• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರತಿಮೆಗಳಿಗೆ ದೀಪಾಲಂಕಾರ; ಕಣ್ಮನ ಸೆಳೆಯುವ ಯಲಹಂಕದ ಸರ್ಕಲ್‌ಗಳು

By ಶ್ರೀಧರ್ ಎಂ ಬೂದಿಗೆರೆ
|
Google Oneindia Kannada News

ಬೆಂಗಳೂರು, ಜನವರಿ 27; ಕರ್ನಾಟಕಲ್ಲೇ ಮಾದರಿ ವಿಧಾನಸಭಾ ಕ್ಷೇತ್ರವಾಗುವತ್ತ ದಾಪುಗಾಲಿಡುತ್ತಿದೆ ಯಲಹಂಕ. ಹಠಕ್ಕೆ ಬಿದ್ದ ಕೃಷಿಕನಂತೆ ಅಭಿವೃದ್ಧಿಯ ವ್ಯವಸಾಯ ಮಾಡುತ್ತಿದ್ದಾರೆ ಇಲ್ಲಿನ ಜನಪ್ರತಿನಿಧಿಗಳು.

ಕಬ್ಬಿಣದ ಅನವಶ್ಯಕ ವಸ್ತಯಗಳನ್ನು ಬಳಸಿ ಮಾಡಿರುವ ಪ್ರತಿಮೆಗಳ ಸಂಯೋಜನೆ ಕಲಾವಿದನ ಕೈಚಳಕಕ್ಕೆ ಸಾಕ್ಷಿಯಾಗಿದೆ. ಈ ಸ್ತಬ್ದಚಿತ್ರಗಳಿಗೆ ವಿದ್ಯುತ್ ದೀಪಗಳ ಅಲಂಕಾರ ಸೊಬಗನ್ನು ಮತ್ತಷ್ಟು ಹೆಚ್ಚಿಸಿವೆ.

 ನೇತಾಜಿ ಸುಭಾಷ್ ಚಂದ್ರ ಬೋಸ್ Hologram ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ Hologram ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ

ಯಲಹಂಕ ಎಂದ ಕೂಡಲೇ ನಮಗೆ ನೆನಪಾಗುವುದು ಕೃಷಿ ಕ್ಷೇತ್ರದ ಭಗೀರಥ ಖ್ಯಾತಿಯ, ಬೆಂಗಳೂರಿನ ‌ಅಭಿವೃದ್ದಿಯ ಹರಿಕಾರರಾದ ಯಲಹಂಕದ ನಾಡಪ್ರಭು ಕೆಂಪೇಗೌಡರು. ಕೆಂಪೇಗೌಡರು ಯುದ್ಧಮಾಡಿ ರಾಜ್ಯಗಳನ್ನು ಗೆಲ್ಲದಿದ್ದರೂ ಬೆಂಗಳೂರು ಸುತ್ತಾಮುತ್ತಾ ಸಾವಿರಕ್ಕು ಹೆಚ್ಚು ಕೆರೆಕುಂಟೆ ನಿರ್ಮಾಣ ಮಾಡಿ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಖ್ಯಾತರಾದವರು.

ಇಂಡಿಯಾ ಗೇಟ್‌ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಇಂಡಿಯಾ ಗೇಟ್‌ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ

ಅದೇ ರೀತಿ ಇಲ್ಲಿನ ಜನಪ್ರತಿನಿಧಿಗಳು ಯಲಹಂಕ ಕ್ಷೇತ್ರದ ಮೂಲಭೂತ ಸೌಲಭ್ಯಗಳ ಜೊತೆ, ರಸ್ತೆ, ಕೆರೆ, ಪಾರ್ಕ್‌ಗಳ ಅಭಿವೃದ್ಧಿಗೆ ಹತ್ತಾರು ಕೋಟಿ ವ್ಯಯಿಸಿ ಯಲಹಂಕವನ್ನು ಸುಂದರಗೊಳಿಸಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ 3 ಕೋಟಿ ವೆಚ್ಚದಲ್ಲಿ ಕಬ್ಬಿಣದ ಸ್ತಬ್ದಚಿತ್ರಗಳನ್ನು ನಿರ್ಮಿಸಿ, ಅವುಗಳಿಗೆ ವರ್ಣರಂಜಿತ ವಿದ್ಯುತ್ ದೀಪಗಳನ್ನು ಅಳವಡಿಸಿ ಮತ್ತಷ್ಟು ಸುಂದರವಾಗಿಸಿದ್ದಾರೆ.

