ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪರಿಸರ ಸ್ನೇಹಿ ಇ-ಬೈಕ್ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು, ಮೇ 31: ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿ (ಎಲ್ಸಿಟಾ) ಸಂಸ್ಥೆ ಹಾಗೂ ಯೂಲು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪರಿಸರ ಸ್ನೇಹಿ ಇ-ಬೈಕ್ "ಯೂಲು ಮಿರಾಕಲ್"ಅನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಂದು ಲೋಕಾರ್ಪಣೆ ಮಾಡಲಾಯಿತು. ಸುಮಾರು 200 ಇ-ಬೈಕ್ ಗಳನ್ನು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಈವರೆಗೆ ನಿಯೋಜಿಸಲಾಗಿದೆ.

ಉದ್ಘಾಟನೆ ನಂತರ ಮಾತನಾಡಿದ ಎಲ್ಸಿಟಾ ಮುಖ್ಯ ಕಾರ್ಯ ನಿರ್ವಣಾ ಅಧಿಕಾರಿ ರಮಾ ಎನ್. ಎಸ್. ಕೆಲವು ತಿಂಗಳ ಹಿಂದಷ್ಟೆ ಲೋಕಾರ್ಪಣೆಯಾದ ಯೂಲು ಸೈಕಲ್ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಆ ಕಾರಣಕ್ಕಾಗಿ ಬ್ಯಾಟರೀ ಚಾಲಿತ ಯೂಲು ಮಿರಾಕಲ್ ಬೈಕ್ ಸೇವೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪ್ರಾರಂಭಿಸಲಾಗಿದೆ. ಈ ಸೇವೆಯು ಮಹಿಳೆಯರಿಗೆ ಹೆಚ್ಚಾಗಿ ಪ್ರಯೋಜನವಾಗಬಹುದು ಎಂದು ನಮ್ಮ ನಂಬಿಕೆ. ಯೂಲು ಮಿರಾಕಲ್ ನಿಂದಾಗಿ ಟ್ರಾಫಿಕ್ ಸಮಸ್ಯೆ ಬಹಳಷ್ಟು ಕಡಿಮೆಯಾಗುವುದು ಖಂಡಿತ ಎಂದು ಅಭಿಪ್ರಾಯಪಟ್ಟರು.

'ಯುಲು' ಬೈಸಿಕಲ್ ಹತ್ತಿ, 10 ರು ನೀಡಿ ಬೆಂಗಳೂರು ಸುತ್ತೋದು ಹೇಗೆ?'ಯುಲು' ಬೈಸಿಕಲ್ ಹತ್ತಿ, 10 ರು ನೀಡಿ ಬೆಂಗಳೂರು ಸುತ್ತೋದು ಹೇಗೆ?

ಯೂಲು ಮಿರಾಕಲ್ ಕುರಿತು ಪ್ರತಿಕ್ರೀಯಿಸಿದ ಯೂಲು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅಮಿತ್ ಗುಪ್ತಾ, ಎಲೆಕ್ಟ್ರಾಕ್ಸ್ ಸಿಟಿಯಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಸಲುವಾಗಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಯೂಲು ಮಿರಾಕಲ್ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಇನ್ನಷ್ಟು ಹಸಿರಾಗಿಸುವಲ್ಲಿ ಸಹಕರಿಸಲಿದೆ ಎಂದರು.

ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)

ಎಲ್ಸಿಟಾ (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‍ಶಿಪ್ ಅಥಾರಿಟಿ)

2013ರಲ್ಲಿ ಸ್ಥಾಪಿಸಲಾದ ಎಲ್ಸಿಟಾ ಸಂಸ್ಥೆಯು ಇಲೆಕ್ಟ್ರಾನಿಕ್ಸ್ ಸಿಟಿಯ ನಿರ್ವಹಣೆ ಮಾಡುತ್ತಿದೆ. ಕರ್ನಾಟಕ ಸರಕಾರವು 2013ರಲ್ಲಿ ಇಲೆಕ್ಟ್ರಾನಿಕ್ ಸಿಟಿಯನ್ನು ಕೈಗಾರಿಕಾ ಪ್ರದೇಶ ಎಂದು ಪರಿಗಣಿಸಿ ಇದರ ನಿರ್ವಹಣೆಗಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಕ್ಟ್ ಅಡಿಯಲ್ಲಿ ಎಲ್ಸಿಟಾ ಸಂಸ್ಥೆಯನ್ನು ಸ್ಥಾಪಿಸಿದೆ.

 ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು'

ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು'

ಆಪ್ ಆಧಾರಿತ ಬಾಡಿಗೆ ಸೈಕಲ್ ವ್ಯವಸ್ಥೆ ಒದಗಿಸುವ 'ಯುಲು' ಕಂಪನಿಯು ಬೆಂಗಳೂರಿನ ಕೆಲವೆಡೆ ಕಾರ್ಯಾರಂಭ ಮಾಡಿದೆ. ಎಂ.ಜಿ.ರಸ್ತೆ ಸೇರಿದಂತೆ 19 ನಿಲ್ದಾಣಗಳನ್ನು ಘೋಷಿಸಲಾಗಿತ್ತು. ಯುಲು ಕಂಪನಿಯು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 2, 300 ಸೈಕಲ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ. ಉಳಿದ ಕಂಪನಿಗಳು ಸದ್ಯದಲ್ಲೆ ಸೇವೆ ಆರಂಭಿಸಲಿವೆ. ಪ್ರತಿ ಬೈಸಿಕಲ್‌ಗೆ ವಾರ್ಷಿಕ 50 ರೂ.ಶುಲ್ಕ ವಿಧಿಸಿ, ಪರವಾನಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆಇ ಸಿಟಿಯಲ್ಲಿ ಯೂಲೂ ಬೈಕ್ ನಿಂದ ನಿಲ್ದಾಣರಹಿತ ಸೈಕಲ್ ಯೋಜನೆ

 24 ಗಂಟೆಯೂ ಬೈಸಿಕಲ್ ಲಭ್ಯ

24 ಗಂಟೆಯೂ ಬೈಸಿಕಲ್ ಲಭ್ಯ

ಯುಲು ಕಂಪನಿಯು 10 ಮೆಟ್ರೊ ನಿಲ್ದಾಣ ಹಾಗೂ ನಗರದ ಇತರೆ ಪ್ರದೇಶಗಳಲ್ಲೂ ಸೇವೆ ಆರಂಭಿಸಿದ್ದು, ಎಲ್ಲೆಡೆ ದಿನದ 24 ಗಂಟೆಯೂ ಸೈಕಲ್ ಲಭ್ಯವಿರುತ್ತದೆ. ಬಳಕೆದಾರರು ಯುಲು ಆ್ಯಪ್ ಡೌನ್ಲೋಡ್ ಮಾಡಿಕೊಂಡು, ನೋಂದಣಿಯಾಗಬೇಕು. ಆನಂತರ 100 ರೂ. ಠೇವಣಿ ಇಡಬೇಕು. ಬಳಿಕ ಆಪ್ ಮೂಲಕ ಯುಆರ್ ಕೋಡ್ ಸ್ಕಾನ್ ಮಾಡಿದ ಕೂಡಲೇ ಬೀಗ ತೆಗೆದುಕೊಳ್ಳಲಿದೆ. ಆ ಬಳಿಕ ನಿಗದಿತ ಸ್ಥಳ ತಲುಪಿದ ನಂತರ ಸಮೀಪದ ಪಾರ್ಕಿಂಗ್ ಹಬ್‌ನಲ್ಲಿ ಸೈಕಲ್ ನಿಲುಗಡೆ ಮಾಡಬಹುದು.

 ಪ್ರತಿ ಸೈಕಲ್ ಕೂಡಾ ಜಿಪಿಎಸ್

ಪ್ರತಿ ಸೈಕಲ್ ಕೂಡಾ ಜಿಪಿಎಸ್

ಸೈಕಲ್ ಜಿಪಿಎಸ್ ವ್ಯವಸ್ಥೆ, ಕಾರ್ಡ್‌ಲೆಸ್ ತಂತ್ರಜ್ಞಾನ(ಆ್ಯಪ್ ಮೂಲಕ ಬೀಗ ತೆರೆಯುವ ವಿಧಾನ) ಹೊಂದಿದೆ. ಈ ನಿಟ್ಟನಲ್ಲಿ ಸೈಕಲ್ ಕಳ್ಳತನ ಮಾಡುವುದು ಕಷ್ಟ. ಪ್ರತಿ ನಿಲ್ದಾಣದಲ್ಲಿ 50 ಸೈಕಲ್‌ಗಳು ಬಾಡಿಗೆಗೆ ಲಭ್ಯವಿರುತ್ತವೆ. ಬೈಯಪ್ಪನಹಳ್ಳಿ, ಇಂದಿರಾನಗರ, ಹಲಸೂರು, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಕಬ್ಬನ್‌ಪಾರ್ಕ್, ವಿಧಾನಸೌಧ ಮೆಟ್ರೊ ನಿಲ್ದಾಣಗಳು ಸೇರಿ ಹಲವು ಕಡೆಗಳಲ್ಲಿ ಸೈಕಲ್ ಲಭ್ಯವಿರುತ್ತವೆ.

ರಸ್ತೆಗೆ ಬರದೆ ಹಳ್ಳ ಹಿಡಿದ ಯುಲು ಬೈಸಿಕಲ್ ಯೋಜನೆ, ತೊಂದರೆಯೇ ಹೆಚ್ಚುರಸ್ತೆಗೆ ಬರದೆ ಹಳ್ಳ ಹಿಡಿದ ಯುಲು ಬೈಸಿಕಲ್ ಯೋಜನೆ, ತೊಂದರೆಯೇ ಹೆಚ್ಚು

English summary
Yulu, a mission-oriented company to drive India towards sustainable mobility, today extends its Electric bikes operation in Electronic City – The IT Hub of Bengaluru. YULU deployed its all-new fleet of 200 battery powered e-bikes(YULU Miracle) to ease traffic congestion and help fellow citizens to take green rides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X