ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾಕಿಷ್ಟು ತಡ ಎಂದು ಕೇಳಿದ್ದಕ್ಕೆ ಯುವತಿಯ ಮೂಗು ಮುರಿದ ಜೊಮ್ಯಾಟೊ ಡೆಲಿವರಿ ಬಾಯ್

|
Google Oneindia Kannada News

ಬೆಂಗಳೂರು, ಮಾರ್ಚ್ 10: ಯುವತಿಯೊಬ್ಬಳು ಜೊಮ್ಯಾಟೊ ಮೂಲಕ ಆಹಾರ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು.

ಆದರೆ ಜೊಮ್ಯಾಟೊ ಡೆಲಿವರಿ ಬಾಯ್ ತಡವಾಗಿ ಆಹಾರವನ್ನು ತಂದಿದ್ದ, ಯಾಕೆ ಇಷ್ಟು ಲೇಟ್ ಆಯ್ತು ಎಂದು ಕೇಳಿದ್ದಕ್ಕೆ ಯುವತಿಯ ಮೇಲೆ ಹಲ್ಲೆ ನಡೆಸಿ ಮೂಗು ಮುರಿದಿದ್ದಾನೆ.

ಹೊಸ ವರ್ಷಕ್ಕೆ ಜೊಮ್ಯಾಟೊ ದಾಖಲೆ: ನಿಮಿಷಕ್ಕೆ 4,100 ಆರ್ಡರ್ಹೊಸ ವರ್ಷಕ್ಕೆ ಜೊಮ್ಯಾಟೊ ದಾಖಲೆ: ನಿಮಿಷಕ್ಕೆ 4,100 ಆರ್ಡರ್

ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಹಿತೇಶಾ ಚಂದ್ರಾಣಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

Zomato Delivery Boy Assaults Woman, Leaves Her Bleeding With Broken Nose In Bengaluru

ಯುವತಿಯು ಮಧ್ಯಾಹ್ನ 3.30ರ ವೇಳೆಗೆ ಆಹಾರ ಆರ್ಡರ್ ಮಾಡಿದ್ದಾರೆ, ಆಪ್ ಲೆಕ್ಕಾಚಾರದಂತೆ 4.30ರ ವೇಳೆಗೆ ಆಹಾರ ತಲುಪಬೇಕಿತ್ತು. ಆದರೆ ನಿಗದಿ ಸಮಯಕ್ಕೆ ಆಹಾರ ತಲುಪಲಿಲ್ಲ. ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಆಗಿರುವ ತೊಂದರೆ ಹೇಳಿಕೊಂಡಿದ್ದಾರೆ.

ಆರ್ಡರ್ ಕ್ಯಾನ್ಸಲ್ ಮಾಡುವ ಮೊದಲು ಡೆಲಿವರಿ ಬಾಯ್ ಬಂದಿದ್ದಾನೆ, ಮೊದಲೇ ಸಿಟ್ಟಿನಲ್ಲಿದ್ದ ಯುವತಿ ಜೊಮ್ಯಾಟೊ ಟೀಂ ಜತೆ ಮಾತನಾಡಿದ್ದೇನೆ, ಈಗ ನನಗೆ ಯಾವುದೇ ಖರ್ಚಿಲ್ಲದೆ ಊಟ ಕೊಡುತ್ತೀರಾ, ನಿಮ್ಮ ಕಡೆಯವರಿಂದ ಉತ್ತರ ಬರುವವರೆಗೂ ಕಾದು ನಿಲ್ಲಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಆಗ ಡೆಲಿವರಿ ಬಾಯ್ ನಾನೇನು ನಿಮ್ಮ ಮನೆ ಆಳು ಎಂದುಕೊಂಡಿದ್ದೀರಾ, ಎಂದು ಕೂಗಾಡಿದ್ದಾನೆ, ಭಯದಿಂದ ಆಕೆ ಬಾಗಿಲು ಮುಚ್ಚಲು ಮುಂದಾದಾಗ ಮನೆಯೊಳಗೆ ಬಂದು ಟೇಬಲ್‌ ಮೇಲಿಟ್ಟದ್ದ ಆಹಾರ ಪೊಟ್ಟಣವನ್ನು ವಾಪಸ್ ಪಡೆದು ಆಕೆಯ ಮೂಗಿಗೆ ಗುದ್ದಿ ಹೊರಟುಹೋಗಿದ್ದಾನೆ.

Recommended Video

ST Somashekhar ಬಿಚ್ಚಿಟ್ಟ ಅಸಲಿ ಸತ್ಯ | Real Fact about Ramesh Jarkiholi | Oneindia Kannada

ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ, ಆಕೆಯ ಮೂಗಿನ ಮೂಳೆ ಮುರಿದಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಿದೆ, ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
Hitesha Chandranee, a Bengaluru-based content creator and make-up artist, has alleged that she was assaulted by a Zomato delivery executive on March 9 after an argument over a delayed food delivery order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X