ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಾರಿನಲ್ಲಿದ್ದ ಯುವತಿಗೆ ಓಲಾ ಚಾಲಕನ ಕಿರುಕುಳ

|
Google Oneindia Kannada News

ಬೆಂಗಳೂರು, ಜನವರಿ 09 : ತಡವಾಗಿ ಬಂದಿದ್ದು ಏಕೆ ಎಂದು ಪ್ರಶ್ನಿಸಿದ ಯುವತಿಗೆ ಓಲಾ ಚಾಲಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ಯುವತಿ ಮಲ್ಲೇಶ್ ಪಾಳ್ಯಕ್ಕೆ ಹೋಗಲು ಓಲಾ ಬುಕ್ ಮಾಡಿದ್ದಳು. ತಡವಾಗಿ ಬಂದಿದ್ದಕ್ಕೆ ಡ್ರೈವರ್‌ನನ್ನು ಪ್ರಶ್ನಿದ್ದಳು. ಡ್ರೈವರ್‌ ಕಿರಿಕ್ ಮಾಡಿದ್ದ, ಬಳಿಕ ಕಾರನ್ನು ಹತ್ತಿಸಿಕೊಂಡಿದ್ದ.

ಮಧ್ಯರಾತ್ರಿ ಮಹಿಳೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಓಲಾ ಚಾಲಕಮಧ್ಯರಾತ್ರಿ ಮಹಿಳೆಯ ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಓಲಾ ಚಾಲಕ

ಕಾರು ಹೊರಡುತ್ತಿದ್ದಂತೆ ಚಾಲಕ ಡೋರ್‌ಗಳನ್ನು ಲಾಕ್ ಮಾಡಿ ಯುವತಿ ಜೊತೆ ಜಗಳವಾಡಿದ್ದ. ಕಾರಿನಲ್ಲಿಯೇ ಕುತಿರುವಂತೆ ಒತ್ತಾಯಿಸಿದ್ದ. ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ನಿನ್ನ ಅಡ್ರೆಸ್ ಗೊತ್ತು, ಕತ್ತರಿಸಿ ಹಾಕ್ತೀನಿ: ಯುವತಿಗೆ ಓಲಾ ಚಾಲಕನ ಬೆದರಿಕೆನಿನ್ನ ಅಡ್ರೆಸ್ ಗೊತ್ತು, ಕತ್ತರಿಸಿ ಹಾಕ್ತೀನಿ: ಯುವತಿಗೆ ಓಲಾ ಚಾಲಕನ ಬೆದರಿಕೆ

Young Woman Assaulted By Ola Driver

ಚಾಲಕನ ಕಿರುಕುಳದಿಂದ ಭಯಗೊಂಡ ಯುವತಿ ಕಿರುಚಿಕೊಂಡಿದ್ದಾಳೆ. ಆಗ ಸಾರ್ವಜನಿಕರು ಕಾರನ್ನು ನಿಲ್ಲಿಸುವಂತೆ ಹೇಳಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಡ್ರೈವರ್‌ನನ್ನು ಇಳಿಸಿ ಬುದ್ಧಿವಾದ ಹೇಳಿದ್ದಾರೆ.

 ಬೆಂಗಳೂರಲ್ಲಿ ಊಬರ್ ಚಾಲಕನಿಂದ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ ಬೆಂಗಳೂರಲ್ಲಿ ಊಬರ್ ಚಾಲಕನಿಂದ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ

ಯುವತಿ ಕ್ಯಾಬ್ ಚಾಲಕನ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಓಲಾ ಚಾಲಕರು ಕಿರುಕುಳ ನೀಡುವುದು ಇದೇ ಮೊದಲಲ್ಲ. ಹಿಂದೆಯೂ ಇಂತಹ ಪ್ರಕರಣಗಳು ನಡೆದಿವೆ.

ಮಹಿಳೆಯರ ಸುರಕ್ಷತೆಗಾಗಿಯೇ ಬೆಂಗಳೂರು ಪೊಲೀಸರು ಸುರಕ್ಷಾ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡವರು ತುರ್ತು ಸಮಯದಲ್ಲಿ ಬಟನ್ ಒತ್ತಿದರೆ 7 ಸೆಕೆಂಡ್‌ನಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ಹೋಗಲಿದ್ದು, 9 ನಿಮಿಷದಲ್ಲಿ ಹೊಯ್ಸಳ/ಚೀತಾ ಪೊಲೀಸರು ಸ್ಥಳಕ್ಕೆ ಆಗಮಿಸಲಿದ್ದಾರೆ.

English summary
Young woman claimed that she was assaulted by Ola driver in Bengaluru. Complaint field in Byappanahalli police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X