ಯಲಹಂಕ ಉಪ ನಗರ ಪೊಲೀಸರಿಂದ ಕ್ರಿಮಿನಲ್ ಕಾಲಿಗೆ ಗುಂಡು ! ಯಲಹಂಕ ಉಪ ನಗರ ಪೊಲೀಸರಿಂದ ಕ್ರಿಮಿನಲ್ ಕಾಲಿಗೆ ಗುಂಡು !

ಯಲಹಂಕ ಕೆರೆ, ಅಳ್ಳಾಳಸಂದ್ರ ಕೆರೆ, ಯಲಹಂಕ ಉಪನಗರ ಸೇರಿ ಕೆಂಪೇಗೌಡ ವಾರ್ಡ್, ಚೌಡೇಶ್ವರಿ ವಾರ್ಡ್, ಅಟ್ಟೂರು ವಾರ್ಡ್‌ಗಳಲ್ಲಿ ಕೋಟ್ಯಾಂತರ ರುಪಾಯಿ ಅನುದಾನದಲ್ಲಿ ನೂರಾರು ಪಾರ್ಕ್‌, ಜಿಮ್, ಆಟದ ಮೈದಾನಗಳನ್ನು ನಿರ್ಮಿಸಿದ್ದಾರೆ.

Yelahanka Statue Made From Scrap Material Attracting People

ಪ್ರತಿದಿನ ಇವುಗಳನ್ನು ನೋಡಲು ಪ್ರವಾಸಿ ತಾಣಗಳಿಗೆ ಬರುವ ರೀತಿ ಜನರು ಬರುತ್ತಾರೆ. ಹೀಗೆ ಹತ್ತಾರು ಅಭಿವೃದ್ಧಿ ಕೆಲಸಗಳಿಂದ ಯಲಹಂಕ ಕ್ಷೇತ್ರವನ್ನು ಮಾದರಿ ಮಾಡುತ್ತಿದ್ದಾರೆ. ಡೈರಿ ಸರ್ಕಲ್, ಸಂದೀಪ್ ಉನ್ನಿಕೃಷ್ಣನ್ ಸರ್ಕಲ್, ಎನ್. ಇ. ಎಸ್. ಸರ್ಕಲ್, ಕೋಗಿಲು ಸರ್ಕಲ್‌ಗಳಲ್ಲಿ ವಿಶೇಷ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಅಶೋಕಸ್ತಂಭ, ಭೂಮಿ, ಗೂಳಿ,‌ ಕುದುರೆ, ಮೇಕ್ ಇನ್ ಇಂಡಿಯಾ ಸಿಂಹ, ಜಿಂಕೆ, ಆಟೋ, ಕಾರು, ಟ್ರಾಕ್ಟರ್ ಸೇರಿದಂತೆ ವಿವಿಧ ಬಗೆಯ ಪ್ರತಿಮೆಗಳು ಕಲಾವಿದನ ಕೈಚಳಕಕ್ಕೆ ಸಾಕ್ಷಿಯಾಗಿ ನಿಂತಿದ್ದು, ಜನರನ್ನು ಸೆಳೆಯುತ್ತಿವೆ.

ಇದರ ಜೊತೆಗೆ ರಾತ್ರಿ ವೇಳೆ ಈ ಪ್ರತಿಮೆಗಳಿಗೆ ಬೆಳಕು ಹಾಯಿಸುವುದರಿಂದ, ಇದನ್ನು ಕಣ್ತುಂಬಿಕೊಳ್ಳುವುದೇ ದೊಡ್ಡ ಆನಂದ. ಕ್ಷೇತದಲ್ಲಿ ಸುಂದರ ವಾತಾವರಣ ನಿರ್ಮಾಣ ಮಾಡಿರುವುದಕ್ಕೆ ಸ್ಥಳೀಯರು ಶಾಸಕರಿಗೆ ಅಭಿನಂಧನೆ ಸಲ್ಲಿಸಿದ್ದಾರೆ.

ಯಲಹಂಕ ತಾಲೂಕು ಕೇಂದ್ರವಾಗಿ ಘೋಷಣೆಯಾದ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಮಾದರಿ ಕ್ಷೇತ್ರವಾಗಿ ಗುರುತಿಸಲ್ಪಡುತ್ತಿದೆ. ಯಲಹಂಕ ಶಾಸಕರು ಸದ್ಯ ಬಿಡಿಎ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಎಸ್. ಆರ್. ವಿಶ್ವನಾಥ್.

   3 ತಿಂಗಳಲ್ಲಿ 5 ಉಪಗ್ರಹ ಉಡಾವಣೆ ಮಾಡಲು ರೆಡಿಯಾದ ISRO | Oneindia Kannada
   English summary
   Statue made from scrap material attracting people in Yelahanka, Bengaluru. Iron statues will get electric light decoration in night.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion