• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ, ಬಜರಂಗ್ ದಳ ಜೊತೆ ಪಾಕಿಸ್ತಾನದ ಐಎಸ್ಐ ಲಿಂಕ್: ದಿಗ್ವಿಜಯ್ ಬಾಂಬ್

|
Google Oneindia Kannada News

ನವದೆಹಲಿ, ಸೆ.01: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೊಮ್ಮೆ ತಮ್ಮ ಹರಿತ ಮಾತುಗಳಿಂದ ಸುದ್ದಿಯಾಗಿದ್ದಾರೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ Pakistan's Inter Services Intelligence ಜೊತೆ ಬಜರಂಗ ದಳ ಹಾಗೂ ಬಿಜೆಪಿ ಸಂಪರ್ಕ ಹೊಂದಿದೆ ಎಂದು ಬಾಂಬ್ ಸಿಡಿಸಿದ್ದಾರೆ.

ಬಲಪಂಥೀಯ ಧೋರಣೆಯೂಳ್ಳ ಹಿಂದುಪರ ಸಂಘಟನೆ ಬಜರಂಗ ದಳ ಹಾಗೂ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗಳಿಗೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವೀಸ್ ಇಂಟೆಲೆಜೆನ್ಸಿ (ಐಎಸ್ಐ) ನಿಂದ ಹಣ ಸಂದಾಯವಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ಸೋಲು: ಆತ್ಮಾಹುತಿಗೆ ಮುಂದಾದ ಸ್ವಾಮೀಜಿದಿಗ್ವಿಜಯ್ ಸಿಂಗ್ ಸೋಲು: ಆತ್ಮಾಹುತಿಗೆ ಮುಂದಾದ ಸ್ವಾಮೀಜಿ

ಇದಲ್ಲದೆ, ಪಾಕಿಸ್ತಾನದ ಪರ ಗೂಢಾಚಾರಿ ಕೆಲಸ ನಿರ್ವಹಿಸುತ್ತಾ ಇಲ್ಲಿಂದ ಮಾಹಿತಿಗಳನ್ನು ಗುಟ್ಟಾಗಿ ರವಾನಿಸುವವರ ಪೈಕಿ ಮುಸ್ಲಿಂಯೇತರರೇ ಹೆಚ್ಚಾಗಿದ್ದಾರೆ. ಇದನ್ನು ಇಲ್ಲಿನ ಮುಸ್ಲಿಮರು ಚೆನ್ನಾಗಿ ಅರಿತುಕೊಳ್ಳಬೇಕು ಎಂದಿದ್ದಾರೆ. ಮಧ್ಯಪ್ರದೇಶದಲ್ಲಿ ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ದಿಗ್ವಿಜಯ್ ಸಿಂಗ್ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.

ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ

ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ

ಎಎನ್ಐ ಹಂಚಿಕೊಂಡಿರುವ ವಿಡಿಯೋದಲ್ಲಿ ದಿಗ್ವಿಜಯ್ ಸಿಂಗ್ ಅವರು. "ಐಎಸ್ಐನಿಂದ ಬಜರಂಗ್ ದಳ, ಬಿಜೆಪಿ ಹಣ ಪಡೆದುಕೊಳ್ಳುತ್ತಿವೆ ಎಂದು ಗುರುತರ ಆರೋಪ ಮಾಡಿದ್ದಾರೆ. ನಂತರ ಐಎಸ್ಐ ಸ್ಪೈಗಳಲ್ಲಿ ಮುಸ್ಲಿಯೇತರು ಹೆಚ್ಚಾಗಿದ್ದಾರೆ ಎಂಬುದರ ಬಗ್ಗೆ ಗಮನವಿರಲಿ, ಇದನ್ನು ಅರಿತುಕೊಳ್ಳಿ" ಎಂದು ಅಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದರು.

ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ !ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ !

ದಿಗ್ವಿಜಯ್ ಸಿಂಗ್ ಹೇಳಿದ್ದೇನು?

