ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ-ವಾಸ್ಕೋ ನಡುವೆ ಪ್ರತಿದಿನದ ವಿಶೇಷ ರೈಲು

|
Google Oneindia Kannada News

ಬೆಂಗಳೂರು, ನವೆಂಬರ್ 18 : ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ವಾಸ್ಕೋ-ಡಾ-ಗಾಮ ನಡುವೆ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಲಾಗಿದೆ.

ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಸಮನ್ವಯದಲ್ಲಿ ಈ ರೈಲು ಓಡಲಿದೆ. ಪ್ರತಿದಿನ ಕರ್ನಾಟಕದ ರಾಜಧಾನಿ ಮತ್ತು ಕರಾವಳಿ ಭಾಗವನ್ನು ಸಂಪರ್ಕಿಸಲಿದೆ. ಜನರು ರೈಲಿನ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸಬರ್ಬನ್ ರೈಲು ಯೋಜನೆ: ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಬರ್ಬನ್ ರೈಲು ಯೋಜನೆ: ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ

ಯಶವಂತರಪುರ-ವಾಸ್ಕೋ-ಡಾ-ಗಾಮ-ಯಶವಂತಪುರ ನಡುವೆ ಪ್ರತಿದಿನ ರೈಲು ನಂಬರ್ 07339 ಮತ್ತು 07340 ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ

Yeshwantpur-Vasco Daily Special Train Schedule

ರೈಲು ಸಂಖ್ಯೆ 07340 ವಾಸ್ಕೋ-ಡಾ-ಗಾಮ-ಯಶವಂತಪುರ ರೈಲು ಪ್ರತಿದಿನ ವಾಸ್ಕೋ-ಡಾ-ಗಾಮ ನಿಲ್ದಾಣದಿಂದ 9.20ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 12.30ಕ್ಕೆ ಯಶವಂತಪುರ ತಲುಪಲಿದೆ.

ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ

ರೈಲು ನಂಬರ್ 07339 ಯಶವಂತಪುರ-ವಾಸ್ಕೋ-ಡಾ-ಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲು ಯಶವಂತಪುರಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 6 ಗಂಟೆಗೆ ವಾಸ್ಕೋ-ಡಾ-ಗಾಮಕ್ಕೆ ತಲುಪಲಿದೆ ಎಂದು ಪ್ರಕಟಣೆ ಹೇಳಿದೆ.

ವಿಶೇಷ ರೈಲು 21 ಕೋಚ್‌ಗಳನ್ನು ಒಳಗೊಂಡಿದೆ. ಟು ಟೈರ್ ಎಸಿ 1, ತ್ರೀ ಟೈರ್ ಎಸಿ 2, 11 ಸ್ಲೀಪರ್ ಕೋಚ್, ದ್ವಿತೀಯ ದರ್ಜೆಯ ಬೋಗಿಯ 5 ಕೋಚ್‌ಗಳನ್ನು ಒಳಗೊಂಡಿದೆ.

English summary
Konkan railway and South western railway running Yeshwantpur-Vasco Da Gama daily special train from November 17, 2020. Here are the schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X