ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಶಾಸಕ ಜಮೀರ್ ಅಹ್ಮದ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಸೆ. 14: ಡ್ರಗ್ ಮಾಫಿಯಾದೊಂದಿಗೆ ನಂಟಿರುವವರೊಂದಿಗೆ ಒಡನಾಟದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಡ್ರಗ್ ಮಾಫಿಯಾದೊಂದಿಗೆ ನಂಟು ಹೊಂದಿರುವವರೊಂದಿಗೆ ಒಡನಾಟ ಹೊಂದಿದ್ದಾರೆಂದು ಬಿಜೆಪಿ ನಾಐಕರು ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅದಾದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಡ್ರಗ್ ತನಿಖೆ ಆರಂಭಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಶಾಸಕ ಜಮೀರ್ ಅಹ್ಮದ್‌ಗೆ ವಾಚ್‌ ಮ್ಯಾನ್ ಕೆಲಸ ಖಾಲಿಯಿದೆ!ಶಾಸಕ ಜಮೀರ್ ಅಹ್ಮದ್‌ಗೆ ವಾಚ್‌ ಮ್ಯಾನ್ ಕೆಲಸ ಖಾಲಿಯಿದೆ!

ಸೆಲೆಬ್ರಿಟಿಗಳಿಗೆ ಪ್ರಭಾವಿಗಳಿಗೆ ಔತಣಕೂಟ ಏರ್ಪಡಿಸುತ್ತಿದ್ದ ಫಾಸಿಲ್ ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ನಂಟಿದೆ ಎಂದು ಸಚಿವ ಸಿಟಿ ರವಿ ಅವರು ವಿಧಾನಸೌಧದಲ್ಲಿ ಫೋಟೊ ಬಿಡುಗಡೆ ಮಾಡಿ ಆರೋಪಿಸಿದ್ದರು. ಆದರೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ರಾಜಕೀಯ ಬಿಟ್ಟು ಈಗ ನಾಡಿನ ನುಡಿಗಾಗಿ ಪ್ರತಿಭಟನೆ ಮಾಡಿದ್ದಾರೆ.

Zameer Ahmed Khan protests in Bengaluru against the imposition of Hindi on Kannadigas

ಹಿಂದಿ ದಿವಸದಂದು ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಶಾಸಕ ಜಮೀರ ಅಹ್ಮದ್ ಖಾನ್ ಪ್ರತಿಭಟನೆ ಮಾಡಿದ್ದಾರೆ.

Zameer Ahmed Khan protests in Bengaluru against the imposition of Hindi on Kannadigas

Recommended Video

Hindi Diwas ವಿಚಾರವಾಗಿ ಗರಂ ಆದ್ರು Dinesh Gundurao | Oneindia Kannada

"ನಾನು ಕನ್ನಡಿಗ" ಎಂಬ ತಲೆಬರಹವಿರುವ ಟೀಶರ್ಟ್ ಧರಿಸುವ ಮೂಲಕ ಪ್ರತಿಭಟನೆಯಲ್ಲಿ ಜಮೀರ್ ಭಾಗವಹಿಸಿದ್ದರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅಂದಿಗೂ, ಇಂದಿಗೂ, ಎಂದೆಂದಿಗೂ ಇದು ಬದಲಾಗದು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಜಮೀರ್ ಅಹ್ಮದ್ ಹೇಳಿದ್ದಾರೆ.

English summary
MLA Zameer Ahmed Khan protests in Bengaluru against the imposition of Hindi on Kannadigas on the day of Hindi. Zameer participated in the protest by wearing a t-shirt titled "I am a Kannadiga'. Know more about
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X