ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಚೇನಹಳ್ಳಿ-ಅಂಜನಾಪುರ ಮಾರ್ಗದಲ್ಲಿ ಶೀಘ್ರ ಮೆಟ್ರೋ ಸಂಚಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಯಲಚೇನಹಳ್ಳಿ ನಿಲ್ದಾಣದಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ ವಿಸ್ತರಿಸಿದ ಮಾರ್ಗದಲ್ಲಿ ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು ಗಡುವಿಗೂ ಮುನ್ನವೇ ನಮ್ಮ ಮೆಟ್ರೋ ರೈಲು ಸಂಚರಿಸಲಿದೆ.

ಬೆಳಗ್ಗೆ ಮತ್ತು ಸಂಜೆಯ ವೇಳೆ ಮೈಸೂರು ರಸ್ತೆ, ವೈಟ್‌ಫೀಲ್ಡ್ ಅಥವಾ ಮೆಜೆಸ್ಟಿಕ್ ಕಡೆಗೆಹೋಗಲು ತುಂಬಾ ದಡ್ಡಣೆ ಇರುತ್ತದೆ.ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಬೇಗ ಆರಂಭವಾದರೆ ಅನುಕೂಲವಾಗುತ್ತದೆ ಎನ್ನುವುದು ಪ್ರಯಾಣಿಕರ ಒತ್ತಾಯವಾಗಿದೆ.

 2020ರ ಜುಲೈನಲ್ಲಿ ಮೆಟ್ರೋ ಸಂಚಾರ

2020ರ ಜುಲೈನಲ್ಲಿ ಮೆಟ್ರೋ ಸಂಚಾರ

ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಮೆಟ್ರೋ ರೈಲು ಆರಂಭವಾಗಲಿದೆ ಎಂದು ಮೆಟ್ರೋ ನಿಗಮ ತಿಳಿಸಿತ್ತು. ಆದರೆ ವರ್ಷದ ಜುಲೈ ವೇಳೆಗೆ ಪ್ರಯಾಣಿಕರಿಗೆ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಮೊದಲ ಹೆಜ್ಜೆ ಇಟ್ಟ ನಮ್ಮ ಮೆಟ್ರೋಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಮೊದಲ ಹೆಜ್ಜೆ ಇಟ್ಟ ನಮ್ಮ ಮೆಟ್ರೋ

 ಅಂಜನಾಪುರ ಡಿಪೋ ಬದಲು ಪೀಣ್ಯ ಡಿಪೋ ಬಳಕೆ

ಅಂಜನಾಪುರ ಡಿಪೋ ಬದಲು ಪೀಣ್ಯ ಡಿಪೋ ಬಳಕೆ

ಕನಕಪುರರಸ್ತೆಯಲ್ಲಿ ಅಂಜನಾಪುರ ಡಿಪೋ ವಯಡಕ್ಟ್ ನಿರ್ಮಾಣ ಮಾಡುವುದಕ್ಕೆ ಅಂಜನಾಪುರ ಡಿಪೋ ಬದಲು ಪೀಣ್ಯ ಡಿಪೋವನ್ನೇ ಬಳಸಿಕೊಂಡು ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕನಕಪುರ ರಸ್ತೆಯಲ್ಲಿ ಅಂಜನಾಪುರ ವಯಡಕ್ಟ್ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್‌ಗೆ 856 ಚದರ ಮೀಟರ್‌ನಷ್ಟು ನೈಸ್ ಜಾಗದ ಅವಶ್ಯಕತೆ ಇದೆ. ಭೂ ಸ್ವಾಧೀನ ಪ್ರಕ್ರಿಯೆ ನಿಧಾನವಾದರೂ ರೈಲು ಕಾರ್ಯಾಚರಣೆಗೆ ತೊಂದರೆಯಾಗುವುದಿಲ್ಲ.

 ಮಾರ್ಗದಲ್ಲಿ ಬರುವ ಮೆಟ್ರೋ ನಿಲ್ದಾಣಗಳು

ಮಾರ್ಗದಲ್ಲಿ ಬರುವ ಮೆಟ್ರೋ ನಿಲ್ದಾಣಗಳು

ಮಾರ್ಗದ ಉದ್ದ -6.29 ಕಿ.ಮೀ
-ಒಟ್ಟು ನಿಲ್ದಾಣಗಳು-5
-ಮಾರ್ಗದ ಯೋಜನಾ ವೆಚ್ಚ-1765 ಕೋಟಿ
-ಸಿವಿಲ್ ಕಾಮಗಾರಿ ಯೋಜನಾ ವೆಚ್ಚ-508.86 ಕೋಟಿ
-ಕಾಮಗಾರಿ ಆರಂಭ-2016 ಮೇ
-ಕಾಮಗಾರಿ ಮುಕ್ತಾಯ-2020 ಜುಲೈ

ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ; ಎಲ್ಲ ರೈಲುಗಳೂ 6 ಬೋಗಿಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೋ; ಎಲ್ಲ ರೈಲುಗಳೂ 6 ಬೋಗಿ

 ಮೆಟ್ರೋ ಕಾಮಗಾರಿ ಕುರಿತು ಮಾಹಿತಿ

ಮೆಟ್ರೋ ಕಾಮಗಾರಿ ಕುರಿತು ಮಾಹಿತಿ

ಈ ಮಾರ್ಗದ ಅಂಜನಾಪುರ ಟೌನ್‌ಶಿಪ್‌ನ ಅಂಜನಾಪುರ ರಸ್ತೆ, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳಲ್ಲಿ ಹಳಿ ಜೋಡಣೆ ಪೂರ್ಣಗೊಂಡಿದೆ.

ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರು ಹಳಿಗಳ ಅಗಲ ಪರೀಕ್ಷೆ ನಂತರ, ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರು ಪರೀಕ್ಷಾರ್ಥ ಸಂಚಾರ ಶುರುಮಾಡಲಿದ್ದಾರೆ. ಮೆಟ್ರೋ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ.

English summary
Yelachenahalli Anjanapura Namma Metro Lane Will Open Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X