ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮೆಚ್ಚುಗೆ ಪಡೆದ ಸಿನಿಮಾಕ್ಕೆ ಮಧ್ಯಪ್ರದೇಶ, ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ

|
Google Oneindia Kannada News

ಭೋಫಾಲ್, ಮಾರ್ಚ್ 13: ದಿ ಕಾಶ್ಮೀರ್​ ಫೈಲ್ಸ್​ ಹಿಂದಿ ಸಿನಿಮಾಕ್ಕೆ ಮತ್ತೊಂದು ರಾಜ್ಯದಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗುಜರಾತ್, ಹರ್ಯಾಣ ರಾಜ್ಯಗಳ ನಂತರ ಮಧ್ಯಪ್ರದೇಶದಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರದಂದು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಮೇಲಿನ ಮನರಂಜನಾ ತೆರಿಗೆಯನ್ನು ತೆಗೆದು ಹಾಕಿರುವುದಾಗಿ ಪ್ರಕಟಿಸಿದರು. ಮಧ್ಯಪ್ರದೇಶದ ನಂತರ ಕರ್ನಾಟಕದಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯತಿ ಸಿಕ್ಕಿದೆ

"ಈ ಚಿತ್ರವನ್ನು ಹೆಚ್ಚೆಚ್ಚು ಜನರು ವೀಕ್ಷಿಸಬೇಕಾಗಿದೆ, ಆದ್ದರಿಂದ ನಾವು ಮಧ್ಯಪ್ರದೇಶ ರಾಜ್ಯದಲ್ಲಿ ಇದನ್ನು ತೆರಿಗೆ ಮುಕ್ತಗೊಳಿಸಲು ನಿರ್ಧರಿಸಿದ್ದೇವೆ" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಹೇಳಿದರು.

ಚಿತ್ರದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ, ನಿರ್ಮಾಪಕರಾದ ಅಭಿಷೇಕ್​ ಅಗರ್​ವಾಲ್​, ನಟಿ ಪಲ್ಲವಿ ಜೋಶಿ(ವಿವೇಕ್​ ಅಗ್ನಿಹೋತ್ರಿ ಪತ್ನಿ) ಅವರು ಶನಿವಾರದಂದು ಪ್ರಧಾನಿ ಮೋದಿ ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಚರ್ಚಿಸಿದರು. ನಂತರ ಗ್ರೂಪ್ ಫೋಟೊ ತೆಗೆಸಿಕೊಂಡು ಟ್ವೀಟ್ ಮಾಡಿದ್ದಾರೆ. ಈ ಚಿತ್ರ ವೈರಲ್ ಆಗುತ್ತಿದೆ. ನಟ, ನಟಿ, ಪತ್ರಕರ್ತರು, ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರು ಈ ಚಿತ್ರಕ್ಕೆ, ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

After Gujarat, Haryana, Vivek Agnihotri’s the Kashmir Files Gets Tax Exemption in Madhya Pradesh

''ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತುಂಬ ಖುಷಿ ಆಯಿತು. ನಮ್ಮ ಸಿನಿಮಾ ಬಗ್ಗೆ ಅವರು ಹೇಳಿದ ಪ್ರಶಂಸೆಯ ಮಾತುಗಳಿಂದಾಗಿ ಈ ಭೇಟಿ ತುಂಬ ವಿಶೇಷವಾಗಿತ್ತು" ಎಂದು ನಿರ್ಮಾಪಕ ಅಭಿಷೇಕ್​ ಅಗರ್​ವಾಲ್​ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿ, ''ಭಾರತದ ಅತ್ಯಂತ ಸವಾಲಿನ ಸತ್ಯವನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲು ಧೈರ್ಯ ತೋರಿಸಿದ್ದಾಗಿ ನಿಮಗೆ ಧನ್ಯವಾದಗಳು,'' ಎಂದು ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕದಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಿಸಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

