ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

700 ಕೋಟಿ ಜಿಎಸ್‌ಟಿ ವಂಚನೆ: ಐವರ ಬಂಧನ

|
Google Oneindia Kannada News

ಭೋಪಲ್‌, ಮೇ 30: ಮಧ್ಯಪ್ರದೇಶ ನಲ್ಲಿ ಪದೇ ಪದೇ ಜಿಎಸ್‌ಟಿ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದ ಬೆನ್ನಲ್ಲೇ ಈಗ ₹700 ಕೋಟಿ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಲ ವಂಚನೆಗೆ ಸಂಬಂಧಿಸಿದಂತೆ ಗುಜರಾತ್‌ನ ಐವರನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ನಕಲಿ ದಾಖಲೆಗಳು, ವಿಳಾಸಗಳು ಮತ್ತು ನಕಲಿ ಗುರುತುಗಳನ್ನು ಬಳಸಿಕೊಂಡು ಸುಮಾರು 500 ನಕಲಿ ಸಂಸ್ಥೆಗಳ ಜಾಲವನ್ನು ಸೃಷ್ಟಿಸುವ ಮೂಲಕ ನಕಲಿ ಜಿಎಸ್‌ಟಿ ಇನ್‌ಪುಟ್ ತೆರಿಗೆ ಕ್ರೆಡಿಟ್ (ಐಟಿಸಿ) ದಂಧೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಬೋಗಸ್ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಇನ್‌ವಾಯ್ಸ್‌ಗಳನ್ನು ನೀಡುವ ಮೂಲಕ ₹ 700 ಕೋಟಿಗೂ ಹೆಚ್ಚು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಸೃಷ್ಟಿಸಿ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣ ಕಳಪೆ ತನಿಖೆ: ಸಮೀರ್ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆಡ್ರಗ್ಸ್ ಪ್ರಕರಣ ಕಳಪೆ ತನಿಖೆ: ಸಮೀರ್ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆ

ಇಂದೋರ್‌ನಲ್ಲಿರುವ ಸೆಂಟ್ರಲ್ ಜಿಎಸ್‌ಟಿ ಕಮಿಷನರೇಟ್ ಮತ್ತು ಮಧ್ಯಪ್ರದೇಶ ಪೊಲೀಸರ ಸೈಬರ್ ಸೆಲ್ ಜಂಟಿ ತನಿಖೆಯಿಂದ ಆರೋಪಿಗಳು ವಿವಿಧ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಡಿಜಿಟಲ್ ವ್ಯಾಲೆಟ್ ಖಾತೆಗಳ ಮೂಲಕ ವಹಿವಾಟು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ಚಾನೆಲ್‌ಗಳನ್ನು ತಪ್ಪಿಸಲು ಆರೋಪಿಗಳು ಬಹು ಡಿಜಿಟಲ್ ವ್ಯಾಲೆಟ್ ಖಾತೆಗಳ ಮೂಲಕ ವಹಿವಾಟು ನಡೆಸುತ್ತಿದ್ದರು ಎಂದು ಸೈಬರ್ ಸೆಲ್ ಇಂದೋರ್‌ನ ಘಟಕ ಇನ್ಸ್‌ಪೆಕ್ಟರ್ ರಶೀದ್ ಖಾನ್ ಹೇಳಿದ್ದಾರೆ.

ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ದಾಖಲೆಗಳು ವಶ

ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ದಾಖಲೆಗಳು ವಶ

ಆರೋಪಿಗಳನ್ನು ಮೇ 25 ರಂದು ಗುಜರಾತ್‌ನ ಸೂರತ್‌ನಿಂದ ಬಂಧಿಸಲಾಯಿತು. ಪ್ರಮುಖ ಆಪರೇಟರ್ ಮತ್ತು ಅವರ ನಿಕಟ ಸಹಚರರನ್ನು ಸಿಜಿಎಸ್‌ಟಿ ಇಂದೋರ್ ಕಮಿಷನರೇಟ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇತರ ಮೂವರನ್ನು ಇಂದೋರ್‌ನಲ್ಲಿರುವ ಸೈಬರ್ ಸೆಲ್‌ನ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಸೂರತ್‌ನಲ್ಲಿ ಆರೋಪಿಗಳಿಗೆ ಸಂಪರ್ಕ ಕಲ್ಪಿಸಿರುವ ಸ್ಥಳದಿಂದ ನಕಲಿ ಸಂಸ್ಥೆಗಳಿಗೆ ಸಂಬಂಧಿಸಿದ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ದಾಖಲೆಗಳು, ಸೀಲುಗಳು ಮತ್ತು ಲೆಟರ್ ಪ್ಯಾಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳು 25-35 ವರ್ಷ ವಯಸ್ಸಿನವರಾಗಿದ್ದು, ಶಾಲೆಯನ್ನು ತೊರೆದವರು ಎಂದು ರೀಶದ್‌ ಖಾನ್ ಹೇಳಿದರು.

