ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ ಉಪ ನಗರ ಪೊಲೀಸರಿಂದ ಕ್ರಿಮಿನಲ್ ಕಾಲಿಗೆ ಗುಂಡು !

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ರಾಜಧಾನಿಯಲ್ಲಿ ಪೊಲೀಸರು ದಿನಕ್ಕೊಂದು ಶೂಟೌಟ್ ಪ್ರಕರಣ ವರದಿಯಾಗುತ್ತಿದೆ. ಉಲಹಂಕ ಪೊಲೀಸರು ರೌಡಿ ಶೀಟರ್ ಶಬರೀಶ್ ಗೆ ಗುಂಡು ಹಾರಿಸಿದ ಬೆನ್ನಲ್ಲೇ, ಯಲಹಂಕ ಉಪನಗರ ಪೊಲೀಸರು ಶುಕ್ರವಾರ ಬೆಳಗ್ಗೆ ರೌಡಿ ಶೀಟರ್ ಶಬರೀಶ್ ನ ಸಹಚರನ ಕಾಲಿಗೆ ಗುಂಡು ಹೊಡೆದಿದ್ದಾರೆ.

ಇಮ್ರಾನ್ ಗುಂಡೇಟು ತಿಂದವ. ಈತ ರೌಡಿ ಶೀಟರ್ ಶಬರೀಶ್ ನ ಸಹಚರ. ಯಲಹಂಕ ಪೊಲೀಸರು ನಿನ್ನೆಯಷ್ಟೇ ಕಾಲಿಗೆ ಗುಂಡು ಉಳಿಸಿ ಬಂಧಿಸಿದ್ದರು. ಇವತ್ತು ಉನಗರ ಪೊಲೀಸರು ಆತನ ಸಹಚರ ಇಮ್ರಾನ್ ಪಾಷಾ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇಮ್ರಾನ್ ಪಾಷಾ ಬಂಧನಕ್ಕೆ ತೆರಳಿದಾಗ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಈ ವೇಳೆ ಪೇದೆ ಮಧುಕುಮಾರ್ ಗೆ ಗಾಯವಾಗಿದ್ದು, ಪೊಲೀಸ್ ಸಬ್‌ ಇನ್ಸಪೆಕ್ಟರ್ ಸರ್ವೀಸ್ ರಿವಲ್ವಾರ್ ನಿಂದ ಗುಂಡು ಹಾರಿಸಿ ಇಮ್ರಾನ್ ನನ್ನು ಬಂಧಿಸಿದ್ದಾರೆ. ಗಾಯಾಳು ಆರೋಪಿ ಹಾಗೂ ಪೇದೆ ಮಧುಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bengaluru ; Yelahanka new town police opened fire on rowdy sheeter

Recommended Video

ರಾಜನಾಥ್ ಸಿಂಗ್ ನಿರ್ಧಾರ ಏನು ಗೊತ್ತಾ ? | Oneindia Kannada

ದರೋಡೆ ಮಾಡುತ್ತಿದ್ದ ಶಬರೀಶ್ ನ ಸಹಚರರಾದ ಇಮ್ರಾನ್ ಕೂಡ ಇದೀಗ ಬಂಧನಕ್ಕೆ ಒಳಗಾಗಿದ್ದು, ಒಟ್ಟು ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ. ದರೋಡೆ ಕೃತ್ಯದಲ್ಲಿ ತೊಡಗಿರುವ ಇವರ ಉಪಟಳಕ್ಕೆ ಯಲಹಂಕ ಸುತ್ತಮುತ್ತ ಜನ ಬೆಚ್ಚಿ ಬಿದ್ದಿದ್ದರು. ಇತ್ತೀಚೆಗೆ ಕೋಗಿಲು ಕ್ರಾಸ್ ಬಳಿ ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಕಿತ್ತುಕೊಂಡಿದ್ದರು.

English summary
Bengaluru ; Yelahanka new town police opened fire at a rowdy sheeter Sabarish associate Imran and arrested him. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X