ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ತವ್ಯಕ್ಕೆ ಹಾಜರಾಗದ ವೈದ್ಯಕೀಯ ಸಿಬ್ಬಂದಿಗೆ ಸಿಎಂ ವಾರ್ನಿಂಗ್

|
Google Oneindia Kannada News

ಬೆಂಗಳೂರು, ಜುಲೈ 2: ಕೊರೊನಾ ವೈರಸ್ ತಡೆಯುವಲ್ಲಿ ಅಥವಾ ನಿಯಂತ್ರಿಸುವಲ್ಲಿ ವೈದ್ಯಕೀಯ ಸಿಬ್ಬಂದಿಯ ಪಾತ್ರ ಬಹಳ ಪ್ರಮುಖವಾದದು. ದೇಶಕ್ಕೆ ಎದುರಾಗಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕ ವೈದ್ಯರು, ನರ್ಸ್‌ಗಳು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ.

Recommended Video

China conflict results raise in Covid Medicine price | Oneindia Kannada

ಕುಟುಂಬಗಳಿಂದ ದೂರು ಉಳಿದು ರಾತ್ರಿ-ಹಗಲು ಕೊರೊನಾ ರೋಗಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು ಈ ತ್ಯಾಗ ಹಾಗೂ ಕಾರ್ಯಕ್ಕೆ ಇಡೀ ದೇಶ ಸಲಾಂ ಎಂದಿದೆ.

ಕೊರೊನಾ: ಕೇಂದ್ರ ಆರೋಗ್ಯ ಇಲಾಖೆಯಿಂದ ಹೊರಬಿದ್ದ ಗುಡ್ ನ್ಯೂಸ್ಕೊರೊನಾ: ಕೇಂದ್ರ ಆರೋಗ್ಯ ಇಲಾಖೆಯಿಂದ ಹೊರಬಿದ್ದ ಗುಡ್ ನ್ಯೂಸ್

ಆದರೆ, ಕರ್ನಾಟಕದ ಕೆಲವು ಕಡೆ ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರಿಸಿರುವ ಪ್ರಕರಣಗಳು ವರದಿಯಾಗಿದೆ. ಇದನ್ನು ಗಮನಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ವಾರ್ನ್ ಮಾಡಿರುವ ಸಿಎಂ ''ಕೋವಿಡ್ 19 ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರಿಸಿರುವ ಕೆಲವು ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಲೋಪವನ್ನು ಸಹಿಸಲಾಗದು. ಅಂತಹವರ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ'' ಎಂದಿದ್ದಾರೆ.

Yediyurappa warns to Medical staff who not attending duty amid COVID19

''ಜಾಗತಿಕ ಸಂಕಷ್ಟದ ಈ ಸಮಯದಲ್ಲಿ, ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿದೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಮೇಲುಗೈ ಸಾಧಿಸೋಣ'' ಎಂದು ಮನೋಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

English summary
Karnataka CM Yediyurappa warns to Medical staff who were not attending duty amid COVID 19 Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X