ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಲ್ಟ್‌ ನ್ಯೂಸ್‌ನ ಜುಬೈರ್‌ನನ್ನು ಬೆಂಗಳೂರಿಗೆ ಕರೆ ತಂದ ಪೊಲೀಸರು

|
Google Oneindia Kannada News

ಬೆಂಗಳೂರು, ಜೂ. 30: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಆಲ್ಟ್‌ ನ್ಯೂಸ್‌ನ ಪತ್ರಕರ್ತ ಮೊಹಮ್ಮದ್‌ ಜುಬೈರ್‌ನನ್ನು ದೆಹಲಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಸೋಮವಾರ ಬಂಧಿಸಲ್ಪಟ್ಟ ಜುಬೈರ್‌ನನ್ನು ಪ್ರಕರಣದ ತನಿಖೆಯ ಭಾಗವಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಮರುಪಡೆಯಲು ದೆಹಲಿ ಪೊಲೀಸರು ಬೆಂಗಳೂರಿಗೆ ಕರೆ ತಂದರು.

ಪತ್ರಕರ್ತ ಜುಬೈರ್ ಬಂಧನ: ಬಿಜೆಪಿ ಸೇಡಿನ ರಾಜಕಾರಣ ಎಂದು ಆಕ್ರೋಶಪತ್ರಕರ್ತ ಜುಬೈರ್ ಬಂಧನ: ಬಿಜೆಪಿ ಸೇಡಿನ ರಾಜಕಾರಣ ಎಂದು ಆಕ್ರೋಶ

ಅನಾಮಧೇಯ ಟ್ವಿಟರ್ ಬಳಕೆದಾರರೊಬ್ಬರು ದೆಹಲಿ ಪೊಲೀಸರಿಗೆ ಮೊಹಮ್ಮದ್‌ ಟ್ವಿಟ್‌ನ್ನು ಟ್ಯಾಗ್ ಮಾಡಿದ ನಂತರ ಅವರ ಟ್ವೀಟ್ ಹಿಂದೂ ದೇವರನ್ನು ಅವಮಾನಿಸಿದೆ ಎಂದು ಹೇಳುವ ಮೂಲಕ ಸತ್ಯ ಪರಿಶೀಲನಾ ಸೈಟ್ ಆಲ್ಟ್‌ನ್ಯೂಸ್‌ನ ಸಹ ಸಂಸ್ಥಾಪಕರ ಮೊಹಮ್ಮದ್‌ ಜುಬೈರ್‌ ವಿರುದ್ಧ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Zubair of Alt News Was Brought to Bengaluru by Delhi Police

ಇದೀಗ ಜುಬೈರ್‌ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬಂಧನದ ನಂತರ ಪೊಲೀಸರು ಆತನ ಫೋನ್ ಅನ್ನು ವಶಪಡಿಸಿಕೊಂಡಾಗ ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಹೊಂದಿಲ್ಲ ಎಂದು ಅವರು ಹೇಳಿದರು.

Breaking: ಆಲ್ಟ್‌ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್ ಬಂಧನ Breaking: ಆಲ್ಟ್‌ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್ ಬಂಧನ

ಗುರುವಾರ, ನಾಲ್ವರ ಪೊಲೀಸ್ ತಂಡವು ಜುಬೈರ್ ಜೊತೆ ಬೆಂಗಳೂರಿಗೆ ಆಗಮಿಸಿದ್ದು, ಅವರ ಮನೆಯಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

Zubair of Alt News Was Brought to Bengaluru by Delhi Police

ಪ್ರಕರಣ ಸಂಬಂಧದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಜುಬೈರ್‌ ಅವರ ಇತ್ತೀಚಿನ ಫೋನ್ ಅನ್ನು ಫಾರ್ಮ್ಯಾಟ್ ಮಾಡಲಾಗಿದೆ ಹಾಗೂ ಅವರು ವಿಚಾರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು. ತಂಡವೊಂದು ಅವರ ಮನೆಯಲ್ಲಿದ್ದು, ಪ್ರಕರಣಕ್ಕೆ ನೆರವಾಗುವ ಎಲ್ಲ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಲಿದೆ. ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಬಳಸಲಾದ ಲ್ಯಾಪ್‌ಟಾಪ್ ಮತ್ತು ಇನ್ನೊಂದು ಫೋನ್‌ಗಾಗಿ ನಾವು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರ ಸೈಬರ್ ಕ್ರೈಂ ಘಟಕವು ಮಧ್ಯಾಹ್ನದ ಸುಮಾರಿಗೆ ನಗರಕ್ಕೆ ಬಂದು ಜುಬೈರ್ ಮನೆಗೆ ಹೋಗಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಮೊಹಮ್ಮದ್‌ ಜುಬೈರ್‌ನನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ ಪ್ರತಿಖ್‌ ಸಿನ್ಹಾ ಜುಬೈರ್‌ ಅವರನ್ನು ಬೇರೆ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ಕಡ್ಡಾಯ ನೋಟಿಸ್‌ ನೀಡದೇ ಬಂಧಿಸಲಾಗಿದ್ದು, ಎಫ್‌ಐಆರ್‌ ಪ್ರತಿಯನ್ನು ಪದೇ ಪದೇ ಕೇಳಿದರೂ ನೀಡುತ್ತಿಲ್ಲ ಎಂದು ಟ್ವಿಟ್‌ ಮಾಡಿದ್ದಾರೆ.

Recommended Video

Virat Kohli ಅಭ್ಯಾಸದ ನಂತರ ಮಾಡಿದ್ದೇನು ಗೊತ್ತೇ | Oneindia Kannada

English summary
Alt News journalist Mohammed zubair brought to Bengaluru by the Delhi Police. He arrested on charges of endangering religious sentiments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X