ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ, ಕೆ.ಆರ್.ಪುರಂ ರಸ್ತೆಗಳು ಯಮಲೋಕಕ್ಕೆ ದಾರಿ!

|
Google Oneindia Kannada News

ಬೆಂಗಳೂರು, ಜನವರಿ 29: ಯಲಹಂಕ ಮತ್ತು ಕೆ.ಆರ್.ಪುರಂ ರಸ್ತೆಗಳೇ ಬೆಂಗಳೂರಿನಲ್ಲಿ ಅತ್ಯಧಿಕ ರಸ್ತೆ ಅಪಘಾತಗಳನ್ನು ಕಂಡಿರುವ ರಸ್ತೆಗಳು ಎಂದು ವರದಿ ಹೇಳುತ್ತಿದೆ.

ಯಲಹಂಕ ಮತ್ತು ಕೆ.ಆರ್.ಪುರಂ ರಸ್ತೆಯಲ್ಲಿ ಕಳೆದ ಮೂರು ವರ್ಷದಲ್ಲಿ ಬೆಂಗಳೂರಿನ ಇತರ ಭಾಗಗಳಿಗಿಂತಲೂ ಅತಿ ಹೆಚ್ಚು ರಸ್ತೆ ಅಪಘಾತಗಳು ಆಗಿವೆ ಮತ್ತು ಹೆಚ್ಚು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರಿ ಪೊಲೀಸರ ವರದಿಗಳು ಹೇಳುತ್ತಿವೆ.

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 11 ಜನರ ದುರ್ಮರಣ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 11 ಜನರ ದುರ್ಮರಣ

2016 ರಲ್ಲಿ ಯಲಹಂಕದಲ್ಲಿ 56 ರಸ್ತೆ ಅಪಘಾತಗಳಾಗಿ 59 ಮಂದಿ ಮೃತರಾಗಿದ್ದಾರೆ. 2017 ರಲ್ಲಿ ಸಹ ಕೆ.ಆರ್.ಪುರಂ ಮೊದಲ ಸ್ಥಾನದಲ್ಲಿದ್ದು, 49 ಅಪಘಾತದಲ್ಲಿ 51 ಮಂದಿ ಮೃತರಾಗಿದ್ದಾರೆ. ಯಲಹಂಕ ದ್ವಿತೀಯ ಸ್ಥಾನದಲ್ಲಿದ್ದು 32 ಅಪಘಾತದಲ್ಲಿ 39 ಜನ ಸತ್ತಿದ್ದಾರೆ.

Yelhanka and KR Puram see most accident deaths in Bengaluru

2018 ರಲ್ಲಿ ಕೆ.ಆರ್.ಪುರಂನಲ್ಲಿ 42 ಅಪಘಾತಗಳು ನಡೆದಿದ್ದು, 43 ಮಂದಿ ಮೃತರಾಗಿದ್ದಾರೆ. ಇದೇ ವರ್ಷ ಯಲಹಂಕದಲ್ಲಿ 46 ಅಪಘಾತಗಳಲ್ಲಿ 48 ಮಂದಿ ಮೃತರಾಗಿದ್ದಾರೆ. 2018 ರಲ್ಲಿ ಕೆ.ಆರ್.ಪುರವನ್ನು ಮೀರಿಸಿ ಯಲಹಂಕ ಮೊದಲ ಸ್ಥಾನಕ್ಕೆ ಏರಿದೆ.

ಹಳೆ ಮದ್ರಾಸ್ ರಸ್ತೆ, ಭಟ್ಟರಹಳ್ಳಿ ಜಂಕ್ಷನ್, ಮಹದೇವಪುರ ಬಿ.ನಾರಾಯಣಪುರ ಬಸ್ ನಿಲ್ದಾಣ, ರಾಮಮೂರ್ತಿ ನಗರದ ಎ.ಎಸ್.ಆರ್ ಕಲ್ಯಾಣ ಮಂಟಪ, ಕೆ.ಆರ್.ಪುರಂ ಬ್ರಿಡ್ಜ್‌ಗಳಲ್ಲಿ ಅತಿ ಹೆಚ್ಚು ಅಪಘಾತಗಳು ಆಗಿವೆ.

ಕಾರ್ಕಳ ಬಳಿ ಬೈಕ್ ಗೆ ಅಡ್ಡಬಂದ ಕಾಡುಕೋಣ:ಸ್ವಲ್ಪದರಲ್ಲೇ ಪಾರಾದ ಜರ್ಮನ್ ಪ್ರಜೆ ಕಾರ್ಕಳ ಬಳಿ ಬೈಕ್ ಗೆ ಅಡ್ಡಬಂದ ಕಾಡುಕೋಣ:ಸ್ವಲ್ಪದರಲ್ಲೇ ಪಾರಾದ ಜರ್ಮನ್ ಪ್ರಜೆ

ಯಲಹಂಕದ ಜಕ್ಕೂರು ಏರ್‌ಡ್ರಂ, ಯಲಹಂಕ ಬೈಪಾಸ್‌ (ಕಾಫಿ ಡೇ ಬಳಿ), ಏರ್‌ಫೋರ್ಸ್‌ ಬಳಿ, ಪಾಲನಹಳ್ಳಿ ಗೇಟ್, ಕನ್ನಮಂಗಲ ಪಾಳ್ಯ ಗೇಟ್‌ ಬಳಿ ಹೆಚ್ಚು ಅಪಘಾತಗಳು ಸಂಭವಿಸಿವೆ.

ಅತಿ ಹೆಚ್ಚು ಅಪಘಾತವಾಗಿರುವ ಪ್ರದೇಶಗಳ ಪಟ್ಟಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ, ದೇವನಹಳ್ಳಿ, ಚಿಕ್ಕಜಾಲ, ಪೀಣ್ಯ ಸಹ ಇವೆ. ಈ ಪ್ರದೇಶಗಳಲ್ಲಿ ಸಹ ವರ್ಷಕ್ಕೆ 35 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.

English summary
Yelhanka and KR Puram see most road accident deaths in Bengaluru in last three years. Yelhanka is on first place in road accident in Bengaluru, KR Puram is in second place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X