• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶವಂತಪುರದ ಯಶಸ್ಸು ಯಾರ ಪಾಲಿಗೆ?

|

ಬೆಂಗಳೂರು, ಡಿಸೆಂಬರ್ 5: ಯಶವಂತಪುರ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರದಿದ್ದರೂ ಎಸ್‌ಟಿ ಸೋಮಶೇಖರ್ ಅವರಿಗೆ ಮರ್ಯದೆಯ ಪ್ರಶ್ನೆ ಎಂದೇ ಹೇಳಬಹುದು.

2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್‌.ಟಿ. ಸೋಮಶೇಖರ್‌ ಈಗ ಬಿಜೆಪಿ ಅಭ್ಯರ್ಥಿ. ಇದೇ ಚುನಾವಣೆಗಳಲ್ಲಿ ಜೆಡಿಎಸ್ ‌ನಿಂದ ಕಣಕ್ಕಿಳಿದು ಸೋತಿದ್ದ ಜವರಾಯಿ ಗೌಡ ತೆನೆ ಪಕ್ಷದ ಹುರಿಯಾಳು. ಪಿ. ನಾಗರಾಜ್‌ ಇಲ್ಲಿ ಕಾಂಗ್ರೆಸ್‌ನ ಕಲಿಯಾಗಿದ್ದಾರೆ.

LIVE : ಏಜೆಂಟ್, ಚುನಾವಣಾ ಸಿಬ್ಬಂದಿ ವಿರುದ್ಧ ಗರಂ ಆದ ಎಂಟಿಬಿ

ಆದರೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರಿಂದ ಒಂದು ದಿನದ ಪ್ರಚಾರ ಬಿಟ್ಟರೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಯಾವೊಬ್ಬ ಕಾಂಗ್ರೆಸ್‌ನ ಹಿರಿಯ ನಾಯಕರೂ ಪ್ರಚಾರ ಮಾಡಿಲ್ಲ. ಹಿಂದಿನ ಉತ್ತರಹಳ್ಳಿ ಕ್ಷೇತ್ರದ ಭಾಗವಾಗಿದ್ದ ಯಶವಂತಪುರ ಪ್ರತ್ಯೇಕ ಕ್ಷೇತ್ರವಾಗಿದ್ದು 2008ರಲ್ಲಿ. ಬಿಜೆಪಿಯ ಶೋಭಾ ಕರಂದ್ಲಾಜೆ ಕ್ಷೇತ್ರದ ಮೊದಲ ಶಾಸಕಿ. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡವರು ಎಸ್‌.ಟಿ. ಸೋಮಶೇಖರ್‌. ಉತ್ತರಹಳ್ಳಿ ಕ್ಷೇತ್ರವಿದ್ದಾಗಲೂ 2004ರಲ್ಲಿ ಹಾಲಿ ಸಚಿವ ಆರ್‌.ಅಶೋಕ್‌ ವಿರುದ್ಧ ಸ್ಪರ್ಧಿಸಿ ಸೋಮಶೇಖರ್ ಸೋತಿದ್ದರು.

ಬಿಜೆಪಿಗೆ ಜಿಗಿದ ಸೋಮಶೇಖರ್‌ಗೆ ಜೆಡಿಎಸ್ ‌ನ ಜವರಾಯಿ ಗೌಡ ಪ್ರಬಲ ಪ್ರತಿಸ್ಪರ್ಧಿಯಾಗಬಲ್ಲರು ಎಂಬ ಕಾರಣದಿಂದಲೇ ಕಾಂಗ್ರೆಸ್‌ ನಾಯಕರು ಜವರಾಯಿಗೌಡ ಅವರಿಗೆ ಗಾಳ ಹಾಕಲು ಯತ್ನಿಸಿದ್ದರು. ಈ ಆಪರೇಷನ್‌ ಸಕ್ಸಸ್ ಆಗದಿರುವುದರಿಂದ ಪಿ. ನಾಗರಾಜ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೊಸಬರಾದರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತ ಬ್ಯಾಂಕ್‌ ಇರುವುದರಿಂದ ಗಂಭೀರ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಹಿಂದು ಚುನಾವಣೆ ಸಂದರ್ಭದಲ್ಲಿ ಸೋಮಶೇಖರ್ ಅವರ ವಿರುದ್ಧ ಇದ್ದ ಅಶೋಕ್‌, ಶೋಭಾ ಮತ್ತು 2018ರಲ್ಲಿ ಅಂತಿಮ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಒಡ್ಡಿದ್ದ ಚಿತ್ರ ನಟ ಜಗ್ಗೇಶ್ ಎಲ್ಲರೂ ಈ ಬಾರಿ ಎಸ್‌.ಟಿ. ಸೋಮಶೇಖರ್‌ ಬೆನ್ನೆಲುಬಾಗಿ ನಿಂತಿದ್ದಾರೆ.

