• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಜಪೇಯಿ ಕೋಪದಿಂದ ಮೋದಿಯನ್ನು ಉಳಿಸಿದ್ದು ಅಡ್ವಾಣಿ: ಸಿನ್ಹಾ

|

ಭೋಪಾಲ್, ಮೇ 11: "2002 ರ ಗೋಧ್ರೋತ್ತರ ಹತ್ಯಾಕಾಂಡದ ನಂತರ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ಆದರೆ ಅಡ್ವಾಣಿ ಅದನ್ನು ತಡೆದರು" ಎಂದು ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ಹೇಳಿದರು.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಸಿನ್ಹಾ, 2002 ರ ಗೋಧ್ರೋತ್ತರ ಘಟನೆಯ ನಂತರ ಕೇಂದ್ರದಲ್ಲಿದ್ದ ಎನ್ ಡಿಎ ಸರ್ಕಾರಕ್ಕೆ ಸಾಕಷ್ಟು ಇರಿಸು ಮುರಿಸುಂಟಾಗಿತ್ತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ನರೇಂದ್ರ ಮೊದಿ ಅವರ ಬಳಿ ರಾಜೀನಾಮೆ ಕೊಡಿಸಲು ನಿರ್ಧರಿಸಿದ್ದರು ಎಂದು ಸುಮಾರು ಒಂದೂ ಮುಕ್ಕಾಲು ದಶಕದ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ರಫೇಲ್ ತೀರ್ಪು: ಮೇಲ್ಮನವಿ ಸಲ್ಲಿಸಲಿರುವ ಅರುಣ್ ಶೌರಿ, ಯಶವಂತ್ ಸಿನ್ಹಾ

ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕೆ ಬಿಜೆಪಿ ತೊರೆದಿರುವ ಯಶವಂತ್ ಸಿನ್ಹಾ, ಆಗಾಗ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಲೇ ಇದ್ದು, ಇದೂ ಅದರಲ್ಲಿ ಒಂದೆನ್ನಿಸಿದೆ.

ರಾಜೀನಾಮೆ ನೀಡಿದಿದ್ದರೆ ಅಮಾನತು!

ರಾಜೀನಾಮೆ ನೀಡಿದಿದ್ದರೆ ಅಮಾನತು!

"2002 ರಲ್ಲಿ ಮೋದಿ ಸರ್ಕಾರದ ಬಗ್ಗೆ ವಾಜಪೇಯಿ ಅವರಿಗೆ ಸಾಕಷ್ಟು ಬೇಸರವಾಗಿತ್ತು. ಮುಜುಗರವುಂಟಾಗಿತ್ತು. ಆದ್ದರಿಂದ ಅವರು ಮೋದಿ ಅವರ ಬಳಿ ರಾಜೀನಾಮೆ ನೀಡುವಂತೆ ಕೇಳುವುದಕ್ಕೆ ಮುಂದಾಗಿದ್ದರು. ಅಕಸ್ಮಾತ್ ಮೋದಿ ರಾಜೀನಾಮೆಗೆ ಒಲ್ಲೆ ಎಂದರೆ ಅವರನ್ನು ಅಮಾನತು ಮಾಡಬೇಕೆಂದು ನಿರ್ಧರಿಸಿದ್ದರು"- ಯಶವಂತ್ ಸಿನ್ಹಾ

ಮಮತಾ ಬ್ಯಾನರ್ಜಿ ಉತ್ತಮ ಪ್ರಧಾನಿಯಾಗಬಲ್ಲರು: ಯಶವಂತ್ ಸಿನ್ಹಾ

ಮೋದಿಯವರನ್ನು ಉಳಿಸಿದ್ದು ಅಡ್ವಾಣಿ!

ಮೋದಿಯವರನ್ನು ಉಳಿಸಿದ್ದು ಅಡ್ವಾಣಿ!