After Gujarat, Haryana, Vivek Agnihotri’s the Kashmir Files Gets Tax Exemption in Madhya Pradesh

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆ ಸರಣಿಯನ್ನು ಆಧರಿಸಿ ನಿರ್ಮಿಸಲಾಗಿರುವ 'ದಿ ಕಾಶ್ಮೀರ್​ ಫೈಲ್ಸ್​' ಚಿತ್ರ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿರಿಯ ನಟ ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ಪ್ರಕಾಶ್​ ಬೆಳವಾಡಿ, ಮಿಥುನ್​ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಮಾರು 8 ಕೋಟಿ ರು ಗೂ ಅಧಿಕ ಗಳಿಕೆ ಕಂಡಿರುವ ಚಿತ್ರಕ್ಕೆ ಐಎಂಡಿಬಿಯಲ್ಲಿ ಗರಿಷ್ಠ ರೇಟಿಂಗ್ ಸಿಕ್ಕಿದೆ.

After Gujarat, Haryana, Vivek Agnihotri’s the Kashmir Files Gets Tax Exemption in Madhya Pradesh

ಅಭಿಷೇಕ್ ಅಗರ್ವಾಲ್ ಈ ಹಿಂದೆ 'ಗೂಡಾಚಾರಿ', 'ಸೀತಾ' ​​ಮತ್ತು 'ಕಿರ್ರಕ್ ಪಾರ್ಟಿ'ಯಂತಹ ಕೆಲವು ತೆಲುಗು ಚಿತ್ರಗಳನ್ನು ನಿರ್ಮಿಸಿದ್ದಾರೆ. ಮತ್ತೊಂದೆಡೆ, ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಹಿಂದಿನ ಚಿತ್ರಗಳಲ್ಲಿ 'ಚಾಕೊಲೇಟ್', 'ಧನ್ ಧನಾ ಧನ್ ಗೋಲ್' ಮತ್ತು 'ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಸೇರಿವೆ.

'ದಿ ಕಾಶ್ಮೀರ್ ಫೈಲ್ಸ್' ಇದು ವಿವೇಕ್ ಅಗ್ನಿಹೋತ್ರಿಯವರ ರಾಜಕೀಯ-ಸರಣಿ ಥ್ರಿಲ್ಲರ್‌ನಲ್ಲಿ ಎರಡನೇ ಕಂತು ಎನ್ನಬಹುದು. 'ದಿ ಟಾಷ್ಕೆಂಟ್ ಫೈಲ್ಸ್' (2019) ಸರಣಿಯ ಮೊದಲ ಚಲನಚಿತ್ರವು ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಮರಣವನ್ನು ಆಧರಿಸಿದೆ ಮತ್ತು ಈ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

1984 ರ ಸಿಖ್-ವಿರೋಧಿ ದಂಗೆಗಳನ್ನು ಆಧರಿಸಿದೆ ಎಂದು ಹೇಳಲಾದ 'ದಿ ಡೆಲ್ಲಿ ಫೈಲ್ಸ್' ಎಂಬ ಟ್ರಯಾಜಿಯ ಮೂರನೇ ಚಲನಚಿತ್ರವನ್ನು ಈಗಾಗಲೇ ಘೋಷಿಸಿದ್ದಾರೆ.

ನಟ ಪರೇಶ್ ರಾವರ್ ಮೆಚ್ಚುಗೆಯ ಟ್ವೀಟ್:

ಅನುಭವ ಹಂಚಿಕೊಂಡ ನಟ ಅನುಪಮ್ ಖೇರ್:

ಕಾಂಗ್ರೆಸ್ ಮುಖಂಡ ಅಭಿಶೇಕ್ ಮನು ಸಿಂಘ್ವಿ ಟ್ವೀಟ್:

English summary
After Madhya Pradesh government, Karnataka Govt on Sunday decided to exempt the recently-released film 'The Kashmir Files' from paying entertainment tax in the state, Chief Minister Basavaraj Bommai said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X