ್ರಗ್ಯಾ ಅವರ ವರ್ತನೆಯು ಪ್ರಯಾಣಿಕರಿಗೂ ಕೋಪ ತರಿಸಿತ್ತು. ಪ್ರಗ್ಯಾ ಜನಪ್ರತಿನಿಧಿ. ಅವರ ಕೆಲಸ ಜನರಿಗೆ ತೊಂದರೆ ಕೊಡುವುದಲ್ಲ ಎಂದು ಸಹ ಪ್ರಯಾಣಿಕರು ಅವರೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.

'ನನಗೆ ನಿಮ್ಮ ನಿಯಮದ ಪುಸ್ತಕ ತೋರಿಸಿ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ನನಗೆ ಇಲ್ಲಿ ಹಿತಕರ ಎನಿಸದೆ ಇದ್ದರೆ ನಾನು ಇಲ್ಲಿಂದ ಹೊರಡುತ್ತೇನೆ' ಎಂದು ಪ್ರಗ್ಯಾ ಸಿಬ್ಬಂದಿ ಜತೆ ಜಗಳವಾಡಿದರು.

'ನೀವು ಜನರ ಪ್ರತಿನಿಧಿ. ನಿಮ್ಮ ಕೆಲಸ ನಮಗೆ ತೊಂದರೆ ಕೊಡುವುದಲ್ಲ. ನೀವು ಮುಂದಿನ ವಿಮಾನದಲ್ಲಿ ಬನ್ನಿ' ಎಂದು ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ನೈತಿಕ ಜ್ಞಾನ ಇರಬೇಕು

ನೈತಿಕ ಜ್ಞಾನ ಇರಬೇಕು

'ಮೊದಲದರ್ಜೆ ನಿಮ್ಮ ಹಕ್ಕಲ್ಲ' ಎಂಬ ವ್ಯಕ್ತಿಗೆ, 'ಇದರಲ್ಲಿ ಪ್ರಥಮ ದರ್ಜೆಯ ಸೌಲಭ್ಯ ಇಲ್ಲ. ಮೊದಲ ದರ್ಜೆಯ ಪ್ರಯಾಣ ನನ್ನ ಹಕ್ಕು' ಎಂದು ಪ್ರಗ್ಯಾ ಪ್ರತ್ಯುತ್ತರ ನೀಡಿದರು.

'ನೀವೊಬ್ಬ ನಾಯಕರಾಗಿರುವುದರಿಂದ ಒಬ್ಬ ವ್ಯಕ್ತಿಗೆ ನಿಮ್ಮಿಂದ ತೊಂದರೆಯಾದರೆ ಅದನ್ನು ಸರಿಪಡಿಸುವ ನೈತಿಕ ಸೂಕ್ಷ್ಮತೆ ನಿಮಗಿರಬೇಕು. ಸುಮಾರು ಐವತ್ತು ಜನರನ್ನು ಹೀಗೆ ಬಂಧನದಲ್ಲಿಟ್ಟಿರುವ ನಿಮಗೆ ನಾಚಿಕೆಯಾಗಬೇಕು' ಎಂದು ವ್ಯಕ್ತಿ ಕಿಡಿಕಾರಿದರು.

ವ್ಯಕ್ತಿ ಬಳಸಿದ ಭಾಷೆಯ ಬಗ್ಗೆ ಪ್ರಗ್ಯಾ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಆ ವ್ಯಕ್ತಿ ತಾವು ಸರಿಯಾದ ಭಾಷೆಯನ್ನೇ ಬಳಸಿರುವುದಾಗಿ ಸಮರ್ಥಿಸಿಕೊಂಡರು.

ಕರ್ಕರೆ ಆಯ್ತು, ಈಗ ಗೋಡ್ಸೆ! ಪ್ರಗ್ಯಾ ಮಾತನಾಡಿದ್ದೆಲ್ಲ ವಿವಾದವೇ!ಕರ್ಕರೆ ಆಯ್ತು, ಈಗ ಗೋಡ್ಸೆ! ಪ್ರಗ್ಯಾ ಮಾತನಾಡಿದ್ದೆಲ್ಲ ವಿವಾದವೇ!

English summary
BJP MP Pragya Singh Thakur complains against SpiceJet over seat allotment. Other passangers on the board argued with her and asked not to trouble them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X