ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಯೋಗ ದಿನ; ಕೊರೊನಾ ಮತ್ತು ಯೋಗ ಜಾಗೃತಿ ನಡಿಗೆ

By Lekhaka
|
Google Oneindia Kannada News

ಬೆಂಗಳೂರು, ಜೂನ್ 20: ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್ ವತಿಯಿಂದ ಇಂದು ಕೊರೊನಾ ಮತ್ತು ಯೋಗ ಜಾಗೃತಿ ನಡಿಗೆಯನ್ನು ಆಯೋಜಿಸಲಾಗಿತ್ತು.

Recommended Video

Solar Eclipse June 21 : ಗ್ರಹಣ ಸಮಯದಲ್ಲಿ ಇದನ್ನು ತಪ್ಪದೇ ಮಾಡಿ | Roopa Iyer | Oneindia Kannada

ರಾಜರಾಜೇಶ್ವರಿ ನಗರದ ರಾಜೇಶ್ವರಿ ವಿದ್ಯಶಾಲಾದಿಂದ ಜ್ಞಾನಾಕ್ಷಿ ವಿದ್ಯಾನಿಕೇತನ್ ವರೆಗೆ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಗ್ಲೌಸ್ ಹಾಗೂ ಮಾಸ್ಕ್ ವಿತರಿಸಲಾಯಿತು. ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಚೀನಾ ಗಡಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಶ್ವ ಯೋಗ ದಿನ; ಜನತೆಗೆ ನರೇಂದ್ರ ಮೋದಿ ಮನವಿವಿಶ್ವ ಯೋಗ ದಿನ; ಜನತೆಗೆ ನರೇಂದ್ರ ಮೋದಿ ಮನವಿ

ಕಾರ್ಯಕ್ರಮದಲ್ಲಿ, "ಯೋಗ ಮಾಡಿ ರೋಗ ಮುಕ್ತರಾಗಿ" ಎಂದು ಕಾಂಗ್ರೆಸ್ ಮುಖಂಡ ಎಂ.ರಾಜ್ ಕುಮಾರ್ ಅವರು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ನಳಿನಿ ಎಂ ಮಂಜು ಅವರು ಪಾಲ್ಗೊಂಡಿದ್ದರು. ಇಂಥ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವುದು ತುಂಬಾ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ರಾಜರಾಜೇಶ್ವರಿ ವಿದ್ಯಾ ಶಾಲೆ ಅಧ್ಯಕ್ಷ ಗೋಪಾಲನ್.

Yoga And Coronavirus Awareness Walk In Bengaluru On Behalf Of World Yoga Day

ವ್ಯವಸ್ಥಿತವಾಗಿ ಹಾಗೂ ಎಲ್ಲಾ ತರಹದ ಮುಂಜಾಗ್ರತಾ ಕ್ರಮಗಳೊಂದಿಗೆ ಈ ಜಾಗೃತಿ ನಡಿಗೆ ಹಮ್ಮಿಕೊಂಡಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು ಗಾರ್ಡನ್ ಸಿಟಿ ಕೋಪರೇಟಿವ್ ಸೊಸೈಟಿಯ ಚೇರ್ಮೆನ್ ಮೋಹನ್.ಕೆ. ಬಿಜೆಪಿ ಮುಖಂಡರಾದ ಶಶಿಕಾಂತ್ ರಾವ್, ಜಗದೀಶ್ ಆರ್ ಚಂದ್ರ, ರಾಜರಾಜೇಶ್ವರಿ ಅಸೋಸಿಯೇಷನ್ ಯೂತ್ ಅಧ್ಯಕ್ಷರಾದ ವೀರು ರಜಪೂತ, ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕಾರ್ಯದರ್ಶಿಗಳಾದ ರಮೇಶ್ ಶ್ರೀಮತಿ ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್ ಅಧ್ಯಕ್ಷ ಕೆ.ಎಸ್ ಮೋಹನ್ ಕುಮಾರ್, ಕಾರ್ಯದರ್ಶಿ ರಾಜೇಶಾಚಾರಿ ಅವರು ಪಾಲ್ಗೊಂಡಿದ್ದರು.

ಯೋಗ ಜಾಗೃತಿ ನಡಿಗೆಯಲ್ಲಿ ಸುಮಾರು 60 ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

English summary
Sri yoga and cultural academy and acharya yoga youth club has organised yoga and coronavirus awareness walk on behalf of world yoga day,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X