ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್‌ನಲ್ಲಿ ಕೊರೊನಾದಿಂದ ಸತ್ತಿದ್ದು 109, ಸ್ಮಶಾನಕ್ಕೆ ಬಂದ ಶವಗಳು 2,500

|
Google Oneindia Kannada News

ಭೋಪಾಲ್, ಮೇ 03: ದೇಶದಲ್ಲಿ ನಿತ್ಯ ಕೊರೊನಾ ಸೋಂಕಿನಿಂದ ಮೃತಪಡುತ್ತಿರುವವರ ಒಟ್ಟು ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆಯೇ ಎನ್ನುವ ಅನುಮಾನ ಎದುರಾಗಿದೆ.

ಏಕೆಂದರೆ ಭೋಪಾಲ್‌ನಲ್ಲಿ ಏಪ್ರಿಲ್‌ನಲ್ಲಿ 109 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು ಆದರೆ ಸ್ಮಶಾನಕ್ಕೆ ಬಂದ ಶವಗಳ ಸಂಖ್ಯೆ 2500ಕ್ಕೂ ಅಧಿಕ. ಹಾಗಾದರೆ ಸರ್ಕಾರ ಸುಳ್ಳು ಹೇಳುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.

ಇದು ಮಧ್ಯಪ್ರದೇಶ, ಭೋಪಾಲ್ ಕತೆಯೇ ಅಥವಾ ಬೇರೆಲ್ಲಾ ರಾಜ್ಯಗಳಲ್ಲಿಯೂ ಇದೇ ರೀತಿಯ ತಪ್ಪು ಲೆಕ್ಕ ನೀಡಲಾಗುತ್ತಿದೆಯೇ ಎನ್ನುವುದ ಕುರಿತು ಯಾರಿಗೂ ಸ್ಪಷ್ಟನೆ ಇಲ್ಲ.

Bhopal, Official Covid Toll In April Is 109, But Over 2,500 At Graves

ಭೋಪಾಲ್‌ನಲ್ಲಿ ಏಪ್ರಿಲ್ ತಿಂಗಳಿನಲ್ಲಿ 109 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ, ಆದರೆ ಸ್ಮಶಾನದಲ್ಲಿರುವ ಎಲ್ಲಾ ಮಾಹಿತಿ ಕಲೆ ಹಾಕಿದಾಗ ಒಂದೇ ತಿಂಗಳಿನಲ್ಲಿ 2567 ಶವಗಳನ್ನು ದಹನ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 1273 ಮಂದಿ ಕೊರೊನಾ ರಹಿತ ಸೋಂಕಿತರು ಮೃತಪಟ್ಟಿದ್ದಾರೆ.

ಆದರೆ ಇದೇ ಸಂದರ್ಭದಲ್ಲಿ ಕೊರೊನಾ ರಹಿತ ವ್ಯಕ್ತಿಗಳು ಕೂಡ ಮೃತರಾಗಿದ್ದಾರೆ ಎಂದು ಹೇಳಲಾಗಿದೆ, ಇನ್ನು ಮೂರು ದಿನಗಳ ಹಿಂದೆ ದೆಹಲಿಯ 23 ಪ್ರಮುಖ ಚಿತಾಗಾರಗಳಲ್ಲಿ ಏಪ್ರಿಲ್ 18 ರಿಂದ 27ರವರೆಗೆ 3049 ಶವಗಳಿಗೆ ಬೆಂಕಿ ಇಡಲಾಗಿದೆ.

ಹಾಗೆಯೇ ಕೊರೊನಾ ಸೋಂಕಿರಬಹುದು ಎಂದು ಅನುಮಾನವಿರುವ 3909 ಶವಗಳನ್ನು ಕೂಡ ದಹನ ಮಾಡಲಾಗಿದೆ.ಭೋಪಾಲ್‌ನಲ್ಲಿ 6 ಚಿತಾಗಾರ ಹಾಗೂ 4 ಸ್ಮಶಾನಗಳಿವೆ. ವಿಶ್ರಾಂಘಾಟ್ ಅಧ್ಯಕ್ಷ ಅರುಣ್ ಚೌಧರಿ ಹೇಳುವ ಪ್ರಕಾರ ಕೊವಿಡ್ ಸೋಂಕಿತರ ಅಂತ್ಯಕ್ರಿಯೆಗೆಂದೇ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ.

Recommended Video

ಕೊರೋನ ಪರಿಸ್ಥಿತಿಯ ಬಗ್ಗೆ ವಿವರಿಸಿದ ವಾಟಾಳ್ | Oneindia Kannada

ಭಡ್‌ಭಡಾ ವಿಶ್ರಾಂ ಘಾಟ್, ಸುಭಾಷ್ ನಗರ್ ವಿಶ್ರಾಂ ಘಾಟ್, ಬೈರಾಘರ್ ಘಾಟ್ ಹಾಗೂ ಜಡಾ ಸ್ಮಶಾನ‌ಗಳಿವೆ. ಈ ಸ್ಮಶಾನಗಳಲ್ಲಿ ಶವ ದಹನ ಮಾಡುವವರು ಪಿಪಿಇ ಕಿಟ್ ಸೇರಿದಂತೆ ಹಲವು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ.

English summary
IN THE month of April, the official Covid death toll in Bhopal district was 109. Records accessed by the three crematoriums and one kabristan designated for Covid deaths in the district show that besides the 109, 2,567 bodies were laid to rest under the Covid protocol from April 1-30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X