ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದನ್ನು ಕೊಂದು, ತಿಂದ ಮತ್ತೊಂದು ಹುಲಿ

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಮಾರ್ಚ್ 22: ವಯಸ್ಕ ಹುಲಿಯೊಂದನ್ನು ಮತ್ತೊಂದು ಹುಲಿಯು ಕೊಂದು, ಭಕ್ಷಿಸಿದ ಘಟನೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಒಂದು ಹುಲಿಯು ಮತ್ತೊಂದನ್ನು ಭಕ್ಷಿಸಿದ ಘಟನೆ ಇದೇ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ವರದಿ ಆಗುತ್ತಿದೆ.

ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಎಲ್.ಕೃಷ್ಣಮೂರ್ತಿ ಮಾತನಾಡಿ, ಪ್ರಾಥಮಿಕ ಹಂತದ ತನಿಖೆ ಪ್ರಕಾರ ಹನ್ನೆರಡು ವರ್ಷದ ಹುಲಿಯ ಜತೆಗೆ ಮತ್ತೊಂದು ಹುಲಿಯು ಕಾದಾಡಿ, ಕೊಂದಿದೆ. ಹುಲಿಗಳು ಸಾಮಾನ್ಯವಾಗಿ ಇಂತಿಷ್ಟು ಪ್ರದೇಶ ತನ್ನದು ಎಂದು ಗುರುತು ಮಾಡಿಕೊಳ್ಳುತ್ತವೆ. ಅದರಲ್ಲಿ ಉಳಿದವು ಬರುವುದಕ್ಕೆ ಬಿಡುವುದಿಲ್ಲ. ಆದರೆ ಅಂಥ ಪ್ರದೇಶದ ಪಾರಮ್ಯಕ್ಕೆ ಸಂಬಂಧಿಸಿದ ಹಾಗೆ ಹೊಡೆದಾಟ ಆಗಿರಬಹುದು ಎಂದು ಹೇಳಿದ್ದಾರೆ.

ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ..ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ..

ಈಗ ಸಾವನ್ನಪ್ಪಿದ ಹುಲಿಯನ್ನು T 36 ಎಂದು ಗುರುತಿಸಲಾಗಿದೆ. ಅದರ ಕಳೇಬರದ ಅವಶೇಷ ಗಸ್ತು ತಂಡಕ್ಕೆ ಕಂಡುಬಂದಿದೆ. ಅದನ್ನು ಕೊಂದ ಹುಲಿಯು ಎಂಟು ವರ್ಷ ಪ್ರಾಯದ T 56 ಎಂದು ಗುರುತಿಸಲಾಗಿದೆ. ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಕಿಸ್ಲಿ ವಲಯದಲ್ಲಿ ಮಗರ್ ನಲಾ ಅರಣ್ಯ ಪ್ರದೇಶದಲ್ಲಿ ಕಳೇಬರದ ಅವಶೇಷವನ್ನು ಭಕ್ಷಿಸುವಾಗ T 56 ಕಂಡುಬಂದಿದೆ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

12 year old tiger killed, eaten by another in MPs Kanha Tiger Reserve

ಸದ್ಯಕ್ಕೆ ಅರಣ್ಯ ಇಲಾಖೆ ತಂಡವು ಈ ಪ್ರದೇಶದಲ್ಲಿ ಪರಿಶಿಲನೆ ನಡೆಸುತ್ತಿದೆ. ಕಳೆದ ಜನವರಿಯ ಮೂರನೇ ವಾರದಲ್ಲಿ ಇದೇ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಂಡು ಹುಲಿಯೊಂದು ಹೆಣ್ಣು ಹುಲಿಯನ್ನು ಕೊಂದು, ಭಕ್ಷಿಸಿತ್ತು.

English summary
An adult tiger was killed and eaten by another tiger in the Kanha national park in Madhya Pradesh, an official said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X