ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ಜನರ ಪ್ರಯಾಣಕ್ಕೆ ಏರ್ ಬಸ್ ಬುಕ್ ಮಾಡಿದ ಉದ್ಯಮಿ!

|
Google Oneindia Kannada News

ಭೋಪಾಲ್, ಮೇ 28 : ಭೋಪಾಲ್ ಮೂಲದ ಉದ್ಯಮಿಯೊಬ್ಬರು ನಾಲ್ವರು ಕುಟುಂಬ ಸದಸ್ಯರನ್ನು ದೆಹಲಿಗೆ ಕಳುಹಿಸಲು 180 ಸೀಟಿನ ಏರ್ ಬಸ್ ಬುಕ್ ಮಾಡಿ ಸುದ್ದಿಯಾಗಿದ್ದಾರೆ. ಕೊರೊನಾ ಕಾಲದಲ್ಲಿ ವಿಮಾನ ನಿಲ್ದಾಣದ ಜನಸಂದಣಿ ತಪ್ಪಿಸಿಕೊಳ್ಳಲು ಖಾಸಗಿ ವಿಮಾನ ಬುಕ್ ಮಾಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ರಾಜಭೋಜ್ ವಿಮಾನ ನಿಲ್ದಾಣದಿಂದ ಸೋಮವಾರ 180 ಸೀಟಿನ ಎ320 ಖಾಸಗಿ ಏರ್ ಬಸ್ ನಾಲ್ವರು ಪ್ರಯಾಣಿಕರನ್ನು ಹೊತ್ತು ಸಾಗಿದೆ. ಈ ಏರ್ ಬಸ್‌ ಹಾರಾಟಕ್ಕಾಗಿ ಸುಮಾರು 20 ಲಕ್ಷ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ತವರಿಗೆ ಕಳುಹಿಸಿಕೊಟ್ಟ ರೈತತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ತವರಿಗೆ ಕಳುಹಿಸಿಕೊಟ್ಟ ರೈತ

ಭೋಪಾಲ್‌ನ ಮದ್ಯದ ಉದ್ಯಮಿ ತನ್ನ ಮಗಳು, ಇಬ್ಬರು ಮೊಮ್ಮಕ್ಕಳು ಮತ್ತು ಒಬ್ಬಳು ಕೆಲಸದವಳನ್ನು ವಿಶೇಷ ವಿಮಾನದ ಮೂಲಕ ನವದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ. ತಂದೆಯ ಮನೆಗೆ ಬಂದಿದ್ದ ಪುತ್ರಿ ಲಾಕ್ ಡೌನ್ ಪರಿಣಾಮ ಎರಡು ತಿಂಗಳಿನಿಂದ ಅಲ್ಲಿಯೇ ಸಿಲುಕಿದ್ದರು.

ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ ವಂದೇ ಭಾರತ್ ಮಿಷನ್; ಬೆಂಗಳೂರಿಗೆ ಬಂದ 17 ಮತ್ತು 18ನೇ ವಿಮಾನ

 Bhopal Based Man Booked 180 Seater Air Bus To Ferry Four Family Members

ಕೊರೊನಾ ಪರಿಣಾಮದಿಂದಾಗಿ ಮಗಳು, ಮೊಮ್ಮಕ್ಕಳು ವಿಮಾನ ನಿಲ್ದಾನದ ಜನಜಂಗುಳಿಗೆ ಹೋಗುವುದು ಬೇಡ ಎಂದು ಖಾಸಗಿ ಏರ್‌ ಬಸ್ ಬುಕ್ ಮಾಡಿ ಅವರನ್ನು ಕಳುಹಿಸಿಕೊಡಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಏರ್ ಬಸ್ ಹಾರಾಟ ನಡೆಸಿದ್ದನ್ನು ಖಚಿತಪಡಿಸಿದ್ದಾರೆ.

ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು ಮೊದಲ ದಿನದ ವಿಮಾನ ಹಾರಾಟ: ಚೆನ್ನೈ ಪ್ರಯಾಣಿಕನಿಗೆ ಕೊರೊನಾ ಸೋಂಕು

ಸಿಬ್ಬಂದಿ ಜೊತೆಗೆ ಆಗಮಿಸಿದ 180 ಸೀಟಿನ ಖಾಸಗಿ ಏರ್ ಬಸ್‌ನಲ್ಲಿ ಭೋಪಾಲ್‌ನಿಂದ ದೆಹಲಿಗೆ ಕೇವಲ 4 ಜನರು ಪ್ರಯಾಣ ಮಾಡಿದ್ದಾರೆ. ಎ320 ಸೀಟಿನ ಖಾಸಗಿ ಏರ್ ಬಸ್ ಬುಕ್ ಮಾಡಲು ಸುಮಾರು 20 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ದೆಹಲಿಯಲ್ಲಿ ಅಣಬೆ ಬೇಸಾಯ ಮಾಡುವ ರೈತನೊಬ್ಬ ತನ್ನ ಜೊತೆ ಕೆಲಸ ಮಾಡುತ್ತಿದ್ದ 10 ಕಾರ್ಮಿಕರನ್ನು ದೇಶಿಯ ವಿಮಾನದ ಮೂಲಕ ಕಳುಹಿಸಿಕೊಟ್ಟ ಘಟನೆಯೂ ನಮ್ಮ ಮುಂದಿದೆ. ಆದರೆ, ಉದ್ಯಮಿ 4 ಜನರ ಪ್ರಯಾಣಕ್ಕೆ 20 ಲಕ್ಷ ಖರ್ಚು ಮಾಡಿದ್ದಾನೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇಶದಲ್ಲಿ ವಿಮಾನ ಸಂಚಾರ ಸಂಪೂರ್ಣ ರದ್ದಾಗಿತ್ತು. ಸೋಮವಾರದಿಂದ ದೇಶಿಯ ವಿಮಾನ ಸೇವೆಗಳು ಆರಂಭವಾಗಿವೆ.

English summary
Bhopal based liquor baron booked 180 seater A320 airbus to ferry four family members to New Delhi. Liquor baron daughter, her two children and their maid stuck in Bhopal since lockdown announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X