ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಬ್ಲೀಗ್ ಮಂದಿಯನ್ನು ಹುಡುಕಲು ಹೋದ 10 ಪೊಲೀಸರಿಗೆ ಕೊರೊನಾ ಸೋಂಕು?

|
Google Oneindia Kannada News

ಭೋಪಾಲ್, ಏಪ್ರಿಲ್ 8: ದೇಶದಲ್ಲಿ ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಲಾಕ್‌ಡೌನ್‌ ಮಾಡಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರಬರದಂತೆ ನಿಯಂತ್ರಿಸಲು ಸಾವಿರಾರು ಪೊಲೀಸರು ಬೀದಿಗೆ ಬಂದು ಕೆಲಸ ಮಾಡ್ತಿದ್ದಾರೆ.

ದುರಂತ ಅಂದ್ರೆ, ಪೊಲೀಸರಿಗೆ ಕೊರೊನಾ ವೈರಸ್‌ ಅಂಟಿಕೊಂಡಿದೆ. ಮಧ್ಯ ಪ್ರದೇಶದ 10 ಜನ ಪೊಲೀಸರಿಗೆ ಕೊವಿಡ್ 19 ದೃಢವಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಬಹುಶಃ ತಬ್ಲೀಗ್ ಜಮಾತ್‌ನಲ್ಲಿ ಭಾಗಹಿಸಿದ್ದ ವ್ಯಕ್ತಿಗಳಿಂದಲೇ ಪೊಲೀಸರಿಗೆ ಸೋಂಕು ತಗುಲಿರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ತಬ್ಲೀಗ್ ಜಮಾತ್; ಬೆಂಗಳೂರಲ್ಲಿ 19 ಜನರ ವಿರುದ್ಧ ಎಫ್‌ಐಆರ್ತಬ್ಲೀಗ್ ಜಮಾತ್; ಬೆಂಗಳೂರಲ್ಲಿ 19 ಜನರ ವಿರುದ್ಧ ಎಫ್‌ಐಆರ್

ಕೆಲವು ಅರೋಗ್ಯ ಅಧಿಕಾರಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈಗ ಪೊಲೀಸರಿಗೆ ತಗುಲಿದೆ. ಭೋಪಾಲ್‌ ನಗರದಲ್ಲಿ ಒಟ್ಟು 38 ಜನರ ಆರೋಗ್ಯ ಸಿಬ್ಬಂದಿಗೆ ಕೊವಿಡ್ 19 ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

10 Policemen Tested Corona Positive From Tablighi Jamaat Men

ಅಂದ್ಹಾಗೆ, ಹತ್ತು ಜನ ಪೊಲೀಸರ ಪೈಕಿ ಓರ್ವ ಎಸ್‌ಪಿ, ಸಬ್ ಇನ್ಸ್ ಪೆಕ್ಟರ್ ಹಾಗೂ 8 ಜನ ಪೊಲೀಸ್ ಪೇದೆಗಳು ಇದ್ದಾರೆ. ಹಾಗು ಅವರ ಕುಟುಂಬಗಳಲ್ಲಿ ಐದು ಜನರಿಗೆ ಸೋಂಕು ದೃಢವಾಗಿದೆ. ಈ ಪೊಲೀಸರ ಜೊತೆ ಸಂಪರ್ಕದಲ್ಲಿದ್ದವರ ಮೇಲೂ ನಿಗಾ ವಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ಐಜಿ ಉಪೇಂದ್ರ ಜೈನ್ ಈ ಬಗ್ಗೆ ಮಾತನಾಡಿದ್ದು ''ತಬ್ಲೀಗ್ ಜಮಾತ್‌ನಲ್ಲಿ ಭಾಗವಹಿಸಿದ್ದ ವ್ಯಕ್ತಿಗಳ ನಗರದ ಹಲವು ಮಸೀದಿಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಅವರನ್ನು ಹುಡುಕಲು ಹೋದ ಪೊಲೀಸರಿಗೆ ಸೋಂಕು ತಗುಲಿರಬಹುದು' ಎಂದು ಅಭಿಪ್ರಾಯ ಪಟ್ಟಿದ್ದಾರೆ. 'ನಗರದ ಜಹಂಗೀರ್‌ಬಾದ್ ಮತ್ತು ಐಶ್‌ಬಾಗ್‌ ಪೊಲೀಸ್ ಠಾಣೆಯ ಸಿಬ್ಬಂದಿ ಈ ಹುಡುಕಾಟದಲ್ಲಿ ಪಾಲ್ಗೊಂಡಿದ್ದರು. ಸದ್ಯ ಅವರೆಲ್ಲರೂ ಟಿಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಳಿದುಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

ಇಟಲಿ, ಸ್ಪೇನ್ ಬಳಿಕ 'ನರಕ'ದ ಬಾಗಿಲು ತಟ್ಟಿದ ಮತ್ತೊಂದು ದೇಶಇಟಲಿ, ಸ್ಪೇನ್ ಬಳಿಕ 'ನರಕ'ದ ಬಾಗಿಲು ತಟ್ಟಿದ ಮತ್ತೊಂದು ದೇಶ

ಅಂದ್ಗಾಹೆ, 7 ವಿದೇಶಿ ಜಮಾತ್‌ಗಳು ಸೇರಿದಂತೆ 32 ಜಮಾತ್‌ಗಳು ಭೋಪಾಲ್‌ನ ವಿವಿಧ ಸ್ಥಳಗಳಲ್ಲಿ ಉಳಿದುಕೊಂಡಿದ್ದು, ಪ್ರತಿ ಜಮಾತ್‌ನಲ್ಲಿ ಸುಮಾರು 12 ವ್ಯಕ್ತಿಗಳು ಸೇರಿದ್ದಾರೆ. ಈ ತಬ್ಲೀಗ್ ಜಮಾತ್ ಸದಸ್ಯರಲ್ಲಿ, ಕನಿಷ್ಠ 20 ಮಂದಿ ಕೋವಿಡ್ -19 ಪಾಸಿಟಿವ್ ಹೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

English summary
10 madhya pradesh police tested positive of coronavirus after they contacted from tablighi jamaat men.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X