ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತನಾಡುವ ಮುನ್ನ ಹುಷಾರ್; ಇಲ್ಲದಿದ್ದರೆ ಬೀಳುತ್ತೆ ಪೊಲೀಸ್ ಕೇಸ್!

|
Google Oneindia Kannada News

ಭೂಪಾಲ್, ನವೆಂಬರ್ 11: ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ಇಡೀ ದೇಶವೇ ತಲೆ ಬಾಗಿದೆ. ಆದರೆ, ಅದರಲ್ಲೂ ಹುಳುಕು ಹುಡುಕಿದ ಆಸಾಮಿಗೆ ಈಗ ಸರಿಯಾಗಿ ಶಾಸ್ತಿಯಾಗಿದೆ. ಕೋರ್ಟ್ ಆದೇಶವನ್ನೇ ಒಪ್ಪಿಕೊಳ್ಳದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅಂತಾರಲ್ಲವಾ. ಈ ಆಸಾಮಿಯದ್ದು ಸೇಮ್ ಟು ಸೇಮ್ ವರಸೆ. ಇಡೀ ಊರಿಗೆ ಒಂದು ದಾರಿಯಾದರೆ, ಈ ವ್ಯಕ್ತಿಯದ್ದು ಇನ್ನೊಂದು ದಾರಿ. ಹೀಗೆ ವರ್ತಿಸಿದ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಾಬ್ರಿ ಮಸೀದಿ ಅಕ್ರಮವಾದರೆ ಅಡ್ವಾಣಿ ವಿಚಾರಣೆ ಏಕೆ? ಓವೈಸಿ ಕಿಡಿಬಾಬ್ರಿ ಮಸೀದಿ ಅಕ್ರಮವಾದರೆ ಅಡ್ವಾಣಿ ವಿಚಾರಣೆ ಏಕೆ? ಓವೈಸಿ ಕಿಡಿ

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಪವನ್ ಕುಮಾರ್ ಎಂಬ ವಕೀಲರು ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಜಹಾಂಗೀರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ಓವೈಸಿ ವಿರುದ್ಧ ದೂರು ದಾಖಲಿಸಲಾಗಿದೆ.

A Complaint Has Been Filed Against AIMIM Leader Asaduddin Owaisi

ಓವೈಸಿ ವಿರುದ್ಧ ದೂರು ಕೊಟ್ಟಿದ್ದೇಕೆ ಗೊತ್ತಾ?

ಅಯೋಧ್ಯೆ ರಾಮ ಮಂದಿರ ಕುರಿತು ಸುಪ್ರೀಂಕೋರ್ಟ್ ನವೆಂಬರ್.09ರಂದು ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದಿದ್ದ ಅಸಾದುದ್ದೀನ್ ಓವೈಸಿ, ನೀವು ಕೊಡುವ 5 ಎಕರೆ ಭೂಮಿಯ ಭಿಕ್ಷೆ ನಮಗೆ ಬೇಕಿಲ್ಲ ಎಂದು ಹೇಳಿಕೆ ನೀಡಿದ್ದರು. ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ತಮ್ಮ ಅಭಿಪ್ರಾಯ ತಿಳಿಸಿದ್ದ ಓವೈಸಿ, ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದರು. ಅಷ್ಟೇ ಅಲ್ಲದೇ, ನಮಗೆ ಮಸೀದಿ ಕಟ್ಟಲು ಹಣವಿಲ್ಲ ಎಂದಲ್ಲ. ನೀವು ಕೊಟ್ಟಿರುವ 5 ಎಕರೆ ಜಮೀನಿನ ಭಿಕ್ಷೆ ನಮಗೆ ಬೇಡವೇ ಬೇಡ ಎಂದು ಹೇಳಿಕೆ ನೀಡಿದ್ದರು.

ಅಯೋಧ್ಯಾ ತೀರ್ಪು: 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ ಎಂದ ಓವೈಸಿಅಯೋಧ್ಯಾ ತೀರ್ಪು: 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ ಎಂದ ಓವೈಸಿ

ಸುಪ್ರೀಂಕೋರ್ಟ್ ತೀರ್ಪು ನಾವು ಅಂದುಕೊಂಡಂತೆ ಬಂದಿಲ್ಲ. ಸಾಂವಿಧಾನದ ಮೇಲೆ ನಮಗೆ ನಂಬಿಕೆಯಿದ್ದು, ನಮ್ಮ ಲೀಗಲ್ ಕಮಿಟಿ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸಲಿದೆ. ಉತ್ತರ ಪ್ರದೇಶದಲ್ಲಿ ಒಂದು ಮಸೀದಿ ನಿರ್ಮಿಸುವ ತಾಕತ್ತು ನಮಗಿದೆ ಎಂದು ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

English summary
AIMIM Leader Statement About Supreme Court Ayodhya Verdict. Complaint Filed Against Asaduddin Owaisi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X