ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ 60 ಗಂಟೆಗಳ ವೀಕೆಂಡ್ ಲಾಕ್‌ಡೌನ್ ಘೋಷಣೆ

|
Google Oneindia Kannada News

ಭೋಪಾಲ್, ಏಪ್ರಿಲ್ 8: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ 60 ಗಂಟೆಗಳ ವೀಕೆಂಡ್ ಲಾಕ್‌ಡೌನ್ ಘೋಷಿಸಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ, ರಾಜ್ಯದ ಪ್ರಮುಖ ನಗರಗಳಲ್ಲಿ ನಾಳೆಯಿಂದ ಏ.12 ವರೆಗೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಸಂಪೂರ್ಣ ಲಾಕ್ಡೌನ್ ಅನ್ನು ಘೊಷಿಸಲಾಗಿದೆ.

ವಿಡಿಯೋ; ಮಾಸ್ಕ್‌ ಜಾರಿದ್ದಕ್ಕೆ ಆಟೋ ಚಾಲಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸರುವಿಡಿಯೋ; ಮಾಸ್ಕ್‌ ಜಾರಿದ್ದಕ್ಕೆ ಆಟೋ ಚಾಲಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸರು

ಜೊತೆಗೆ ರತ್ಲಮ್, ಬೆತುಲ್, ಖರ್ಗಾಂವ್, ಗ್ವಾಲಿಯರ್, ಉಜ್ಜೈನ್, ವಿದಿಶಾ, ನರಸಿಂಗ್ಪುರ್, ಇಂದೋರ್, ಭೋಪಾಲ್, ಜಬಲ್ಪುರ್ ನಗರಗಳಲ್ಲೂ ಸಹ ಕನಿಷ್ಠ 3 ದಿನಗಳ ಲಾಕ್ಡೌನ್ ಜಾರಿ ಮಾಡಿದ ಮಾಹಿತಿ ದೊರಕಿದೆ.

60 Hour Weekend Lockdown In All Madhya Pradesh Cities, Says CM Shivraj Singh Chouhan

ಇನ್ನೂ ಕೆಲ ನಗರಗಳಲ್ಲಿ 7 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿನ್ನೆ ದೇಶಾದ್ಯಂತ 1 ಲಕ್ಷ 26 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಚಿಂದ್ವಾರದಲ್ಲಿ 7 ದಿನ ಪೂರ್ಣ ಲಾಕ್‌ಡೌನ್ ಹಾಕಲಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಲಾಕ್ಡೌನ್ ಶುಕ್ರವಾರ ಸಂಜೆ 6 ಗಂಟೆಯಿಂದ ಆರಂಭವಾಗಲಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಹೆಚ್ಚೆಚ್ಚು ಸೋಂಕಿರುವ ಪ್ರದೇಶಗಳಲ್ಲಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು ಸಭೆ ನಡೆಸಲಿವೆ. ಸಭೆ ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

English summary
A lockdown will be enforced in all cities of Madhya Pradesh from 6 pm on Friday to 6 am on Monday to check the spread of the coronavirus infection, Chief Minister Shivraj Singh Chouhan said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X