ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಮತ್ತು ಕೈದಿಗಳಿಗೆ ಯೋಗ ತರಬೇತಿ

|
Google Oneindia Kannada News

ಬೆಂಗಳೂರು, ಜುಲೈ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸದೃಢವಾದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ಯೋಗ ಮತ್ತು ಧ್ಯಾನ ತರಬೇತಿಯನ್ನು ನೀಡಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ಜೊತೆಗೆ ಕೈದಿಗಳಿಗೂ ಸಹ ಯೋಗ ಮತ್ತು ಧ್ಯಾನ ತರಬೇತಿ ನೀಡುವುದಕ್ಕೆ ನಿರ್ಧರಿಸಲಾಗಿದೆ. ಕೊವಿಡ್-19 ಹಿನ್ನೆಲೆ ಕೈದಿಗಳ ಆರೋಗ್ಯ ದೃಷ್ಟಿಯಿಂದ ಆರಂಭಿಕ ಹಂತದಲ್ಲಿ ಜೈಲು ಸಿಬ್ಬಂದಿಗೆ ಯೋಗ ಮತ್ತು ಧ್ಯಾನ ತರಬೇತಿ ನೀಡುವಂತೆ ಹಿರಿಯ ಅಧಿಕಾರಿಗಳೂ ಸೂಚನೆ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದಾಗ ಸಿಕ್ಕಿದ್ದೇನು ಗೊತ್ತಾ?ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದಾಗ ಸಿಕ್ಕಿದ್ದೇನು ಗೊತ್ತಾ?

Recommended Video

ಬೆಂಗಳೂರು: ಜೈಲಿನ ಖೈದಿಗಳಿಗೆ ಯೋಗ, ಧ್ಯಾನ ತರಬೇತಿ

ರವಿಶಂಕರ್ ಗುರೂಜಿ ಆಶ್ರಮದ ಸಿಬ್ಬಂದಿಯು ಜೈಲು ಸಿಬ್ಬಂದಿಗೆ ಯೋಗ ತರಬೇತಿ, ಸೂರ್ಯ ನಮಸ್ಕಾರ ಮತ್ತು ಧ್ಯಾನ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೈದಿಗಳ ಆರೋಗ್ಯದ ಜೊತೆಗೆ ಮನಃ ಪರಿವರ್ತನೆಗೂ ತರಬೇತಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Yoga Training To Staff And inmates In Bengaluru Parappana Agrahara Jail

600 ಜೈಲು ಸಿಬ್ಬಂದಿಗೆ ಯೋಗ ತರಬೇತಿ:

ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇರುವ 600 ಸಿಬ್ಬಂದಿಗೆ ಯೋಗ ಮತ್ತು ಧ್ಯಾನ ತರಬೇತಿ ನೀಡುವುದಕ್ಕೆ ನಿರ್ಧರಿಸಲಾಗಿದೆ. ಈ 600 ಸಿಬ್ಬಂದಿಯನ್ನು 10 ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪಿನ 60 ಸಿಬ್ಬಂದಿಗೆ ಒಂದು ಬಾರಿಗೆ ತರಬೇತಿ ನೀಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೈಲು ಸಿಬ್ಬಂದಿಗೆ ತರಬೇತಿ ಪೂರ್ಣಗೊಂಡ ನಂತರದಲ್ಲಿ ಜೈಲಿನಲ್ಲಿರುವ ಕೈದಿಗಳಿಗೂ ಇದೇ ರೀತಿ ಯೋಗ ಮತ್ತು ಧ್ಯಾನದ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಸಿದ್ದಾರೆ.

English summary
Yoga Training To Staff And inmates In Bengaluru Parappana Agrahara Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X