ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಸಂಚಾರ ಯಾವಾಗ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29 : ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ನವೆಂಬರ್ 1ರಿಂದ ಮೆಟ್ರೋ ಸಂಚಾರ ಆರಂಭವಾಗಲಿದೆಯೇ?. ಬಿಎಂಆರ್‌ಸಿಎಲ್ ನೀಡಿದ ಗಡುವು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಕನ್ನಡ ರಾಜ್ಯೋತ್ಸವದ ದಿನ ರೈಲು ಸಂಚಾರ ಆರಂಭಿಸಲು ತೀರ್ಮಾನಿಸಲಾಗಿತ್ತು. ಬಿಎಂಆರ್‌ಸಿಎಲ್ ಸಹ ನವೆಂಬರ್ 1ರ ಗಡುವು ನೀಡಿತ್ತು. ಪ್ರಾಯೋಗಿಕ ಸಂಚಾರವನ್ನು ಸಹ ಬಿಎಂಆರ್‌ಸಿಎಲ್ 6.52 ಕಿ. ಮೀ. ಮಾರ್ಗದಲ್ಲಿ ಪೂರ್ಣಗೊಳಿಸಿದೆ.

ನಮ್ಮ ಮೆಟ್ರೋ: ಅಂಜನಾಪುರದಿಂದ ಯಲಚೇನಹಳ್ಳಿಗೆ ಕೇವಲ ಹತ್ತೇ ನಿಮಿಷ ನಮ್ಮ ಮೆಟ್ರೋ: ಅಂಜನಾಪುರದಿಂದ ಯಲಚೇನಹಳ್ಳಿಗೆ ಕೇವಲ ಹತ್ತೇ ನಿಮಿಷ

ರೈಲ್ವೆ ಸುರಕ್ಷತಾ ಆಯುಕ್ತರು ಇನ್ನೂ ಮಾರ್ಗದಲ್ಲಿ ಪರಿಶೀಲನೆ ನಡೆಸಬೇಕಿದೆ. ಎಲ್ಲಾ ದಾಖಲೆ ಪರಿಶೀಲನೆ ನಡೆಸಿ, ರೈಲು ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ಪರಿಶೀಲನೆ ನಡೆಸಲು ಸುಮಾರು 3 ರಿಂದ 4 ವಾರ ಬೇಕಾಗಲಿದೆ.

'ನಮ್ಮ ಮೆಟ್ರೋ' ರೈಲುಗಳ ಸಂಚಾರ ಅವಧಿಯಲ್ಲಿ ಬದಲಾವಣೆ'ನಮ್ಮ ಮೆಟ್ರೋ' ರೈಲುಗಳ ಸಂಚಾರ ಅವಧಿಯಲ್ಲಿ ಬದಲಾವಣೆ

ರೈಲುಗಳ ವಾಣಿಜ್ಯ ಸಂಚಾರ ಆರಂಭಿಸುವ ಮುನ್ನ ರೈಲ್ವೆ ಸುರಕ್ಷತಾ ಆಯುಕ್ತರು ನೀಡುವ ಪ್ರಮಾಣ ಪತ್ರದ ಅಗತ್ಯವಿದೆ. ಆದ್ದರಿಂದ, ನವೆಂಬರ್ 1ರಿಂದ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವುದು ಅನುಮಾನವಾಗಿದೆ.

ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ ಯಲಚೇನಹಳ್ಳಿ-ಅಂಜನಾಪುರ; ನ.1ರಿಂದ ಮೆಟ್ರೋ ಸಂಚಾರ

ಪ್ರಸ್ತುತ ಸ್ಥಿತಿ ಏನಿದೆ?

ಪ್ರಸ್ತುತ ಸ್ಥಿತಿ ಏನಿದೆ?

ಬಿಎಂಆರ್‌ಸಿಎಲ್ 6.52 ಕಿ. ಮೀ. ಮಾರ್ಗದಲ್ಲಿ ಕಡ್ಡಾಯವಾಗಿ ನಡೆಸಬೇಕಾದ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದೆ. ಕಾರ್ಮಿಕರು ಬಾಕಿ ಉಳಿದಿರುವ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಅಂಜನಾಪುರ ಟೌನ್ ಶಿಪ್, ತಲಘಟ್ಟಪುರ ನಿಲ್ದಾಣಗಳಲ್ಲಿ ಕೆಲವು ಕಾಮಗಾರಿ ಬಾಕಿ ಇದೆ.

ನವೆಂಬರ್‌ನಲ್ಲಿ ಸಂಚಾರ

ನವೆಂಬರ್‌ನಲ್ಲಿ ಸಂಚಾರ

ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ ರೈಲು ಸಂಚಾರ ನವೆಂಬರ್‌ನಲ್ಲಿ ಆರಂಭವಾಗಲಿದೆ. ನಾವು ನವೆಂಬರ್ 1ರಂದು ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಸಿಎಂಆರ್‌ಎಸ್ ಪರಿಶೀಲನೆ ಇನ್ನೂ ಆರಂಭವಾಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಸಿರು ಮಾರ್ಗದ ಮೆಟ್ರೋ

ಹಸಿರು ಮಾರ್ಗದ ಮೆಟ್ರೋ

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮಾರ್ಗ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಾಗಿದೆ. ರೀಚ್ 4 ಬಿ ಮಾರ್ಗ 6.52 ಕಿ.ಮೀ. ಉದ್ದವಿದ್ದು, 5 ನಿಲ್ದಾಣಗಳನ್ನು ಒಳಗೊಂಡಿದೆ. ನಾಗಸಂದ್ರದಿಂದ ಹೊರಡು ಹಸಿರು ಮಾರ್ಗದ ರೈಲು ಕನಕಪುರ ರಸ್ತೆಯ ಅಂಜನಾಪುರ ತನಕ ಸಂಚಾರ ನಡೆಸಲಿದೆ.

ಹಲವು ಗಡುವುಗಳು

ಹಲವು ಗಡುವುಗಳು

2016ರಲ್ಲಿ ಎನ್‌ಸಿಸಿ ಕಂಪನಿಗೆ ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ರೈಲಿನ ಕಾಮಗಾರಿ ಟೆಂಡರ್ ನೀಡಲಾಯಿತು. 2020ರ ಜೂನ್‌ನಲ್ಲಿ ರೈಲು ಸಂಚಾರ ಆರಂಭಿಸುವ ಗುರಿ ಇತ್ತು. ಆದರೆ, ಕೋವಿಡ್ ಲಾಕ್ ಡೌನ್ ಕಾರಣ ನವೆಂಬರ್‌ ತನಕ ಗುಡುವು ವಿಸ್ತರಣೆಯಾಗಿದೆ. ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳು ಮಾರ್ಗದಲ್ಲಿವೆ.

English summary
BMRCL may miss November 1 deadline to run metro train between Yelachenahalli-Anjanapura route. 6.52 km route CMRS inspection yet to pending.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X