ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಬೆಂಗಳೂರು 'ರೈಸ್ ಬಾತ್‌' ಗೂ ರಾಜಧಾನಿ!

|
Google Oneindia Kannada News

ಬೆಂಗಳೂರು ಕರ್ನಾಟಕದ ರಾಜಧಾನಿ...ಇದರಲ್ಲಿ ಯಾವುದೇ ಅನುಮಾನ ಬೇಡ. ನೀವು ಬಾಯಿಯನ್ನು ಕಟ್ಟಿಹಾಕಲು ಸೋತು, ತಿನ್ನಲು ಏನಾದರೂ ಸಿಗುತ್ತದೆಯೇ? ಎಂದು ಮನೆಗೆ ಬೀಗ ಜಡಿದು ಹೊರಗೆ ಹೊರಟರೆ ಬೆಂಗಳೂರಿನ ಬಗೆ-ಬಗೆಯ ತಿಂಡಿಗಳ ಪರಿಚಯವಾಗುತ್ತದೆ. ನಮ್ಮ ಬೆಂಗಳೂರನ್ನು 'ರೈಸ್ ಬಾತ್' ರಾಜಧಾನಿ ಎಂದೂ ಹೇಳಬಹುದು.

ಹಸಿದ ಹೊಟ್ಟೆಗೆ ಎಂದೂ ಮೋಸ ಮಾಡದ ನಗರ ಬೆಂಗಳೂರು. ಕೆಲಸ ಹುಡುಕಿಕೊಂಡು ಬರುವವರಿಗೆ ಕೆಲಸ ನೀಡಿ, ಹೊಟ್ಟೆ ತುಂಬಿಸುತ್ತದೆ. ಹಸಿವು ಎಂದು ರಸ್ತೆಗೆ ಕಾಲಿಟ್ಟರೆ ತಿನ್ನಲು ದಿನದ 24 ಗಂಟೆಯೂ ಏನಾದರೂ ಸಿಗುವ ಊರು ಕೆಂಪೇಗೌಡರು ಕಟ್ಟಿದ ಬೆಂಗಳೂರು.

25 ರೂ. ನಿಂದ 2,500 ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣದ ಊಟ, ತಿಂಡಿ ಸಿಗುವ ಊರು ನಮ್ಮ ಬೆಂಗಳೂರು. ನಗರದಲ್ಲಿ ಸಿಗುವ ಹಲವು ಬಗೆಯ ಖಾದ್ಯಗಳ ಪಟ್ಟಿಯಲ್ಲಿ ರೈಸ್ ಬಾತ್ ವಿಶೇಷ ಸ್ಥಾನ ಪಡೆದಿದೆ. ರಸ್ತೆ ಬದಿಯ ತಳ್ಳುಗಾಡಿಯಿಂದ ಯಾವ ದರ್ಶಿನಿ, ಕೆಫೆ, ಭವನ ಹೊಕ್ಕರೂ ಖಾದ್ಯಗಳ ಪಟ್ಟಿಯಲ್ಲಿ ರೈಸ್ ಬಾತ್ ಕಣ್ಣಿಗೆ ಕಾಣುತ್ತದೆ.

ಸಾಮಾನ್ಯವಾಗಿ ಚಿತ್ರಾನ್ನ, ಮೊಸರನ್ನ, ಪುಳಿಯೊಗರೆ, ಪಲಾವ್, ಬಿಸಿಬೇಳೆ ಬಾತ್ ಎಲ್ಲ ಕಡೆ ಸಿಗುತ್ತದೆ. ರೈಸ್ ಬಾತ್ ಎಂದು ಹೇಳಿದ ತಕ್ಷಣ ಕಣ್ಣ ಮುಂದೆ ಬರುವುದು ಇವುಗಳೇ. ಯಾವ ಹೋಟೆಲ್ ಹೊಕ್ಕರೂ ಪಲಾವ್, ಬೀಸಿಬೇಳೆ ಬಾತ್ ಚೆಂದದ ಚಿತ್ರಗಳು ಕಣ್ಣನ್ನು ಸೆಳೆಯುತ್ತವೆ, ಬಾಯಲ್ಲಿ ನೀರು ತರಿಸುತ್ತವೆ.