34 ಕೋಟಿ ರೂ. ಜಿಎಸ್‌ಟಿ ವಂಚನೆ

34 ಕೋಟಿ ರೂ. ಜಿಎಸ್‌ಟಿ ವಂಚನೆ

ಹಿಂದಿ ಚಿತ್ರ ನಟ ಅನುಪಮ್ ಖೇರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾದ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಅವರನ್ನು 34 ಕೋಟಿ ರೂ. ಜಿಎಸ್‌ಟಿ ವಂಚನೆ ಆರೋಪದಡಿ 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು ಗುಟ್ಟೆ ಅವರನ್ನು ಬಂಧಿಸಿ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು ಆಗಸ್ಟ್ 14ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

149 ನಕಲಿ ಜಿಎಸ್‌ಟಿ ಇನ್‌ವಾಯ್ಸ್‌

149 ನಕಲಿ ಜಿಎಸ್‌ಟಿ ಇನ್‌ವಾಯ್ಸ್‌

ಯಾವುದೇ ಸರಕು ಮತ್ತು ಸೇವೆಗಳನ್ನು ಒದಗಿಸದೆ ಇದ್ದರೂ ಬಿಲ್‌ಗಳು ಮತ್ತು ಇನ್‌ವಾಯ್ಸ್‌ಗಳನ್ನು ಬಳಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ಗಳನ್ನು ಪಡೆದುಕೊಂಡ ಆರೋಪದಲ್ಲಿ ಗುಟ್ಟೆ ವಿರುದ್ಧ ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 132 (1) ಸಿ ಅಡಿ ಪ್ರಕರಣ ದಾಖಲಿಸಲಾಗಿತ್ತು. ಗುಟ್ಟೆ ಅವರ ಕಂಪೆನಿ ವಿಆರ್‌ಜಿ ಡಿಜಿಟಲ್ ಕಾರ್ಪ್ ಪ್ರೈವೇಟ್ ಲಿ. ಹಾರಿಜಾನ್ ಔಟ್‌ಸೋರ್ಸ್ ಸಲ್ಯೂಷನ್ಸ್ ಕಂಪೆನಿಯಿಂದ ಅನಿಮಷೇನ್ ಮತ್ತು ಮಾನವ ಸೇವೆಗಳನ್ನು ಪಡೆದುಕೊಂಡಿದ್ದಕ್ಕಾಗಿ 34.37 ಕೋಟಿ ರೂ. ವೆಚ್ಚದ 149 ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಪಡೆದುಕೊಂಡಿತ್ತು ಎಂದು ಆರೋಪಿಸಲಾಗಿತ್ತು.

ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿ ವಂಚನೆ

ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿ ವಂಚನೆ

ಗುಟ್ಟೆ ಅವರು ಇದುವರೆಗೂ ಮೂರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾದ ಮೂಲಕ ಅವರು ನಿರ್ದೇಶಕರಾಗಿದ್ದರು. ಈ ಸಿನಿಮಾ ಡಿಸೆಂಬರ್ 21ರಂದು ಬಿಡುಗಡೆಯಾಗಿತ್ತು. ಗುಜರಾತ್‌ನಲ್ಲಿ ರಾಜ್ಯ ಸರಕು ಸೇವಾ ತೆರಿಗೆ ಇಲಾಖೆಯು ಭಯೋತ್ಪಾದನಾ ನಿಗ್ರಹ ದಳ ಸಹಯೋಗದೊಂದಿಗೆ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಕೋಟ್ಯಂತರ ರುಪಾಯಿ ಸರಕಾರಕ್ಕೆ ವಂಚಸಿದ ಪ್ರಕರಣ ವರದಿಯಾಗಿತ್ತು.

ಜಿಎಸ್‌ಟಿ ತಂಡದಿಂದ ನಿಲೇಶ್‌ ಪಟೇಲ್‌ ಬಂಧನ

ಜಿಎಸ್‌ಟಿ ತಂಡದಿಂದ ನಿಲೇಶ್‌ ಪಟೇಲ್‌ ಬಂಧನ

ಮಾಧವ್‌ ಕಾಪರ್‌ ಲಿಮಿಟೆಡ್‌ನ ಅಧ್ಯಕ್ಷನಾಗಿದ್ದ ನಿಲೇಶ್‌ ಪಟೇಲ್‌ ಬಂಧಿತನಾಗಿದ್ದ ವ್ಯಕ್ತಿ. ಈತ 137 ಕೋಟಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೇಡಿಟ್‌ ಪಡೆಯಲು 762 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್‌ ವಾಯ್ಸ್‌ಗಳನ್ನು ನೀಡಿ ಖಜಾನೆಗೆ ನಷ್ಟ ಉಂಟು ಮಾಡಿದ್ದನು. ಈ ಹಿಂದೆಯೂ ಸಹ ನಿಲೇಶ್‌ ಪಟೇಲ್‌ ಜಿಎಸ್‌ಟಿ ತಂಡ ಬಂಧಿಸಿತ್ತು. ಆದರೆ ಆ ವೇಳೆ ಜಿಎಸ್‌ಟಿ ಅಧಿಕಾರಿಗಳ ವಾಹನಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈ ಬಾರಿ ಎಟಿಎಸ್‌ ನೆರವು ಪಡೆದು ಜಿಎಸ್‌ಟಿ ಅಧಿಕಾರಿಗಳು ಪಟೇಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

(ಒನ್ಇಂಡಿಯಾ ಸುದ್ದಿ)

Recommended Video

Hardik Pandya, Team Indiaಗೆ ಮರಳಿ ಬಂದ ಕಥೆ | #cricket | OneIndia Kannada

English summary
Five people from Gujarat have been arrested in connection with an alleged Goods and Services Tax (GST) credit fraud to the tune of ₹ 700 crore, Madhya Pradesh police said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X