• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಲಚೇನಹಳ್ಳಿ- ಅಂಜನಾಪುರ ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಯಡಿಯೂರಪ್ಪ ಚಾಲನೆ

|

ಬೆಂಗಳೂರು, ಜನವರಿ 14:ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.

6 ಕಿ.ಮೀ ಉದ್ದದ ನೂತನ ಮಾರ್ಗಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಸಿರುನಿಶಾನೆ ತೋರಿದ್ದಾರೆ. ಮೆಟ್ರೋ ಹಸಿರು ಮಾರ್ಗ ತುಮಕೂರು ರಸ್ತೆ ನಾಗಸಂಧ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿವರೆಗೆ ಇತ್ತು.

ಸಂಕ್ರಾಂತಿ ಹಬ್ಬದಂದು ಯಲಚೇನಹಳ್ಳಿ ಮೆಟ್ರೋಗೆ ಹಸಿರು ನಿಶಾನೆ

ಈಗ ಈ ಮಾರ್ಗವನ್ನು ಯಲಚೇನಹಳ್ಳಿಯಿಂದ ಅಂಜನಾಪುರಕ್ಕೆ 6 ಕಿ.ಮೀ ನಷ್ಟು ದೂರ ವಿಸ್ತರಿಸಲಾಗಿದೆ. ಕನಕಪುರ ರಸ್ತೆಯಲ್ಲಿ 6 ಕಿ.ಮೀನಷ್ಟು ದೂರ ವಿಸ್ತರಿಸಲಾಗಿದೆ. ಸಚಿವ ಆರ್ ಅಶೋಕ್, ಸದಾನಂದಗೌಡ, ಗೋವಿಂದ ಕಾರಜೋಳ, ಎಸ್‌ಆರ್ ವಿಶ್ವನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.'

ಮೆಟ್ರೋ ಮಾರ್ಗಗಳು: ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ(ಅಂಜನಾಪುರ). ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರಾಯೋಗಿಕ ಸಂಚಾರ ನಡೆಸಿರುವ ಮೆಟ್ರೋ ರೈಲು, ಕಳೆದ ತಿಂಗಳು ರೈಲ್ವೆ ಸೇಫ್ಟಿ ಸರ್ಟಿಫಿಕೇಟ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ನೂತನ ರೈಲು ಮಾರ್ಗ ಲೋಕಾರ್ಪಣೆಗೊಂಡಿದೆ.

   Yediyurappa ಮತ್ತು Vijayendra ನ ಮಾಯ ಜಾಲ!!| Oneindia Kannada

   ಈ ಮೆಟ್ರೋ ಮಾರ್ಗದಿಂದಾಗಿ ನಿತ್ಯ 75 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

   ಈ ಮಾರ್ಗದಲ್ಲಿ ಒಟ್ಟು ಐದು ಮಾರ್ಗಗಳು ಬರಲಿವೆ. ಇದೀಗ ನಗರದ ಸಂಚಾರಿಗಳಿಗೆ ಮತ್ತೊಂದು ಅಂತಹದ್ದೇ ರೀತಿಯ ಸೇವೆ ನೀಡುತ್ತಿರುವ ಸರ್ಕಾರದಿಂದ ಯೆಲಚೇನಹಳ್ಳಿಯಿಂದ ಸಿಲ್ಕ್ ಇನ್ಸ್ ಟಿಟ್ಯೂಟ್ ಗೆ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ಸಂಚಾರ ಆರಂಭವಾಗಲಿದೆ.

   English summary
   Karnataka Chief Minister BS Yediyurappa on Thursday flagged off the metro extension line between Yelachenahalli and Silk Institute over the Kanakapura Road in south Bengaluru. This extension covering 6.3km will have five more stations. The public can use the service starting from Friday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X