• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಸ್ಕೆಟ್ ಬಾಲ್ ಬಳಿಕ ಈಗ ಪ್ರಗ್ಯಾ ಡ್ಯಾನ್ಸ್‌ ವಿಡಿಯೋ ವೈರಲ್‌: ಕಾಂಗ್ರೆಸ್‌ ಟಾಂಗ್‌

|
Google Oneindia Kannada News

ಭೋಪಾಲ್, ಜು.09: ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್‌ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು. ಈಗ ವಿವಾಹವೊಂದರಲ್ಲಿ ಪ್ರಗ್ಯಾ ಸಿಂಗ್‌ ಠಾಕೂರ್ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋ ವಿಚಾರದಲ್ಲಿ ಪ್ರಗ್ಯಾಗೆ ಕಾಂಗ್ರೆಸ್‌ ಟಾಂಗ್‌ ನೀಡಿದೆ.

ಬಿಜೆಪಿ ಸಂಸದೆ ತಾನು ಆಯೋಜಿಸಲು ಸಹಾಯ ಮಾಡಿದ ವಿವಾಹ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದು ವಿಡಿಯೋ ವೈರಲ್‌ ಆಗುತ್ತಿದ್ದಂತೆ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದ ಕಾರಣವನ್ನು ಉಲ್ಲೇಖಿಸಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದಿರುವ ಪ್ರಗ್ಯಾರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದೆ.

ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾ ಸಿಂಗ್‌ ವಿಡಿಯೋ ವೈರಲ್‌: ಅನೇಕ ಮಂದಿಗೆ ಆಶ್ಚರ್ಯ ಬಾಸ್ಕೆಟ್ ಬಾಲ್ ಆಡಿದ ಪ್ರಗ್ಯಾ ಸಿಂಗ್‌ ವಿಡಿಯೋ ವೈರಲ್‌: ಅನೇಕ ಮಂದಿಗೆ ಆಶ್ಚರ್ಯ

ಭೋಪಾಲ್‌ನ ಸಂಸದೆಯ ನಿವಾಸದಲ್ಲಿ ಎರಡು ಅತ್ಯಂತ ಬಡ ಕುಟುಂಬಗಳ ಯುವತಿಯರ ವಿವಾಹವನ್ನು ನಡೆಸಲಾಗಿದ್ದು, ಈ ಸಂದರ್ಭ 51 ವರ್ಷದ ಪ್ರಗ್ಯಾ ಠಾಕೂರ್‌, ಅತ್ಯಂತ ಸಂತೋಷದಿಂದ ನೃತ್ಯ ಮಾಡಿದ್ದು, ಅಷ್ಟು ಮಾತ್ರವಲ್ಲದೇ ಇತರರಿಗೂ ನೃತ್ಯ ಮಾಡಲು ಆಹ್ವಾನ ನೀಡಿದ್ದಾರೆ. ಬನ್ನಿ ನೃತ್ಯ ಮಾಡಿ ಎಂದು ಕೈ ಬೀಸಿ ಕರೆದಿದ್ದಾರೆ.

ಈ ವಿವಾಹದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಧುಗಳಿಬ್ಬರು, "ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ. ತನ್ನ ಮಗಳ ವಿವಾಹವನ್ನು ಆಯೋಜಿಸಿದ ಕಾರಣ ಭೋಪಾಲ್ ಸಂಸದೆಗೆ ಕೃತಜ್ಞನಾಗಿದ್ದೇನೆ ಎಂದು ವಧುವಿನ ತಂದೆ, ದೈನಂದಿನ ಕೂಲಿ ಕಾರ್ಮಿಕ ಹೇಳಿದ್ದಾರೆ.

"ನನಗೆ ಎರಡನೆಯ ಜೀವನವನ್ನು ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ಬಡವನಾಗಿದ್ದೇನೆ. ನನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಲು ಬೇಕಾದಷ್ಟು ಹಣ ನನ್ನಲ್ಲಿ ಇಲ್ಲ. ಆದರೆ ಪ್ರಗ್ಯಾ ಠಾಕೂರ್ ನಮಗೆ ಸಹಾಯ ಮಾಡಿದರು. ಪ್ರಗ್ಯಾ ದೀರ್ಘ ಕಾಲ ಜೀವಿಸಲಿ ಎಂದು ನಾನು ತಾಯಿ ದೇವಿಯನ್ನು ಪ್ರಾರ್ಥಿಸುತ್ತೇನೆ. ನಾನು ತುಂಬಾ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ," ಎಂದು ತಿಳಿಸಿದ್ದಾರೆ.

