ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 95ರಷ್ಟು ಶ್ವಾಸಕೋಶದ ಸೋಂಕು; ಸಾವು ಗೆದ್ದ ಮಹಿಳೆ!

|
Google Oneindia Kannada News

ನವದೆಹಲಿ, ಏಪ್ರಿಲ್ 27; ಕೋವಿಡ್ 2ನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ವಿವಿಧ ರಾಜ್ಯಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿದೆ, ಇವುಗಳ ನಡುವೆಯೂ ಭರವಸೆ ಮೂಡಿಸುವ ಪ್ರಕರಣಗಳು ಸಹ ಇವೆ.

ಮಧ್ಯ ಪ್ರದೇಶದ ಉಷಾ ನಿಗಮ್ (62) ಕೋವಿಡ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಸಹಕಾರಿ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಉಷಾ ಕೋವಿಡ್ ವಿರುದ್ಧ ಗೆದ್ದಿರುವುದು ಅಷ್ಟು ಸುಲಭದ ಮಾತಲ್ಲ.

ಕೊರೊನಾ ಸೋಂಕಿಗೆ ವೈದ್ಯ ಬಲಿ: ಶ್ವಾಸಕೋಶ ಕಸಿ ವಿಳಂಬವಾಗಿದ್ದೇಕೆ? ಕೊರೊನಾ ಸೋಂಕಿಗೆ ವೈದ್ಯ ಬಲಿ: ಶ್ವಾಸಕೋಶ ಕಸಿ ವಿಳಂಬವಾಗಿದ್ದೇಕೆ?

ಶೇ 95ರಷ್ಟು ಶ್ವಾಸಕೋಶದ ಸೋಂಕು ಹೊಂದಿದ್ದ ಉಷಾ ನಿಗಮ್ ಬದುಕುವ ಸಾಧ್ಯತೆ ಇಲ್ಲ ಎಂದು ಚಿಕಿತ್ಸೆ ನೀಡುವ ವೈದ್ಯರು ಕುಟುಂಬ ಸದಸ್ಯರಿಗೆ ಹೇಳಿದ್ದರು. 80 ದಿನ ಆಕ್ಸಿಜನ್ ನೆರವಿನಲ್ಲಿ, 50 ದಿನ ಐಸಿಯುನಲ್ಲಿದ್ದ ಉಷಾ ವೈದ್ಯರಿಗೆ ಅಚ್ಚರಿ ಮೂಡಿಸಿದ್ದಾರೆ.

Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!Video: ದೆಹಲಿ ಆಸ್ಪತ್ರೆ ಬಳಿ ಕಾರಿನ ಒಳಗೆ ರೋಗಿ, ಕಾರಿನ ಹೊರಗೆ ಆಕ್ಸಿಜನ್!

62 Year Old Women With 95 Per Cent Lungs Infection Beat COVID

ಸಹೋದರಿಯನ್ನು ಕಳೆದುಕೊಂಡಿದ್ದ ಉಷಾ ನಿಗಮ್ ಅವರ ಮನೆಗೆ ಅಂತಿಮ ವಿಧಿವಿಧಾನಕ್ಕೆ ಹೋಗಿದ್ದರು. ಜ್ವರ ಮತ್ತು ಕೆಮ್ಮು ಕಂಡುಬಂದ ಹಿನ್ನಲೆಯಲ್ಲಿ ಅಕ್ಟೋಬರ್ 20ರಂದು ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ದೃಢವಾದ ಬಳಿಕ ಮಹಾದೇವ ಆಸ್ಪತ್ರೆ ಕೋವಿಡ್‌ ವಾರ್ಡ್‌ಗೆ ದಾಖಲಾಗಿದ್ದರು.

ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ ಕೋವಿಡ್ 19: ಕರ್ನಾಟಕ ಸೇರಿ 10 ರಾಜ್ಯಗಳಿಂದ ಶೇ.69.1ರಷ್ಟು ಹೊಸ ಪ್ರಕರಣ

ಮೊದಲ ಸಿಟಿ ಸ್ಕ್ಯಾನ್‌ನಲ್ಲಿ ಶ್ವಾಸಕೋಶದ ಯಾವುದೇ ಸೋಂಕು ಕಂಡು ಬರಲಿಲ್ಲ. ಆದರೆ, ಅಕ್ಟೋಬರ್ 24ರಂದು ಉಷಾ ಅವರ ಸ್ಥಿತಿ ಗಂಭೀರವಾಯಿತು. ಅವರನ್ನು ಐಸಿಯುಗೆ ಶಿಫ್ಟ್‌ ಮಾಡಲಾಯಿತು.

6 ರೆಮ್ಡೆಸಿವಿರ್ ಇಂಜೆಕ್ಷನ್ ಪಡೆದರೂ ಉಷಾ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಅಕ್ಟೋಬರ್ 29ರಂದು ಅವರನ್ನು ಇಂದೋರ್‌ನ ಅರೆಬಿಂದೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಸಿಟಿ ಸ್ಕ್ಯಾನ್ ಮಾಡಿದಾಗ ಶೇ 65ರಷ್ಟು ಶ್ವಾಸಕೋಶದ ಸೋಂಕು ಪತ್ತೆಯಾಯಿತು.

ಉಷಾ ಅವರ ಮಕ್ಕಳು, ಮೊಮ್ಮಕ್ಕಳು ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಭೇಟಿ ಕೊಟ್ಟು ಧೈರ್ಯ ತುಂಬಿದರು. ಮನೆಯ ಆಹಾರವನ್ನೇ ನೀಡಲು ಆರಂಭಿಸಿದ್ದರು. ವೈದ್ಯರು ಉಳಿಯುವ ಸಾಧ್ಯತೆ ಕಡಿಮೆ ಎಂದರು. ಅಂತಿಮವಾಗಿ ನವೆಂಬರ್ 12ರಂದು ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿತು. ಅವರನ್ನು ನವೆಂಬರ್ 14ರಂದು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಯಿತು.

ನವೆಂಬರ್ 26ರಂದು ನಡೆಸಿದ ಸಿಟಿ ಸ್ಕ್ಯಾನ್‌ನಲ್ಲಿ ಶ್ವಾಸಕೋಶದ ಸೋಂಕು ಶೇ 95 ಆಗಿತ್ತು. ಡಿಸೆಂಬರ್ 2ರಂದು ಕುಟುಂಬ ಸದಸ್ಯರು ಉಷಾ ಅವರನ್ನು ಮನೆಗೆ ಕರೆದುಕೊಂಡು ಹೋದರು.

ಮನೆಯಲ್ಲಿಯೇ ಆಕ್ಸಿಜನ್ ನೀಡುತ್ತಾ ಫೆಬ್ರವರಿ 20ರ ತನಕ ನೋಡಿಕೊಂಡರು. "ಮನೆಯ ಊಟ, ಪಥ್ಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡಿತು ಎಂದು ಉಷಾ ಹೇಳುತ್ತಾರೆ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಕೆಲವು ದಿನಗಳ ಹಿಂದೆ ಹೊಸ ಜೀವನ ಪಡೆದ ಉಷಾ ನಿಗಮ್ ಅವರನ್ನು ಅಂಭಿನಂದಿಸಿದ್ದಾರೆ.

English summary
62-year-old Usha Nigam (62) from Madhya Pradesh has defeated Covid-19 with 95% lungs infection. She spent 80 days on oxygen support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X