ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್‌ಗೆ ಆಘಾತ: ಕಳೆದ ವರ್ಷದಿಂದ 27 ಶಾಸಕರು ಬಿಜೆಪಿ ಸೇರ್ಪಡೆ

|
Google Oneindia Kannada News

ಭೋಪಾಲ್‌, ಅಕ್ಟೋಬರ್‌ 24: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನೆಡೆಯಾಗಿದೆ. ಮಧ್ಯ ಪ್ರದೇಶದ ಮತ್ತೋರ್ವ ಕಾಂಗ್ರೆಸ್‌ ಶಾಸಕರೊಬ್ಬರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಲೋಕ ಸಭೆ ಉಪಚುನಾವಣೆಗೂ ಆರು ದಿನಗಳು ಬಾಕಿ ಇರುವಂತೆ ಈ ಬೆಳವಣಿಗೆ ಸಂಭವಿಸಿದೆ. ಇನ್ನು ಕಳೆದ ವರ್ಷದಿಂದ ಈವರೆಗೆ ಒಟ್ಟು 27 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಕಾಂಗ್ರೆಸ್‌ನಿಂದ ಬರ್ವಾಹಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾದ ಸಚಿನ್‌ ಬಿರ್ಲಾ ಈಗ ಬಿಜೆಪಿ ಪಾಳಯಕ್ಕೆ ಸೇರ್ಪಡೆ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅಂದರೆ 2020 ರಿಂದ ಈವರೆಗೆ ಒಟ್ಟು 27 ಕಾಂಗ್ರೆಸ್‌ ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. 2020 ರ ಮಾರ್ಚ್‌ನಲ್ಲಿ 22 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಿದ ಬಳಿಕ ಕಮಲ್‌ ನಾಥ್‌ ಸರ್ಕಾರ ಪತನವಾಗಿದೆ. ಖಾಂಡ್ವಾ-ಬುರ್ಹಾನ್‌ಪುರ ಲೋಕಸಭಾ ಕ್ಷೇತ್ರ ಮೂರು ವಿಧಾನಸಭಾ ಕ್ಷೇತ್ರಗಳೊಂದಿಗೆ ಅಕ್ಟೋಬರ್ 30 ರಂದು ಚುನಾವಣೆ ನಡೆಯಲಿದೆ.

ಚುನಾವಣೆಗೂ ಮುನ್ನ ಸಿಂಧಿಯಾ ಬೆಂಬಲಿಗರು ನೇಮಕಾತಿಯಲ್ಲಿ ಸಿಂಹಪಾಲು ಪಡೆಯುವ ಸಾಧ್ಯತೆಚುನಾವಣೆಗೂ ಮುನ್ನ ಸಿಂಧಿಯಾ ಬೆಂಬಲಿಗರು ನೇಮಕಾತಿಯಲ್ಲಿ ಸಿಂಹಪಾಲು ಪಡೆಯುವ ಸಾಧ್ಯತೆ

ಇನ್ನು ಸಚಿನ್‌ ಬಿರ್ಲಾ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್, "ಯಾವುದು ಮಾರಾಟಕ್ಕೆ ಇದೆಯೋ ಅದು ಮಾರಾಟವಾಗುತ್ತದೆ, ಯಾವುದು ಹೆಚ್ಚು ಬಾಳಿಕೆ ಮಾಡುತ್ತದೆಯೋ ಅದು ಅದು ಕಾಣುತ್ತದೆ," ಎಂದು ಉಲ್ಲೇಖ ಮಾಡಿದ್ದಾರೆ.