"ಅಂದು ಮೋದಿಯವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವುದು ಬೇಡ ಎಂದು ಆವರ ಬೆಂಬಲಕ್ಕೆ ನಿಂತಿದ್ದು ಆಗ ಕೇಂದ್ರದಲ್ಲಿ ಗೃಹಸಚಿವರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು. ಮೋದಿ ಅವರನ್ನು ಅಮಾನತು ಮಾಡಿದರೆ ನಾನು(ಅಡ್ವಾಣಿ) ರಾಜೀನಾಮೆ ಕೊಡುತ್ತೇನೆ ಎಂದು ಅಡ್ವಾಣಿ ಅವರು ವಾಜಪೇಯಿ ಅವರಿಗೆ ಹೆದರಿಸಿದ್ದರು"- ಯಶವಂತ್ ಸಿನ್ಹಾ

ಮೋದಿ ವಿರುದ್ದ ಸಿಬಿಐಗೆ ದೂರು: ಯಶವಂತ್ ಸಿನ್ಹಾ ಹಿಂದಿನ ಮಾಸ್ಟರ್ ಮೈಂಡ್ ಯಾರು?

ಪ್ರಧಾನಿ ಘನತೆಯಿಂದ ಮಾತನಾಡಬೇಕು

ಪ್ರಧಾನಿ ಘನತೆಯಿಂದ ಮಾತನಾಡಬೇಕು

"ಐಎನ್ ಎಸ್ ವಿರಾಟ್ ಅನ್ನು ರಾಜೀವ್ ಗಾಂಧಿ ಪರ್ಸನಲ್ ಟ್ಯಾಕ್ಸಿಯ ಹಾಗೆ ಬಳಸಿಕೊಂಡರು ಎಂಬ ಮಾತುಗಳು ಪ್ರಧಾನಿ ಹುದ್ದೆಗೆ ತಕ್ಕುದಲ್ಲ. ಆ ಹುದ್ದೆಯ ಘನತೆಯನ್ನು ಕಳೆಯುವ ಹಾಗೆ ಮಾತನಾಡಬಾರದು. ಅಷ್ಟಕ್ಕೂ ಲೋಕಸಭೆ ಚುನಾವಣೆಯಲ್ಲಿ ಮೊದಿ ಸರ್ಕಾರ ತನ್ನ ಸಾಧನೆಯನ್ನು ಮತಪಡೆಯುವ ಮಾನದಂಡವನ್ನಾಗಿ ಬಳಸಬೇಕೇ ಹೊರತು, ಇತಿಹಾಸವನ್ನಲ್ಲ"- ಯಶವಂತ್ ಸಿನ್ಹಾ

ಭೋಪಾಲ್ ಫಲಿತಾಂಶದಲ್ಲಿ ದೇಶದ ಭವಿಷ್ಯ!

ಭೋಪಾಲ್ ಫಲಿತಾಂಶದಲ್ಲಿ ದೇಶದ ಭವಿಷ್ಯ!

ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೆ ಇಡೀ ದೇಶದ ಭವಿಷ್ಯ ನಿರ್ಧಾರವಾಗಲಿದೆ. ನಮ್ಮ ದೇಶದಕ್ಕೆ ಸಾಮಾಜಿಕ ಸೌಹಾರ್ದತೆ ಬೇಕೋ, ಸಾಮಾಜಿಕ ವಿಭಜನೆ ಬೇಕಾ ಎಂಬುದು ನಿರ್ಧಾರವಾಗಲಿದೆ ಎಂದು ಸಿನ್ಹಾ ಹೇಳಿದರು. ಭೋಪಾಲ್ ನಲ್ಲಿ ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಬಿಜೆಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿದೆ.

English summary
Former BJP leader Yashwant Sinha on Prime minister Narendra Modi told that, Ex PM Atal Bihari Vajpayee has decided to dismiss Modi as Gujarat CM at the time of post Godhra riots, 2002. But Advani stopped Vajpayee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X