ಈ ಬಾರಿ ಯಾರಾಗುತ್ತಾರೋ ರಾಣೆಬೆನ್ನೂರಿನ ರಾಜ?

2018ರ ವಿಧಾನಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಪಡೆದ ಮತ ಶೇಕಡಾವಾರು

ಕಾಂಗ್ರೆಸ್ ಎಸ್ ಟಿ.ಸೋಮಶೇಖರ್. 115273 - 40.14 %

ಜೆಡಿಎಸ್ ಜವರಾಯಿಗೌಡ. 104562 - 36.41 %

ಬಿಜೆಪಿ ಜಗ್ಗೇಶ. 59308 - 20.65 %

2019 ರ ಉಪಚುನಾವಣಾ ಅಭ್ಯರ್ಥಿಗಳು.

ಜೆಡಿಎಸ್ ಜವರಾಯಿಗೌಡ.

ಬಿಜೆಪಿ ಎಸ್ ಟಿ.ಸೋಮಶೇಖರ್.

ಕಾಂಗ್ರೆಸ್ ಪಾಳ್ಯ ನಾಗರಾಜ್.

ಒಟ್ಟು ಮತದಾರರು 475759

ಪುರುಷರು 246295

ಮಹಿಳೆಯರು 229424

ಇತರೆ 40

ಅಂದಾಜು ಜಾತಿವಾರು ಲೆಕ್ಕಾಚಾರ:

ಒಕ್ಕಲಿಗ 103230

ಎಸ್ ಸಿ 55483

ಎಸ್ ಟಿ 2951

ಲಿಂಗಾಯತ. 52809

ಮುಸ್ಲಿಂ. 24048

ಕುರುಬ 24655

ಬ್ರಾಹ್ಮಣ 25827

ಕ್ರಿಶ್ಚಿಯನ್ 12927

ಇತರೇ 152314 (ನಾಯ್ಡು, ತಿಗಳ, ಕುಂಬಾರ, ಮಡಿವಾಳ, ಈಡಿಗರು)

ಎಸ್ ಟಿ. ಸೋಮಶೇಖರ್

-2004 ಮತ್ತು 2008 ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ.

-ನಿರಂತರವಾಗಿ ಸೋಲು ಅನುಭವಿಸಿದ ಮುಖಂಡ.

-2013 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಜಯ.

-ಎರಡು ಬಾರಿ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಅನುಕಂಪದ ಜಯ.

-2018 ರಲ್ಲಿ ಮತ್ತೇ ಕಾಂಗ್ರೆಸ್ ನಿಂದ ಜಯ ಕಂಡ ಮುಖಂಡ.

-ರಿಯಲ್ ಎಸ್ಟೇಟ್, ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿ.

-ಸಹಕಾರ ಚಳುವಳಿಯ ಮೂಲಕ ರಾಜ್ಯದಲ್ಲಿ ಗಮನಸೆಳೆದಿದ್ದರು.

-ರಾಜ್ಯ ಸಹಕಾರ ವಸತಿ ಮಹಾಮಂಡಳದ ಅಧ್ಯಕ್ಷರಾಗಿ ಸೇವೆ.

ಜವರಾಯಿಗೌಡ -

ಜೆಡಿಎಸ್ ನಿಂದ ಎರಡು ಬಾರಿ ಸ್ಪರ್ಧಿಸಿ ಸೋಲು.

2013 ಮತ್ತು 2018 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು.

ರಿಯಲ್ ಎಸ್ಟೇಟ್ ನಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿ.

ಪಾಳ್ಯ ನಾಗರಾಜ್

ಮಾಜಿ ಸಚಿವ ಎಂ.ಕೃಷ್ಣಪ್ಪ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಮುಖಂಡ.

ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ.

ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಿ ಜಯಗಳಿಸಿ ಅನುಭವವಿಲ್ಲ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿ.

English summary
Karnataka's Bengaluru district Yeshwanthpur assembly seat by election 2019: Read all about Yeshwanthpur assembly constituency voting. Get By election news updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X