ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಕೋಟೆ ಉಪಚುನಾವಣೆ: ಶರತ್ ಬಚ್ಚೇಗೌಡ ಮಹತ್ವದ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅ 31: ಮುಂಬರುವ ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಬಿಜೆಪಿ ಮುಖಂಡ, ಶರತ್ ಬಚ್ಚೇಗೌಡ ಸ್ಪಷ್ಟನೆಯನ್ನು ನೀಡಿದ್ದಾರೆ.

"ಶರತ್ ಮೃದು ಸ್ವಭಾವದವನು. ಅವನನ್ನು ಒತ್ತಡ ಹಾಕಿ ದಾರಿಗೆ ತರಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ನಾನು ಜಗ್ಗುವುದಿಲ್ಲ" ಎಂದು ಶರತ್ ಹೇಳಿದ್ದಾರೆ.

ಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕಸಿಎಂ ಕೊಟ್ಟ 'ಉಡುಗೊರೆ' ತಿರಸ್ಕರಿಸಿದ ಶರತ್ ಬಚ್ಚೇಗೌಡ:ಎಂಟಿಬಿಗೆ ಆತಂಕ

"ಮುಖ್ಯಮಂತ್ರಿಗಳನ್ನು ಭೇಟಿಯಾದಾಗಲೂ ನನ್ನ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇನೆ. ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಮಾತೇ ಇಲ್ಲ" ಎನ್ನುವ ಮೂಲಕ, ಶರತ್ ಬಚ್ಚೇಗೌಡ, ಬಿಜೆಪಿ ಮುಖಂಡರಿಗೆ ಮತ್ತೆ ಬಿಸಿಮುಟ್ಟಿಸಿದ್ದಾರೆ.

Youth BJP Leader Sharath Bache Gowda Clarification About Contesting Hoskote Assembly By Poll

'ನನ್ನ ಮಗ ವಿದ್ಯಾವಂತ. ನನ್ನ ಮಾತನ್ನು ಅವನು ಕೇಳುತ್ತಿಲ್ಲ" ಎಂದು ಸಂಸದ ಬಚ್ಚೇಗೌಡ್ರು ಈಗಾಗಲೇ ಹೇಳಿಕೆ ನೀಡಿದ್ದದ್ದು, ಶರತ್, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎನ್ನುವುದರ ಸೂಚನೆಯಾಗಿತ್ತು.

"ಹೊಸಕೋಟೆ ತಾಲೂಕಿನ ಸ್ವಾಭಿಮಾನಕ್ಕಾಗಿ ಮತ್ತು ಇಲ್ಲಿನ ಜನರ ಆಶ್ವಾಸನೆ ಪೂರೈಸಲು ನಾನು ಚುನಾವಣೆಗೆ ಸ್ಪರ್ಧಿಸಲೇ ಬೇಕಾಗಿದೆ. ನನ್ನ ಈ ನಿಲುವು ಬಿಜೆಪಿ ಮುಖಂಡರ ವಿರುದ್ದ ಅಲ್ಲ" ಎಂದು ಶರತ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಅತೃಪ್ತ ಶಾಸಕರಿಗೆ ಅನುಕೂಲ ಮಾಡಿಕೊಡಲೆಂದು, ಕ್ಷೇತ್ರಗಳ ಸೋತ ಬಿಜೆಪಿ ಅಭ್ಯರ್ಥಿಗಳಿಗೆ ಯಡಿಯೂರಪ್ಪ ಅವರು ನಿಗಮ ಮಂಡಳಿ ಸ್ಥಾನದ 'ಉಡುಗೊರೆ' ನೀಡಿದ್ದರು, ಆದರೆ ಇದನ್ನು ಶರತ್ ಬಚ್ಚೇಗೌಡ ಅವರು ತಿರಸ್ಕರಿಸಿದ್ದರು.

English summary
Youth BJP Leader Sharath Bache Gowda Clarification About Contesting Hoskote Assembly By Poll. He said, I Will Contest The Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X