ಮಧ್ಯಪ್ರದೇಶದ ಭಿಂಡ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾನುವಾರದಂದು ಮುಖ್ಯ ಅತಿಥಿಯಾಗಿ ಮಾಜಿ ಸಂಸದ ದಿಗ್ವಿಜಯ್ ಸಿಂಗ್ ಹಾಜರಾಗಿದ್ದರು. ಮಹಾರಾಣಾ ಪ್ರತಾಪ್ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ದಿಗ್ವಿಜಯ್ ಸಿಂಗ್ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.

ಯಾರು ದೇಶದ್ರೋಹಿಗಳು ಎಂದು ಪ್ರಶ್ನಿಸಿದ್ದ ದಿಗ್ವಿಜಯ್

ಯಾರು ದೇಶದ್ರೋಹಿಗಳು ಎಂದು ಪ್ರಶ್ನಿಸಿದ್ದ ದಿಗ್ವಿಜಯ್

ಈ ಹಿಂದೆ ಕೂಡಾ ಈ ರೀತಿ ಹೇಳಿಕೆ ನೀಡಿದ್ದ ದಿಗ್ವಿಜಯ್, "ಪಾಕಿಸ್ತಾನ ಪರ ಸ್ಪೈಗಳಾಗಿರುವ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆ ನೀಡಬೇಕು ಎಂದು ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಆಗ್ರಹಿಸಿದ್ದರು. ದೇಶದ್ರೋಹಿಗಳನ್ನು ಜೈಲಿನಲ್ಲಿರಿಸುವ ಬದಲು ಜಾಮೀನು ನೀಡಲು ಮುಂದಾಗಿದ್ದೀರಾ?" ಎಂದು ಪ್ರಶ್ನಿಸಿದ್ದರು.

ದಿಗ್ವಿಜಯ್ ಹೇಳಿಕೆ ಪ್ರತಿಕ್ರಿಯಿಸಿರುವ ಶಿವರಾಜ್ ಸಿಂಗ್

ದಿಗ್ವಿಜಯ್ ಹೇಳಿಕೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್, ಈ ರೀತಿ ವಿವಾದಿತ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವುದೇ ದಿಗ್ವಿಜಯ್ ಸಿಂಗ್ ಅವರಿಗೆ ಕೆಲಸವಾಗಿಬಿಟ್ಟಿದೆ. ಅವರು ಹಾಗೂ ಅವರ ಪಕ್ಷ ಪಾಕಿಸ್ತಾನದ ಭಾಷೆ ಮಾತನಾಡುತ್ತದೆ. ಪಾಕಿಸ್ತಾನ ಇತ್ತೀಚೆಗೆ ರಾಹುಲ್ ಗಾಂಧಿ ಹೆಸರನ್ನು ಅಧಿಕೃತ ಹೇಳಿಕೆಯಲ್ಲಿ ಬಳಸಿದೆ. ಬಿಜೆಪಿ -ಆರೆಸ್ಸೆಸ್ ಬಗೆ ಇಡೀ ಜಗತ್ತಿಗೆ ಗೊತ್ತಿದೆ, ದೇಶಪ್ರೇಮದ ಬಗ್ಗೆ ಕಾಂಗ್ರೆಸ್ಸಿನಿಂದ ಪಾಠ ಕಲಿಯಬೇಕಿಲ್ಲ ಎಂದಿದ್ದಾರೆ.

ದಿಗ್ವಿಜಯ್ ಸಿಂಗ್ ರೋಡ್ ಶೋನಲ್ಲಿ ಕೇಸರಿ ಕಲರವ: ವಾಸ್ತವತೆ ಏನು?ದಿಗ್ವಿಜಯ್ ಸಿಂಗ್ ರೋಡ್ ಶೋನಲ್ಲಿ ಕೇಸರಿ ಕಲರವ: ವಾಸ್ತವತೆ ಏನು?

English summary
The right wing Hindu outfit Bajrang Dal, Bharatiya Janata Party(BJP) taking money from Pakistan's Inter Services Intelligence(ISI), said Congress leader Digvijaya Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X