ನಮ್ಮ ಬೆಂಗಳೂರು ಹಾಗಲ್ಲ ಇಲ್ಲಿ ರೈಸ್ ಬಾತ್ ಯಾವುದಿದೆ? ಎಂದು ಕೇಳಿಯೇ ತಿಳಿದುಕೊಳ್ಳಬೇಕು. ಬಗೆ-ಬಗೆಯ ರೈಸ್ ಬಾತ್ ಗಳು ಎಲ್ಲಾ ಕಡೆ ಸಿಗುತ್ತವೆ. ಅವುಗಳನ್ನು ತಿಂದು ಆಸ್ವಾದಿಸಲು ಹೊಟ್ಟೆ ಹಸಿದಿರಬೇಕಷ್ಟೇ. ಆಜ್ ಕ್ಯಾ ಬಾತ್ ಹೇ ಜೀ? ಎಂದರೆ ಇವತ್ತಿನ ರೈಸ್ ಬಾತ್ ಹೆಸರು ಹೋಟೆಲ್ ಅವರ ಬಾಯಿಂದ ಬರುತ್ತದೆ.

ಟೊಮೆಟೋ ರೈಸ್ ಬಾತ್, ಕ್ಯಾಪ್ಸಿಕಂ ರೈಸ್ ಬಾತ್, ಆಲೂ ರೈಸ್ ಬಾತ್, ಬಟಾಣಿ ರೈಸ್ ಬಾತ್, ವೆಜಿಟೆಬಲ್ ರೈಸ್ ಬಾತ್, ಮೆಂತ್ಯಾ ರೈಸ್ ಬಾತ್ ಹೀಗೆ ಬಗೆ-ಬಗೆಯ ರೈಸ್ ಬಾತ್ ಸಿಗತ್ತೆ. ಉಳಿದಂತೆ ಘೀ ರೈಸ್, ವೆಜ್ ಬಿರಿಯಾನಿ, ಪುಳಿಯೊಗರೆ ಹಸಿದ ಹೊಟ್ಟೆ ತುಂಬಿಸುತ್ತವೆ.

ನಗರದ ಯಾವುದೇ ಭಾಗಕ್ಕೆ ಹೋದರೂ ಸಾರ್ ಲೆಮನ್ ರೈಸ್ ಬಾತ್ ಇದೆ ಎಂಬ ಮಾತು ಕೇಳಿ ಬರುತ್ತದೆ. ಚಿತ್ರನ್ನಾಕ್ಕೆ ಇಂಗ್ಲಿಷ್ ಟಚ್ ಕೊಟ್ಟು ಮೇಲಷ್ಟು ಚಟ್ನಿ ಸುರಿದು ಮಸಾಲ ವಡೆ ಹಾಕಿ ಕೈಗೆ ಕೊಡುತ್ತಾನೆ. ಮುಂದೆ ಕೈಗೆ...ಬಾಯಿಗೆ ಜಗಳ ಆರಂಭ.

ಬಗೆ-ಬಗೆಯ ದೋಸೆಗೂ ಬೆಂಗಳೂರು ಪ್ರಸಿದ್ಧಿ ಪಡೆದಿದೆ. ಇನ್ನೊಮ್ಮೆ ಆ ಬಗ್ಗೆ ಮಾತಾಡುವ.. ರೈಸ್ ಬಾತ್ ತಿನ್ನಬೇಕು ಹಸಿವಾಗ್ತಿದೆ.

English summary
Bengauru famous for various foods. In every area of the city you can get rice bath. You can taste different types of rice bath here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X