ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ಮಾರ್ಗದ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್ ಪೂರ್ಣಗೊಳಿಸಿದೆ. ಮಾರ್ಗದಲ್ಲಿನ ವಾಣಿಜ್ಯ ಸಂಚಾರ ನವೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ.

ಸೋಮವಾರ ಪ್ರಾಯೋಗಿಕ ಸಂಚಾರ ಪೂರ್ಣಗೊಳಿಸಿರುವ ಬಿಎಂಆರ್‌ಸಿಎಲ್ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್)ರ ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದೆ. ಆಯುಕ್ತರ ಒಪ್ಪಿಗೆ ಸಿಕ್ಕಿದರೆ ವಾಣಿಜ್ಯ ಸಂಚಾರ ಆರಂಭಿಸಬಹುದು.

ನಮ್ಮ ಮೆಟ್ರೋದ 28 ಲೋಕೋ ಪೈಲಟ್‌ಗಳಿಗೆ ಕೊರೊನಾ ಸೋಂಕು ನಮ್ಮ ಮೆಟ್ರೋದ 28 ಲೋಕೋ ಪೈಲಟ್‌ಗಳಿಗೆ ಕೊರೊನಾ ಸೋಂಕು

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮಾರ್ಗ ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗ ಇದಾಗಿದೆ. ರೀಚ್ 4ಬಿ ಮಾರ್ಗ 6.29 ಕಿ. ಮೀ. ಉದ್ದವಿದ್ದು, 5 ನಿಲ್ದಾಣಗಳನ್ನು ಒಳಗೊಂಡಿದೆ.

ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ ಮೆಟ್ರೋ ಕಾರ್ಡ್; ಬಿಎಂಆರ್‌ಸಿಎಲ್‌ನಿಂದ ಮಹತ್ವದ ತೀರ್ಮಾನ

ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಮಾರ್ಗವನ್ನು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಬಯಸಿದೆ. ಮಾರ್ಗ ಸಂಚಾರಕ್ಕೆ ಮುಕ್ತವಾದರೆ ನಾಗಸಂದ್ರದಿಂದ ಹೊರಡುವ ರೈಲು ಕನಕಪುರ ರಸ್ತೆಯ ಅಂಜನಾಪುರದ ತನಕ ಸಂಚಾರ ನಡೆಸಲಿದೆ.

ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ

ಒಪ್ಪಿಗೆ ನೀಡಲಾಗಿದೆ

ಒಪ್ಪಿಗೆ ನೀಡಲಾಗಿದೆ

ಬಿಎಂಆರ್‌ಸಿಎಲ್ ಯಲಚೇನಹಳ್ಳಿ-ಅಂಜನಾಪುರ ನಡುವಿನ ಮಾರ್ಗದಲ್ಲಿ ಪರಿಶೀಲನೆ ನಡೆಸಬೇಕು ಎಂದು ರೈಲ್ವೆ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದಿದೆ. ಅಕ್ಟೋಬರ್ 3ನೇ ವಾರದಲ್ಲಿ ಪರಿಶೀಲನೆ ನಡೆಸಲು ಅವರು ಒಪ್ಪಿಗೆ ನೀಡಿದ್ದಾರೆ.

ಕೋವಿಡ್‌ನಿಂದ ವಿಳಂಬ

ಕೋವಿಡ್‌ನಿಂದ ವಿಳಂಬ

ಬಿಎಂಆರ್‌ಸಿಎಲ್ ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ಮಾರ್ಗವನ್ನು ಆಗಸ್ಟ್ 15ಕ್ಕೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ತೀರ್ಮಾನಿಸಿತ್ತು. ಆದರೆ, ಕೋವಿಡ್ ಪರಿಣಾಮ ಕಾರ್ಮಿಕರ ಸಮಸ್ಯೆ ಉಂಟಾಯಿತು. ಇದರಿಂದಾಗಿ ನವೆಂಬರ್ 1ರ ಗಡುವನ್ನು ನಿಗದಿ ಮಾಡಿಕೊಳ್ಳಲಾಗಿದೆ.

2011ರಲ್ಲಿ ಯೋಜನೆಗೆ ಒಪ್ಪಿಗೆ

2011ರಲ್ಲಿ ಯೋಜನೆಗೆ ಒಪ್ಪಿಗೆ

ನಮ್ಮ ಮೆಟ್ರೋ ಯೋಜನೆ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವನ್ನು ನಿರ್ಮಾಣ ಮಾಡಲು 2011ರಲ್ಲಿ ತೀರ್ಮಾನಿಸಲಾಯಿತು. 2016ರಲ್ಲಿ ಮಾರ್ಗವನ್ನು ಪೂರ್ಣಗೊಳಿಸುವ ಗಡುವು ಇತ್ತು. ಆದರೆ, ಬೇರೆ-ಬೇರೆ ಸಂಸ್ಥೆಗಳ ಒಪ್ಪಿಗೆ, ಅನುದಾನದ ಕೊರತೆ ಕಾರಣ ಯೋಜನೆ ವಿಳಂಬವಾಯಿತು. 2016ರ ಜನವರಿಯಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ 508 ಕೋಟಿ ರೂ. ಟೆಂಡರ್‌ ಪಡೆದುಕೊಂಡಿತು. ಇವರಲ್ಲಿ 5 ನಿಲ್ದಾಣಗಳ ಕಾಮಗಾರಿಗಳು ಸಹ ಸೇರಿವೆ.

Recommended Video

Muttappa Rai ಪುತ್ರ Ricky Rai ಮನೆ ಮೇಲೆ CCB ದಾಳಿ | Oneindia kannada
ನಿಲ್ದಾಣಗಳ ವಿವರ

ನಿಲ್ದಾಣಗಳ ವಿವರ

ಈ ಮಾರ್ಗದಲ್ಲಿ ಯಲಚೇನಹಳ್ಳಿಯಿಂದ ಹೊರಡುವ ರೈಲು ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳಿವೆ. ಇದೇ ಹಸಿರು ಮಾರ್ಗ ಮುಂದಿನ ದಿನಗಳಲ್ಲಿ ನಾಗಸಂದ್ರದಿಂದ ಬಿಐಇಸಿ ತನಕ ವಿಸ್ತರಣೆಯಾಗಲಿದೆ.

English summary
BMRCL completed trail run between Yelachenahalli-Anjanapura namma metro route. 6.29 km route may open for public from November 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X