ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಝಿಕಾ ವೈರಾಣು ಪತ್ತೆ ಕಿಟ್ ಗಾಗಿ ಮನವಿ: ಖಾದರ್

By Mahesh
|
Google Oneindia Kannada News

ಬೆಂಗಳೂರು, ಫೆ. 02: ಜಾಗತಿಕವಾಗಿ ಭೀತಿ ಸೃಷ್ಟಿಸಿರುವ ಝಿಕಾ ವೈರಾಣು ಕರ್ನಾಟಕಕ್ಕೂ ಕಾಲಿಡುವ ಆತಂಕ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ ಖಾದರ್, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಝಿಕಾ ವೈರಾಣು ಸೋಂಕಿತರ ಪರೀಕ್ಷೆ ಮಾಡುವ ಕಿಟ್ ನಮ್ಮಲ್ಲಿ ಲಭ್ಯವಿಲ್ಲ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಕೇಂದ್ರ ಸರ್ಕಾರದ ನೆರವು ಕೋರಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.[ಜಾಗತಿಕ ಮಹಾಮಾರಿ ಝಿಕಾ ವೈರಾಣುಗೆ ಔಷಧಿ ಇದೆಯಂತೆ!]

ಡೆಂಗ್ಯೂ, ಚಿಕೂನ್ ಗುನ್ಯಾ ರೋಗಾಣುಗಳನ್ನು ಹರಡುವ ರೀತಿಯಲ್ಲೇ ಈಡಿಸ್ ಈಜಿಪ್ಟಿ ಮಾರಕವಾದ ಝಿಕಾ ರೋಗದ ವೈರಾಣುಗಳು ಹರಡುತ್ತವೆ. [ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?]

Zika virus: State wants to screen international passengers

ಗರ್ಭಿಣಿಯರಿಗೆ ಎಚ್ಚರಿಕೆ: ಮುಖ್ಯವಾಗಿ ಹುಟ್ಟುವ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಈ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ದಕ್ಷಿಣ ಆಫ್ರಿಕಾದಲ್ಲಿರುವ ನಿರ್ದಿಷ್ಟ ಸೊಳ್ಳೆಗಳಿಂದ ಈ ರೋಗ ಹಬ್ಬುತ್ತದೆ ಎಂಬುದು ತಿಳಿದು ಬಂದಿದ್ದು ಅಲ್ಲಿಂದ ದೇಶಕ್ಕೆ ಬರುವವರಿಗೆ ಈ ರೋಗ ಬಂದಿದೆಯೇ?ಎಂಬುದನ್ನು ಅರಿತುಕೊಳ್ಳಲು ನಿರ್ದಿಷ್ಟ ಕಿಟ್ ಅನ್ನು ಒದಗಿಸಬೇಕು ಎಂದು ಕೋರಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಸೊಳ್ಳೆ ಕಚ್ಚಿಸಿಕೊಂಡು ಇಲ್ಲಿಗೆ ಬಂದವರನ್ನು ಸೊಳ್ಳೆಗಳು ಕಚ್ಚಿ, ಆ ಸೊಳ್ಳೆಗಳು ಬೇರೆಯವರಿಗೆ ಕಚ್ಚಿದರೆ ಝೀಕಾ ರೋಗ ಹರಡುತ್ತದೆಯೇ? ಎಂಬುದರ ವಿವರಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ದೆಹಲಿ ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿದರೆ ದಕ್ಷಿಣ ಆಫ್ರಿಕಾದಿಂದ ಬರುವವರನ್ನು ಪರೀಕ್ಷಿಸಲು ನೆರವಾಗುತ್ತದೆ. ಪ್ರವಾಸಿಗರನ್ನು ಪರೀಕ್ಷಿಸಿದರೆ ಶೇಕಡಾ ತೊಂಭತ್ತರಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.(ಒನ್ ಇಂಡಿಯಾ ಸುದ್ದಿ)

English summary
Karnataka wants to screen those coming from countries affected by the Zika virus at its international airports as a precautionary measure to prevent the spread of this mosquito-borne virus said Health Minister U.T. Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X