ಆದರೆ ಈ ನಡುವೆ ಈ ಪ್ರಗ್ಯಾ ಡ್ಯಾನ್ಸ್‌ಗೆ ಕಾಂಗ್ರೆಸ್‌ ನಾಯಕ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ನರೇಂದ್ರ ಸಲೂಜಾ, "ನಮ್ಮ ಭೋಪಾಲ್ ಸಂಸದೆ ಸಹೋದರಿ ಪ್ರಗ್ಯಾ ಠಾಕೂರ್‌ ಬಾಸ್ಕೆಟ್‌ ಬಾಲ್‌ ಆಡುವುದನ್ನು, ಯಾರದೇ ಬೆಂಬಲವಿಲ್ಲದೆ ನಡೆಯುವುದನ್ನು ಅಥವಾ ಈ ರೀತಿ ಸಂತೋಷದಿಂದ ಕುಣಿಯುವುದನ್ನು ನಾವು ನೋಡಿದಾಗಲೆಲ್ಲಾ ನನಗೆ ತುಂಬಾ ಸಂತೋಷವಾಗುತ್ತದೆ?" ಎಂದು ಕುಟುಕಿದ್ದಾರೆ.

ಈ ಹಿಂದೆ ಜುಲೈ ಮೊದಲ ವಾರದಲ್ಲಿ ಪ್ರಗ್ಯಾ ಸಿಂಗ್‌ ಠಾಕೂರ್ ಭೋಪಾಲ್‌ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿತ್ತು. ಇತ್ತೀಚೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್‌ ಠಾಕೂರ್, ಭಾರೀ ಸರಳ, ಸುಲಭವಾಗಿ ಬಾಸ್ಕೆಟ್ ಬಾಲ್ ಅನ್ನು ಆಡುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಕೆಲವು ಸ್ಥಳೀಯ ನಾಯಕರು ಮತ್ತು ಛಾಯಾಗ್ರಾಹಕರು ಜೊತೆಯಲ್ಲೇ ಇದ್ದ ಸಂದರ್ಭದಲ್ಲಿ ಪ್ರಗ್ಯಾ ಚೆಂಡನ್ನು ಸರಿಯಾಗಿ ಬಾಸ್ಕೆಟ್‌ಗೆ ಹಾಕುವಲ್ಲಿ ಸಫಲರಾಗಿ ಚಪ್ಪಾಳೆಗಿಟ್ಟಿಸಿಕೊಂಡಿದ್ದರು.

ಈ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ನರೇಂದ್ರ ಸಲೂಜಾ, ''ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಠಾಕೂರ್ ಗಾಲಿ ಕುರ್ಚಿಯಲ್ಲೇ ಕೂತಿದ್ದನ್ನು ಇತ್ತೀಚೆಗೆ ನೋಡಿದ್ದೆ. ಆದರೆ ಇಂದು ಅವರು ಭೋಪಾಲ್‌ನ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದಾರೆ. ಇದನ್ನು ನೋಡಿ ಬಹಳ ಸಂತೋಷವಾಯಿತು,'' ಎಂದು ಹೇಳಿದ್ದರು.

10 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡ 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್‌ ಆರೋಪಿಯಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2017 ರಲ್ಲಿ ಆರೋಗ್ಯದ ಆಧಾರದ ಮೇಲೆ ಪ್ರಗ್ಯಾ ಸಿಂಗ್‌ ಜಾಮೀನು ಪಡೆದಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್‌ನಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ನನ್ನು 3.6 ಲಕ್ಷ ಮತಗಳಿಂದ ಪ್ರಗ್ಯಾ ಸೋಲಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Days after a video of Pragya Thakur's slam dunk on a basketball court went viral, the BJP MP is seen dancing at a wedding she helped organise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X