ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ಇಂಧೋರ್, ನವೆಂಬರ್ 19: ಮಧ್ಯಪ್ರದೇಶದಲ್ಲಿ ನವೆಂಬರ್ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾರ್ಯಕರ್ತರ ಬದಲಾಗಿ ಆರೆಸ್ಸೆಸ್ ಕಾರ್ಯಕರ್ತರ ಬಳಿ ಜನಾಭಿಪ್ರಾಯ ಸಂಗ್ರಹಿಸಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಬೇರೆ ರಾಜ್ಯಗಳಿಂದಲೂ ಆರೆಸ್ಸೆಸ್ ಕಾರ್ಯಕರ್ತರ ನೆರವನ್ನೂ ಬಿಜೆಪಿ ಬೇಡಿದೆ.

ಪಕ್ಷದ ಕಾರ್ಯಕರ್ತರಿಗೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಆರೆಸ್ಸೆಸ್ ಕಾರ್ಯಕರ್ತರ ಬಳಿ ಪ್ರತಿಕ್ರಿಯೆ ಸಂಗ್ರಹಿಸಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹೆಚ್ಚಾಗಿ ಜನರೊಂದಿಗೆ ಸಂಪರ್ಕ ಹೊಂದಿರುವ ಕಾರಣ ಅವರಿಗೆ ಜನರ ಮನಸ್ಥಿತಿ ಮತ್ತು ಯಾವ ಪಕ್ಷದ ಬಗ್ಗೆ ಜನರಿಗೆ ಒಲವಿದೆ ಎಂಬುದು ಚೆನ್ನಾಗಿ ತಿಳಿದಿರುತ್ತದೆ. ಆ ಕಾರಣದಿಂದ ಅವರ ಪ್ರತಿಕ್ರಿಯೆ ಹೆಚ್ಚು ನಿಖರವಾಗಿರುತ್ತದೆ ಎಂಬುದು ಬಿಜೆಪಿಯ ಅಭಿಪ್ರಾಯ.

ಚುನಾವಣೆಗೂ ಮುನ್ನ ಬಿಜೆಪಿಯಿಂದ 64 ಬಂಡಾಯಗಾರರು ಆಮಾನತುಚುನಾವಣೆಗೂ ಮುನ್ನ ಬಿಜೆಪಿಯಿಂದ 64 ಬಂಡಾಯಗಾರರು ಆಮಾನತು

ಈ ಕಾರಣದಿಂದಲೇ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ಆರೆಸ್ಸೆಸ್ ಕಾರ್ಯಕರ್ತರನ್ನು ಆಯಾ ಕ್ಷೇತ್ರಗಳ ಜನಾಭಿಪ್ರಾಯದ ಅಧ್ಯಯನಕ್ಕೂ ಕಳಿಸುತ್ತದೆ. ಎಷ್ಟೋ ಬಾರಿ ಈ ಅಭಿಪ್ರಾಯದ ಆಧಾರದ ಮೇಲೆಯೇ ಚುನಾವಣೆಗೆ ಟಿಕೆಟ್ ಅನ್ನೂ ನೀಡಲಾಗುತ್ತದೆ.

BJP asks feedback from RSS for Madhya Pradesh assembly elections

ಭೂತ್ ಮಟ್ಟದಲ್ಲಿ ಕೆಲಸ ನಿರ್ವಹಿಸಿ, 2019 ರ ಲೋಕಸಭಾ ಚುನಾವಣೆಯಲ್ಲೂ ಭರ್ಜರಿ ಜಯಗಳಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಆರೆಸ್ಸೆಸ್ ನೆರವು ಅತ್ಯಗತ್ಯವಾಗಿದೆ.

ಆರೆಸ್ಸೆಸ್ ಶಾಖೆಗಳಿಗೆ ಸರ್ಕಾರಿ ಸಿಬ್ಬಂದಿ ಪ್ರವೇಶ ನಿಷಿದ್ಧ: ಕೈ ಪ್ರಣಾಳಿಕೆಆರೆಸ್ಸೆಸ್ ಶಾಖೆಗಳಿಗೆ ಸರ್ಕಾರಿ ಸಿಬ್ಬಂದಿ ಪ್ರವೇಶ ನಿಷಿದ್ಧ: ಕೈ ಪ್ರಣಾಳಿಕೆ

230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

English summary
Generally Bharatiya Janata Party (BJP) workers are put into services of the booth management by the party but this time round in the Madhya Pradesh Assembly elections, the party is relying more on the Rashtriya Swayamsevak Sangh (RSS) workers for the feedback than the party workers. Party has deputed Vistaraks and other RSS workers from the neighbouring states for feedback and to correct the shortcomings of the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X