ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಕಾಲುವೆಗೆ ಬಸ್ ಉರುಳಿ 32 ಮಂದಿ ಪ್ರಯಾಣಿಕರ ಸಾವು

|
Google Oneindia Kannada News

ಸಿಧಿ,ಫೆಬ್ರವರಿ 16: ಕಾಲುವೆಗೆ ಬಸ್ ಉರುಳಿ 32 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ.

ಈ ಪ್ರದೇಶದ ಭೋಪಾಲ್‌ನಿಂದ 560 ಕಿ.ಮೀ ದೂರದಲ್ಲಿದೆ. ಸೇತುವೆ ಮೇಲೆ ಸಾಗುತ್ತಿದ್ದ ಬಸ್ ಉರುಳಿ ಕಾಲುವೆಗೆ ಬಿದ್ದಿದೆ.

ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ಭೀಕರ ಅಪಘಾತ, 5 ಮಂದಿ ಸಾವುಮುಂಬೈ-ಪುಣೆ ಎಕ್ಸ್ ಪ್ರೆಸ್ ವೇ ಭೀಕರ ಅಪಘಾತ, 5 ಮಂದಿ ಸಾವು

32 ಮಂದಿ ಮೃತಪಟ್ಟಿದ್ದು, ಮತ್ತಷ್ಟು ಮಂದಿ ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತ ಸಂಭವಿಸುವ ವೇಳೆ ಬಸ್‌ನಲ್ಲಿ 60 ಮಂದಿ ಪ್ರಯಾಣಿಕರಿದ್ದರು.
ಈ ಅಪಘಾತದಿಂದಾಗಿ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳಬೇಕಾಗಿದ್ದ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ.

32 Dead As Bus Falls Into Canal In Madhya Pradesh, More Feared Drowned

ಪ್ರತ್ಯೇಕ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ.ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಖಪೋಲಿ ಬಳಿ ಮಂಗಳವಾರ ಮುಂಜಾನೆ ಟ್ರಕ್ ಹಾಗೂ ಇನ್ನೆರಡು ವಾಹನ ಡಿಕ್ಕಿಯಾಗಿದ್ದು, ಐವರು ಮೃತಪಟ್ಟು, ಐವರಿಗೆ ತೀವ್ರ ಗಾಯಗಳಾಗಿವೆ.

ಮೃತರ ಪೈಕಿ ನವಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್ ಎಂಎಂಸಿ) ವೈದ್ಯರು ಸೇರಿದ್ದಾರೆ. ವೈದ್ಯರು ಹಾಗೂ ಕುಟುಂಬಸ್ಥರು ಇದ್ದ ಕಾರು ಟ್ರಕ್ ಡಿಕ್ಕಿಯಾಗಿದೆ. ಮೃತರನ್ನು ಡಾ ವೈಭವ್ ಝಾಂಜರೆ, ಅವರ ತಾಯಿ ಹಾಗೂ ಪತ್ನಿ ಮತ್ತು ಪುತ್ರಿ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

English summary
Thirty-two people have died in Madhya Pradesh's Sidhi district, about 560 km from state capital Bhopal, after a bus fell off a bridge into a canal; many more are feared drowned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X