• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಶವಂತಪುರ: RTO ಕಾರ್ಯಾಚರಣೆ, ಒಂದೇ ನಂಬರಿನ 2 ಬಸ್‌ಗಳ ವಶ

|

ಬೆಂಗಳೂರು ಅಕ್ಟೋಬರ್‌ 19: ಒಂದೇ ನೊಂದಣಿ ನಂಬರ್‌ ಬಳಸಿಕೊಂಡು ಸಂಚರಿಸುತ್ತಿದ್ದ ಎರಡು ಬಸ್‌ಗಳನ್ನು ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರ್‌ ವಾಹನ ನೀರಕ್ಷಕರಾದ ರಾಜಣ್ಣ ಅವರ ತಂಡ ಗೊರಗುಂಟೆಪಾಳ್ಯದ ಬಳಿ ತಪಾಸಣಾ ಕಾರ್ಯ ಮಾಡುತ್ತಿದ್ದಾಗ MH 50N9027 ವಾಹನವನ್ನು ಸೂಕ್ತ ದಾಖಲೆಗಳು ತೆರಿಗೆ, ರಹದಾರಿ ಇಲ್ಲದೆ ಇದ್ದ ಕಾರಣ ಮುಟ್ಟುಗೋಲು ಹಾಕಿ ಪ್ರಾದೇಶಿಕ ಸಾರಿಗೆ ಕಚೇರಿ ಆವರಣ ನೆಲಮಂಗಲ ಇಲ್ಲಿ ನಿಲ್ಲಿಸಲಾಗಿತ್ತು. ತನಿಖಾ ವರದಿಯನ್ನು ನೀಡಿ ಐದಾರು ದಿನಗಳ ನಂತರವೂ ವಾಹನ ವಾರಸುದಾರರು ವಾಹನವನ್ನು ಬಿಡುಗಡೆಗೊಳಿಸಲು ಬಾರದಿದ್ದನ್ನ ಅನುಮಾನಿಸಿ ಮಾಹಿತಿ ಸಂಗ್ರಹಿಸಲು ಮುಂದಾದಾಗ ಇದೇ ಸಂಖ್ಯೆಯ ಮತ್ತೊಂದು ವಾಹನ ಚಾಮರಾಜಪೇಟೆಯ ಟಿ ಆರ್‌ ಮಿಲ್‌ ಕಾಂಪೌಂಡ್‌ ಒಳಗೆ ಇರುವುದು ತಿಳಿದು ಬಂದಿತು.

ಮರುದಿನ ಬೆಳಿಗ್ಗೆ ಸ್ಥಳಕ್ಕೆ ಭೇಟಿಮಾಡಿ ಪರಿಶೀಲಿಸಿದಾಗ ಸ್ಥಳದಲ್ಲಿ ಅನುಮಾನಿತ ವಾಹನ ಕಂಡು ಬಂದಿರುವುದಿಲ್ಲ. ನಂತರ ಪತ್ತೆ ಕಾರ್ಯ ಮುಂದುವರಿಸಿ ಧನುಷ್ ಟ್ರಾವೆಲ್ಸ್ ಗೆ ಸಂಬಂಧಿಸಿದ ವಾಹನವೊಂದು ಪ್ಯಾಲೇಸ್ ಗ್ರೌಂಡ್ ಆವರಣದಲ್ಲಿ ಇರುವುದಾಗಿ ತಿಳಿದು ಬಂದಿದೆ. ಅಲ್ಲಿ ಹೋಗಿ ಪರಿಶೀಲಿಸಲಾಗಿ, ಎಂ ಹೆಚ್ 50 n1404 ಸ್ಲೀಪರ್ ಬಸ್ ಇರುವುದು ಕಂಡುಬಂದಿದೆ.

ಸದರಿ ವಾಹನದ ಚಾ ಸಿ ನಂಬರ್ ವಾಹನದ ನೊಂದಣಿ ಸಂಖ್ಯೆಯೊಂದಿಗೆ ತಾಳೆ ಆಗದಿರುವುದು ಕಂಡುಬಂದಿದೆ. ಅನುಮಾನಿಸಲಾದ ವಾಹನವು ಗ್ರೀನ್ ಲೈನ್ಸ್ ಕಂಪನಿ ವಾಹನಗಳ ಪಾರ್ಕಿಂಗ್ ಸ್ಥಳದ ಅವರಣದಲ್ಲಿ ಇದ್ದು, ಈ ಸ್ಥಳದ ಉಸ್ತುವಾರಿ ಹೊಂದಿರುವ ಶ್ರೀ ಸಚಿನ್ ಅವರನ್ನು ಸಂಪರ್ಕಿಸಿ, ವಾಸ್ತವಿಕ ಸ್ಥಿತಿಯನ್ನು ಮನವರಿಕೆ ಮಾಡಲಾಯಿತು. ಸಚಿನ್ ರವರು ಮನವಿಯನ್ನು ಒಪ್ಪಿ, ಅನುಮಾನಿತ ಎಂ ಹೆಚ್ 50 n1404 ಬಸ್ಸನ್ನು ನಮ್ಮ ವಶಕ್ಕೆ ನೀಡಿರುತ್ತಾರೆ. ವಾಹನವನ್ನು ನಮ್ಮ ವಶಕ್ಕೆ ಪಡೆದು ಸುರಕ್ಷತಾ ದೃಷ್ಟಿಯಿಂದ ನೆಲಮಂಗಲ ಆರ್ ಟಿ ಓ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದೆ.

   Super over ಐಪಿಎಲ್ ಇತಿಹಾಸದಲ್ಲಿ ಏನೇನೆಲ್ಲಾ ನಡೆದಿದೆ | Oneindia Kannada

   ಸದರಿ ವಾಹನಗಳ ಚಾಸಿ ನಂಬರ್ ವಾಹನಗಳಮೇಲೆ ಪ್ರದರ್ಶಿಸಲಾದ ರಿಜಿಸ್ಟ್ರೇಷನ್ ನಂಬರ್ ಗಳೊಂದಿಗೆ ಹೊಂದಾಣಿಕೆ ಯಾಗಿರುವುದಿಲ್ಲ. ಈ ಎರಡೂ ವಾಹನಗಳ ಚಾಸಿ ಮತ್ತು ಇಂಜಿನ್ ನಂಬರ್ ಗಳನ್ನು ವಾಹನ ತಯಾರಿಕಾ ಕಂಪನಿಗಳ ತಜ್ಞರಿಂದ ಪರಿಶೀಲಿಸಿ, ವಾಹನಗಳ ನೈಜತೆಯನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ರಾಜಣ್ಣ ಹೇಳಿದರು.

   English summary
   Yeshwanthapura Regional Transport Office (RTO) seize two buses near Goruguntepalya with same Registration number.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X