• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಂದೆಯ ಕೊಲೆ ಮಾಡಿ, ಪೊಲೀಸರಿಗೆ ಕರೆ ಮಾಡಿದ ಬಾಲಕಿ

|

ಭೋಪಾಲ್‌, ಅಕ್ಟೋಬರ್ 23: ಹದಿನಾರು ವರ್ಷದ ಮಗಳು ತಂದೆಯನ್ನು ಹತ್ಯೆ ಮಾಡಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

ತನ್ನ ತಾಯಿಯ ಮೇಲೆ ತಂದೆ ನಡೆಸುತ್ತಿರುವ ಹಲ್ಲೆಯನ್ನು ಸಹಿಸಲಾಗದೆ ಮಗಳು ತಂದೆಗೆ ಹೊಡೆದು ಹತ್ಯೆ ಮಾಡಿದ್ದು, ಬಳಿಕ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ.

ಪ್ರಿಯಕರನನ್ನು ಭೇಟಿಯಾಗಲು ನಿರಾಕರಿಸಿದ್ದಕ್ಕೆ ಅತ್ಯಾಚಾರ, ಕೊಲೆ

ನಿತ್ಯ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ, ತುಂಬಾ ವರ್ಷಗಳಿಂದ ಇದನ್ನು ನೋಡಿ ನೋಡಿ ಸಾಕಾಗಿತ್ತು ಹಾಗಾಗಿ ಕೊಲೆ ಮಾಡಿರುವುದಾಗಿ ಬಾಲಕಿ ತಿಳಿಸಿದ್ದಾಳೆ.

ತಂದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ, ಮೂವರು ಹಿರಿಯ ಅಣ್ಣನ ಮೇಲೆ ಅವಲಂಬಿತವಾಗಿದ್ದರು, ಆದರೂ ಆತ ಕುಡಿಯುವುದನ್ನು ಬಿಟ್ಟಿರಲಿಲ್ಲ. ಎಲ್ಲರೂ ಕುಳಿತು ಮಗನ ಮದುವೆ ಬಗ್ಗೆ ಮಾತನಾಡುತ್ತಿರುವಾಗ ಕಿರುಚಾಡುತ್ತಾ ಆತ ಬಂದಿದ್ದ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದ.

ಅಲ್ಲೇ ಇದ್ದ ಕ್ರಿಕೆಟ್ ಬ್ಯಾಟ್‌ನಿಂದ ತಂದೆಯ ಮೈಯಿಂದ ರಕ್ತ ಬಸೆಯುವವರೆಗೂ ಹೊಡೆದಿದ್ದಾಳೆ. ಇನ್ನು ಆತ ಸತ್ತನೆಂದು ತಿಳಿಯುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾಳೆ. ಆಕೆಯ ಮೇಲೆ ಪ್ರಕರಣ ದಾಖಲಾಗಿದೆ.

English summary
A 16-year-old girl in Madhya Pradesh's Bhopal allegedly killed her father for assaulting her mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X