Another Congress MLA Joins BJP in Madhya Pradesh, 27th Since Last Year

ಈ ನಡುವೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಉಪಚುನಾವಣೆಯ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಭಾನುವಾರ ಮತ್ತು ಸೋಮವಾರದಂದು ಖಾಂಡ್ವಾ-ಬುರ್ಹಾನ್ ಪುರ ಲೋಕಸಭಾ ಕ್ಷೇತ್ರ ಮತ್ತು ಜೋಬತ್-ಎಸ್ಟಿ ವಿಧಾನಸಭಾ ಕ್ಷೇತ್ರದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಸ್ತುತ ಮುಖ್ಯಮಂತ್ರಿಯಿಂದ ಮಾನ್ಯತೆ ಪಡೆಯುವುದು ತನ್ನ ನಿರ್ಧಾರದಲ್ಲಿ ಭಾಗವಾಗಿದೆ ಎಂದು ಬಿರ್ಲಾ ಹೇಳಿಕೊಂಡಿದ್ದಾರೆ. "ಮಾರ್ಚ್ 2020 ರಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವಲ್ಲಭ ಭವನದಲ್ಲಿ ಭೇಟಿಯಾದಾಗ ನನ್ನನ್ನು ಗುರುತಿಸಿದರು, ನನ್ನ ಹೆಸರಿಟ್ಟು ಕರೆದರು. ತಾಳ್ಮೆಯಿಂದ ನನ್ನ ಬಳಿ ಈ ವಿಚಾರ ಹೇಳಿದರು. ಹಾಗೆಯೇ ಖಾರ್ಗೋನ್ ಜಿಲ್ಲೆಯ ಬರ್ವಾಹ ಮತ್ತು ಮಹೇಶ್ವರ ವಿಧಾನಸಭಾ ಕ್ಷೇತ್ರಗಳ 55 ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು," ಎಂದು ತಿಳಿಸಿದ್ದಾರೆ.

Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಪಡೆ ಜೆಟ್ ಪತನ; ಪೈಲಟ್ ಸುರಕ್ಷಿತBreaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಪಡೆ ಜೆಟ್ ಪತನ; ಪೈಲಟ್ ಸುರಕ್ಷಿತ

ಸಚಿನ್‌ಗೆ ಕಾಂಗ್ರೆಸ್‌ನಲ್ಲಿ ಅವಮಾನ

ಕಮಲ್ ನಾಥ್ ಸರ್ಕಾರದ ಅವಧಿಯಲ್ಲಿ ಸಚಿನ್‌ ಬಿರ್ಲಾ ಮಾತನ್ನು ಕೇಳುತ್ತಿರಲಿಲ್ಲ. ಈಗ ಅವಮಾನ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಸಚಿನ್‌ ಬಿರ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ," ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. "ರಾಜ್ಯದಲ್ಲಿ ಕಮಲ್ ನಾಥ್ ಅಧಿಕಾರದಲ್ಲಿದ್ದಾಗ, ಸಚಿನ್ ಬಿರ್ಲಾ ಅವರು ಹಳ್ಳಿಗಳ ನೀರಾವರಿ, ಬೀಡಿಯ ಪ್ರದೇಶದ ಆಧುನಿಕ ಮಿರ್ಚಿ ಮಂಡಿ ಅಭಿವೃದ್ಧಿ ಮತ್ತು ರಸ್ತೆಗಳ ನಿರ್ಮಾಣ ಕಾರ್ಯ ವಿಚಾರದಲ್ಲಿ ಮಾಜಿ ಸಿಎಂ ಕಮಲ್ ನಾಥ್‌ರನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ. ಆದರೆ ಕಮಲ್ ನಾಥ್‌ ಮಾತ್ರ ಬಾರ್ವಾಹಾ ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸಿಲ್ಲ. ಈ ಸಮಸ್ಯೆಗಳನ್ನು ಬಗ್ಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯವನ್ನು ಕೂಡಾ ಕಮಲ್‌ ನಾಥ್‌ ಸರ್ಕಾರ ಮಾಡಿಲ್ಲ. ಆದರೆ ಈಗ ಕಮಲ್‌ ನಾಥ್, ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಬಿರ್ಲಾ ಅವರನ್ನು ಮಾರಾಟವಾಗುವವರು ಎಂದು ನಿಂದನೆ ಮಾಡುತ್ತಿದ್ದಾರೆ. ಇದು ಇಡೀ ಮಣ್ಣನ್ನು ಮತ್ತು ನಿಮಾರ್ ಪ್ರದೇಶದ ಜನರನ್ನು ಅಗೌರವಿಸುವಂತಿದೆ," ಎಂದು ಆರೋಪ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Another Congress MLA Joins BJP in Madhya Pradesh, 27th Since Last Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X