ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರಿಗೆ KFC ಊಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಕೆಎಫ್ ಸಿ ಇಂಡಿಯಾ ಕಳೆದ ಎರಡು ವಾರಗಳಿಂದ ಪ್ರತಿನಿತ್ಯ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಮತ್ತು ಸಿಬ್ಬಂದಿ ಸದಸ್ಯರಿಗೆ 200 ಊಟ ಪೂರೈಕೆ ಮಾಡುತ್ತಿದೆ.

ಕೋವಿಡ್ ಸೋಂಕಿನ ವಿರುದ್ಧ ಅವಿರತವಾಗಿ ದುಡಿಯತ್ತಿರುವ ಆರೋಗ್ಯ ಕಾರ್ಯಕರ್ತರು, ಸೋಂಕಿತರು ಮತ್ತು ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ನೆರವು ನೀಡುವ ಮೂಲಕ ಕೆಎಫ್ ಸಿ ಸೋಂಕಿನ ವಿರುದ್ಧ ಹೋರಾಟಕ್ಕೆ ತನ್ನ ಕೊಡಗೆ ನೀಡುತ್ತಿದೆ.

ಇನ್ಪೋಸಿಸ್‌ ಫೌಂಡೇಶನ್‌ನಿಂದ ಜಿಗಣಿ ಗ್ರಾಮಸ್ಥರಿಗೆ ಅಗತ್ಯ ವಸ್ತು ವಿತರಣೆ ಇನ್ಪೋಸಿಸ್‌ ಫೌಂಡೇಶನ್‌ನಿಂದ ಜಿಗಣಿ ಗ್ರಾಮಸ್ಥರಿಗೆ ಅಗತ್ಯ ವಸ್ತು ವಿತರಣೆ

ದೇಶದಲ್ಲಿ ಇದುವರೆಗೆ ಹಲವು ಸಮುದಾಯಗಳಿಗೆ 1 ಮಿಲಿಯನ್ ಆಹಾರ ಪೂರೈಕೆ ಮಾಡಲಾಗಿದೆ ಎಂದು ಕೆಎಫ್ ಸಿ ಪ್ರಕಟಣೆ ತಿಳಿಸಿದೆ. ಇದಕ್ಕೆ Yum! Foundation ನೆರವು ಒದಗಿಸಿದೆ. ಈ ಆಹಾರಗಳಿಗೆ ಕೆಎಫ್ ಸಿ ಹಣಕಾಸಿನ ನೆರವು ನೀಡುತ್ತಿದೆ.

Yum! Foundation KFC helping Corona Warriors at Victoria Hospital

ಸಮಾಜಕ್ಕೆ ಮರಳಿ ನೀಡುವುದು ಕೆಎಫ್ ಸಿ ಯ ಮೂಲ ಮೌಲ್ಯಗಳಲ್ಲಿ ಒಂದು. ಒಂದು ದೇಶವಾಗಿ ನಾವೆಲ್ಲರೂ ಕೋವಿಡ್-19 ರೇಖೆಯನ್ನು ಸಮನಾಗಿಸಲು ಯತ್ನ ನಡೆಸುತ್ತಿದ್ದೇವೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಅನೆಕ ಕುಟುಂಬಗಳಿಗೆ, ವ್ಯಕ್ತಿಗಳಿಗೆ ಅಗತ್ಯ ವಸ್ತುಗಳ ಲಭ್ಯತೆ ಇಲ್ಲದಂತಾಗಿದೆ. ಅಂತಹವರಿಗೆ ನೆರವಾಗುವುದು ನಮ್ಮ ಉದ್ದೇಶ. ಅವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಮಗೆ ಒಂದು ಅವಕಾಶ ಲಭಿಸಿದೆ. ಕೋವಿಡ್-19 ವಿರುದ್ದದ ಹೋರಾಟದಲ್ಲಿ ನಾವೆಲ್ಲರೂ ಒಟ್ಟಿಗಿದ್ದು, ಎಲ್ಲರೂ ಸದೃಢವಾಗಿ ಹೊರಹೊಮ್ಮುತ್ತೇವೆ ಎಂಬ ನಂಬಿಕೆಯಿದೆ ಎಂದು ಕೆಎಫ್ ಸಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮೆನನ್ ಹೇಳಿದ್ದಾರೆ.

ದೆಹಲಿ, ಅಸ್ಸಾಂ, ಬೆಂಗಳೂರು, ಮುಂಬೈ, ಜಾರ್ಖಂಡ್ ಮತ್ತು ಇತರ ರಾಜ್ಯಗಳಲ್ಲಿ ಕೆಎಫ್ ಸಿ ರೆಸ್ಪಾನ್ಸ್ ನೆಟ್ ನೊಂದಿಗೆ ಕೈಜೋಡಿಸಿದೆ. ಜೊತೆಗೆ, ಕೆಎಫ್ ಸಿ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದು, ತಮ್ಮ ಉದ್ಯೋಗಿಗಳ ಸುರಕ್ಷೆ, ಗ್ರಾಹಕರಿಗೆ ಸುರಕ್ಷಿತ ಹಾಗೂ ಸಂಪರ್ಕರಹಿತ ವಿತರಣೆಯ ಬದ್ಧತೆಯನ್ನು ಹೊಂದಿದೆ.

English summary
Yum! Foundation KFC helping Corona Warriors at Victoria Hospital, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X