ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆ ಅಂಗೀಕಾರ

|
Google Oneindia Kannada News

ಭೋಪಾಲ್, ಮಾರ್ಚ್.08: ಮಧ್ಯಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ವಿಧಾನಸಭಾ ಸದಸ್ಯರು ಧ್ವನಿ ಮತದ ಮೂಲಕ ಮಸೂದೆಯ ಪರ ಮತ್ತು ವಿರೋಧ ಮತ ಚಲಾಯಿಸಿದರು. ಮತಾಂತರ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಪರವಾಗಿ ಹೆಚ್ಚು ಮತಗಳು ಬಿದ್ದ ಹಿನ್ನೆಲೆ ಮಸೂದೆ ಅಂಗೀಕಾರಗೊಂಡಿದೆ.

ಈ ಹಿಂದೆ ಕೆಲವು ಪ್ರಕರಣಗಳಲ್ಲಿ 10 ವರ್ಷ ಜೈಲುಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಿದ ಹಿನ್ನೆಲೆ ಮತಾಂತರ ವಿರೋಧಿ ಮಸೂದೆಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿದ ಸಂಪುಟವು ಈ ಬಗ್ಗೆ ಜನವರಿಯಲ್ಲಿ ಅಧಿಕೃತವಾಗಿ ಘೋಷಿಸಿತ್ತು.

ಲವ್ ಜಿಹಾದ್ ಕಾನೂನು ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೇಳಿದ್ದೇನು?ಲವ್ ಜಿಹಾದ್ ಕಾನೂನು ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೇಳಿದ್ದೇನು?

ಕಳೆದ ವಾರವಷ್ಟೇ ಅಂದರೆ ಮಾರ್ಚ್ 1ರಂದು ವಿಧಾನಸಭಾ ಸದನದಲ್ಲಿ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2021ಅನ್ನು ಮಂಡಿಸಿದ್ದರು. ಈ ಸಂಬಂಧ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ.

Anti-Conversion Bill Passes At Madhya Pradesh Assembly

ಧಾರ್ಮಿಕ ಮತಾಂತರಕ್ಕೆ ಜೈಲುಶಿಕ್ಷೆ:

ಕಳೆದ ಜನವರಿ 9ರಂದು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯದ ಸುಗ್ರೀವಾಜ್ಞೆ, 2020ಕ್ಕೆ ರಾಜ್ಯಪಾಲೆ ಆನಂದಿ ಬೆಲ್ ಪಟೇಲ್ ಅವರು ಅಂಕಿತ ಹಾಕಿದ್ದರು. ವಿವಾಹ ಮತ್ತು ಯಾವುದೇ ಮಾರ್ಗದ ಮೂಲಕ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದು ಕಂಡು ಬಂದಲ್ಲಿ ಅಂಥವರಿಗೆ ದಂಡದ ಜೊತೆಗೆ ಜೈಲುಶಿಕ್ಷೆಯನ್ನು ವಿಧಿಸುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬೆದರಿಕೆ, ಅನಗತ್ಯ ಪ್ರಭಾವ, ಬಲಾತ್ಕಾರ, ಮದುವೆ ಅಥವಾ ಇನ್ನಿತರ ಮೋಸದ ವಿಧಾನಗಳಿಂದ ಮತಾಂತರಕ್ಕೆ ಪ್ರಯತ್ನಿಸುವುದು ಕಂಡು ಬಂದರೆ ಅಂಥವರಿಗೆ ಈ ಸುಗ್ರೀವಾಜ್ಞೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಹೇಳಿದೆ.

English summary
Anti-Conversion Bill Passes At Madhya Pradesh Assembly. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X