ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತೃಪ್ತರಿಗೆ ಝೀರೋ ಟ್ರಾಫಿಕ್: ಎಂ.ಬಿ.ಪಾಟೀಲ್ ಮೇಲೆ ಸ್ಪೀಕರ್ ಗರಂ

|
Google Oneindia Kannada News

ಬೆಂಗಳೂರು, ಜುಲೈ 22: 'ಝೀರೋ ಟ್ರಾಫಿಕ್' ವಿಚಾರ ಸದನದಲ್ಲಿ ಭಾರಿ ಕಾವೇರಿದ ಚರ್ಚೆ ನಡೆಯಿತು. ಸ್ಪೀಕರ್ ರಮೇಶ್ ಕುಮಾರ್ ಅವರು ಗೃಹ ಸಚಿವ ಎಂ.ಬಿ.ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ವಿಶ್ವಾಸಮತ ಯಾಚನೆ ಗೊತ್ತುವಳಿ ಮೇಲೆ ಮಾತನಾಡಿದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು, ಅತೃಪ್ತ ಶಾಸಕರು ಸ್ಪೀಕರ್ ಅವರನ್ನು ಭೇಟಿ ಮಾಡಲು ಮುಂಬೈನಿಂದ ಬಂದು ಎಚ್‌ಎಎಲ್‌ನಿಂದ ವಿಧಾನಸೌಧಕ್ಕೆ ಆಗಮಿಸಿದಾಗ ಅವರಿಗೆ ಝೀರೋ ಟ್ರಾಫಿಕ್ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅವರಿಗೆ ಏಕೆ ಝಿರೋ ಟ್ರಾಫಿಕ್ ನೀಡಲಾಯಿತು, ಹಾಗೆ ನೀಡಲು ನಿಯಮದಲ್ಲಿ ಅವಕಾಶವಿದೆಯೇ ಎಂದು ಪ್ರಶ್ನೆ ಮಾಡಿದರು.

LIVE ಇಂದು ಎಷ್ಟು ಹೊತ್ತಾದರೂ ಕೂರುತ್ತೇನೆ: ಸ್ಪೀಕರ್ ಹೇಳಿಕೆLIVE ಇಂದು ಎಷ್ಟು ಹೊತ್ತಾದರೂ ಕೂರುತ್ತೇನೆ: ಸ್ಪೀಕರ್ ಹೇಳಿಕೆ

ಇದಕ್ಕೆ ಉತ್ತರಿಸಿದ ಎಂ.ಬಿ.ಪಾಟೀಲ್ ಅವರು, 'ಅತೃಪ್ತ ಶಾಸಕರಿಗೆ ಭದ್ರತೆ ನೀಡಬೇಕು ಎಂದು ರಾಜ್ಯಪಾಲರು ಕಮೀಷನರ್ ಅವರಿಗೆ ಸೂಚಿಸಿದ್ದರು, ಆದರೆ ಅವರಿಗೆ ಝೀರೋ ಟ್ರಾಫಿಕ್ ನೀಡಿಲ್ಲ' ಎಂದು ಉತ್ತರಿಸಿದರು.

ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

ಆದರೆ ಇದಕ್ಕೆ ಸ್ವತಃ ಸ್ಪೀಕರ್ ಅವರೇ ಆಕ್ಷೇಪ ವ್ಯಕ್ತಪಡಿಸಿ, ನೀವು ನೀಡುತ್ತಿರುವ ಉತ್ತರವನ್ನು ನಿಮ್ಮ ಆತ್ಮ ಸಾಕ್ಷಿಯೇ ಒಪ್ಪುತ್ತಿದೆಯಾ? ಆ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿದ್ದನ್ನು ಇಡೀಯ ದೇಶವೇ ನೋಡಿದೆ, ಆದರೆ ನೀವು ಅತೃಪ್ತರಿಗೆ ಝೀರೋ ಟ್ರಾಫಿಕ್ ನೀಡಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಗರಂ ಆದರು.

ಕ್ರಿಮಿನಲ್‌ಗಳಿಗೆ ಝೀರೋ ಟ್ರಾಫಿಕ್ ಕೊಟ್ಟುಬಿಡಿ: ಸ್ಪೀಕರ್‌ ಗರಂ

ಕ್ರಿಮಿನಲ್‌ಗಳಿಗೆ ಝೀರೋ ಟ್ರಾಫಿಕ್ ಕೊಟ್ಟುಬಿಡಿ: ಸ್ಪೀಕರ್‌ ಗರಂ

ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿದ್ದೀರಾ, ಮುಂದೆ ಕ್ರಿಮಿನಲ್‌ಗಳಿಗೂ ಕೊಟ್ಟುಬಿಡಿ ಎಂದು ಬೇಸರದಿಂದ ಹೇಳಿದರು. ಜನರ ಕೆಲವ ಮಾಡುವ ಪ್ರಮುಖರಿಗೆ ಮಾತ್ರ ಕೊಡುವ ಗೌರವವನ್ನು ಹೀಗೆ ಕಂಡ-ಕಂಡವರಿಗೆಲ್ಲಾ ಕೊಡುತ್ತೀರೇನು ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜವನ್ನು ಮುಂದಕ್ಕೆ ಹೇಗೆ ನಡೆಸುತ್ತೀರಾ: ಸ್ಪೀಕರ್‌

