• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಕೊಲೆ ಯತ್ನ

|

ಭೋಪಾಲ್, ಜನವರಿ 20: 18 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಯುವಕರು ಆಕೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಜನವರಿ 19ರ ಮಂಗಳವಾರ ರಾತ್ರಿ ನಡೆದಿದೆ.

ಟ್ಯೂಷನ್ ಕ್ಲಾಸ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ತನ್ನನ್ನು ಐವರು ಯುವಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಯುವತಿ ದೂರು ನೀಡಿದ್ದಾಳೆ. ಅತ್ಯಾಚಾರ ನಡೆಸಿದ ನಂತರ ಗೋಣಿ ಚೀಲದಲ್ಲಿ ತುಂಬಿ ರೈಲ್ವೆ ಹಳಿ ಮೇಲೆ ಎಸೆದು ಹೋಗಿದ್ದು, ತಾನು ಕಷ್ಟಪಟ್ಟು ಪಾರಾಗಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಟ್ಯೂಷನ್ ಕ್ಲಾಸ್ ಮುಗಿಸಿ ಬರುವಾಗ ತನ್ನ ಗೆಳೆಯ ಅಕ್ಷಯ್ ಸಿಕ್ಕಿದ್ದು, ಆನಂತರ ಅಕ್ಷಯ್ ಹಾಗೂ ಆತನ ಜೊತೆಗಿದ್ದವರು ತನಗೆ ಮತ್ತು ಬರಿಸುವಂತೆ ಮಾಡಿದರು. ಆಮೇಲೆ ಅತ್ಯಾಚಾರ ನಡೆಸಿ ಚಾಕುವಿನಿಂದ ಇರಿದು ಮೂಟೆಗೆ ತುಂಬಿದರು. ರೈಲ್ವೆ ಹಳಿ ಮೇಲೆ ಎಸೆದು ಕೊಲೆಗೆ ಯತ್ನಿಸಿದರು. ನಾನು ತಪ್ಪಿಸಿಕೊಂಡು ಸ್ನೇಹಿತರಿಗೆ ಮಾಹಿತಿ ನೀಡಿದೆ ಎಂದು ದೂರು ದಾಖಲಿಸಿದ್ದಾಳೆ.

ಆದರೆ ಆಕೆಯ ಹೇಳಿಕೆಗೆ ಸೂಕ್ತ ಸಾಕ್ಷ್ಯಾಧಾರ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ.

English summary
An 18-year-old girl was allegedly gang-raped and stabbed by 5 youths in Madhya Pradesh’s Indore district on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X