ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಗುಣಮುಖನಾಗಲು ಸೀಮೆಎಣ್ಣೆ ಕುಡಿದು ವ್ಯಕ್ತಿ ಸಾವು

|
Google Oneindia Kannada News

ಭೋಪಾಲ್, ಮೇ 17: ಕೊರೊನಾ ಸೋಂಕಿನಿಂದ ಗುಣಮುಖನಾಗಲು ಸೀಮೆ ಎಣ್ಣೆ ಕುಡಿದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಮೃತ ಮಹೇಂದ್ರ ವೃತ್ತಿಯಲ್ಲಿ ದರ್ಜಿಯಾಗಿದ್ದ. ಅವನು ತನ್ನ ಕುಟುಂಬದೊಂದಿಗೆ ಭೋಪಾಲ್‌ನ ಶಿವನಗರ ಹಿನೋತಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ. ಮಹೇಂದ್ರ ತನಗೆ ತಾನೇ ಕೊರೋನಾ ರೋಗವಿದೆ ಎಂದು ಭಾವಿಸಿದ್ದ.

ಸೀಮೆಎಣ್ಣೆ ಕುಡಿಯುವುದರಿಂದ ವೈರಸ್ ಅನ್ನು ನಾಶಪಡಿಸಬಹುದು ಎಂದು ಆತನಿಗೆ ನಂಬಿಕೆ ಇತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಹೇಂದ್ರ ಬುಧವಾರ ರಾತ್ರಿ 9 ಗಂಟೆಗೆ ಸೀಮೆಎಣ್ಣೆ ಸೇವಿಸಿದ್ದ.

Death

ಮೃತನನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು ಈತನಿಗೆ ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡಿತ್ತು. ಆದರೆ ತನಗೆ ಕೊರೊನಾ ಇದೆ ಎಂದು ಭಾವಿಸಿದ ಆತ ಸೀಮೆಎಣ್ಣೆ ಸೇವಿಸಿದರೆ ಕೊರೊನಾದಿಂದ ಗುಣವಾಗಬಹುದು ಎಂದು ನಂಬಿದ್ದಾನೆ. ಅದಕ್ಕಾಗಿ ಅದನ್ನು ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾನೆ.

ಆದರೆ ಮೃತ ಮಹೇಂದ್ರ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸುಮಾರು ಎರಡು ದಿನಗಳ ಹಿಂದೆ, ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿದೆ ಎಂದು ಅವನ ಕುಟುಂಬ ಸದಸ್ಯರಿಗೆ ತಿಳಿಸಿದಾಗ, ಅವರು ಅವನನ್ನು ಅಲ್ಲಿಗೆ ಸ್ಥಳಾಂತರಿಸಿದರು. ವೈದ್ಯರು ಶನಿವಾರ ಮಹೇಂದ್ರ ಸಾವನ್ನಪ್ಪಿದ್ದಾಗಿ ಘೋಷಿಸಿದರು.

ಮಹೇಂದ್ರ ಆರೋಗ್ಯ ಕೆಟ್ಟ ನಂತರ ಅವನ ಕುಟುಂಬ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು, ಅಲ್ಲಿ ಹಾಸಿಗೆ ಸಿಕ್ಕದೆ ಆಸ್ಪತ್ರೆ ಆಡಳಿತವು ಅವನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದೆ. ಆ ಬಳಿಕ ಕುಟುಂಬ ಸದಸ್ಯರು ಅವರನ್ನು ಹಮೀದಿಯಾ ಆಸ್ಪತ್ರೆಗೆ ಸಾಗಿಸಿದ್ದರು.

English summary
In another bizarre incident amidst the distressful times, a 30-year-old Madhya Pradesh man who had mild fever died on Monday after he drank kerosene to cure Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X