ಸಮಾಜವನ್ನು ಮುಂದಕ್ಕೆ ಹೇಗೆ ನಡೆಸುತ್ತೀರಾ: ಸ್ಪೀಕರ್‌

ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ಕೊಟ್ಟಿದ್ದು ಯಾರು? ಏಕೆ ಕೊಟ್ಟರು? ಈಗ ನೀವು ಅವರಿಗೆ ಕೊಟ್ಟಿದ್ದೀರೆಂದರೆ ಮುಂದೆಯೂ ಅಂತಹವರಿಗೆ ಝಿರೋ ಟ್ರಾಫಿಕ್ ಕೊಡುವುದಿಲ್ಲವೆಂದು ಹೇಗೆ ನಂಬುವುದು ಎಂದ ಅವರು ಈ ಸಮಾಜವನ್ನು ಮುಂದೆಕ್ಕೆ ಹೇಗೆ ತೆಗೆದುಕೊಂಡು ಹೋಗುತ್ತೀರಾ ಎಂದು ಎಂ.ಬಿ.ಪಾಟೀಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್ ಅತೃಪ್ತರಿಗೆ ಅನರ್ಹತೆ ಭೀತಿ, ವಿಪ್ ಬಗ್ಗೆ ಸ್ಪೀಕರ್ ಮಹತ್ವದ ರೂಲಿಂಗ್

ಎಚ್‌.ಕೆ.ಪಾಟೀಲ್ ಅವರಿಂದಲೂ ವಿರೋಧ

ಎಚ್‌.ಕೆ.ಪಾಟೀಲ್ ಅವರಿಂದಲೂ ವಿರೋಧ

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಹಿರಿಯ ಎಚ್‌.ಕೆ.ಪಾಟೀಲ್ ಅವರು, ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ಅನ್ನು ನೀಡಿರುವುದು ಇಡೀಯ ದೇಶ ನೋಡದೆ, ಇಂತಹಾ ಸತ್ಯವನ್ನು ನಾವು ಮುಚ್ಚಿಡಲು ಸಾಧ್ಯವಿಲ್ಲ, ಅವರಿಗೆ ಝೀರೋ ಟ್ರಾಫಿಕ್ ನೀಡಲು ಕಾರಣವೇನು ಎಂದು ಅವರೂ ಸಹ ಪ್ರಶ್ನೆ ಮಾಡಿದರು.

ನಾಳೆ ಉತ್ತರ ನೀಡುತ್ತೇನೆ ಎಂದು ಎಂ.ಬಿ.ಪಾಟೀಲ್

ನಾಳೆ ಉತ್ತರ ನೀಡುತ್ತೇನೆ ಎಂದು ಎಂ.ಬಿ.ಪಾಟೀಲ್

ಸ್ಪೀಕರ್ ಸೇರಿದಂತೆ ತಮ್ಮ ಪಕ್ಷದ ನಾಯಕರೇ ಎಂ.ಬಿ.ಪಾಟೀಲ್ ಅವರ ವಿರುದ್ಧ ಗರಂ ಆಗಿದ್ದ ಕಂಡು ಎಂ.ಬಿ.ಪಾಟೀಲ್ ಅವರು ಪೆಚ್ಚಾದರು. ಇದರ ಬಗ್ಗೆ ಮಾಹಿತಿ ಪಡೆದು ನಾಳೆ(?!) ಉತ್ತರ ನೀಡುವುದಾಗಿ ಹೇಳಿದರು.

ರೆಬೆಲ್ ಶಾಸಕ ಶಂಕರ ನಮ್ಮವ ನಮ್ಮವ: ಕಾಂಗ್ರೆಸ್ ಘೋಷಣೆರೆಬೆಲ್ ಶಾಸಕ ಶಂಕರ ನಮ್ಮವ ನಮ್ಮವ: ಕಾಂಗ್ರೆಸ್ ಘೋಷಣೆ

English summary
Zero traffic given to dissident MLAs when they came to meet speaker Ramesh Kumar. MLA AT Ramaswamy, HK Patil and also speaker Ramesh Kumar angry on home minister for giving them zero traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X