• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಈಗ ನಿರಾಳ!

|

ಬೆಂಗಳೂರು, ಅ. 31: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯವಾಗಿ ಅತಂತ್ರರಾಗಿದ್ದ ಮಾಜಿ ಶಾಸಕ ಮುನಿರತ್ನ ಇದೀಗ ನಿರಾಳರಾಗಿದ್ದಾರೆ. ಅದಕ್ಕೆ ಕಾರಣವಾಗಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರ. ಹೌದು ಉಳಿದ 16 ಜನರೊಂದಿಗೆ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರದ ಪತನಕ್ಕೆ ಹಾಗೂ ಬಿಜೆಪಿ ಸರ್ಕಾರ ಬರಲು ಮುನಿರತ್ನ ಅವರೂ ನೇರವಾಗಿ ಕಾರಣರಾಗಿದ್ದರು. ಆದರೆ ಬಿಜೆಪಿ ಸರ್ಕಾರ ಬರಲು ತಮ್ಮ ರಾಜಕೀಯ ಭವಿಷ್ಯವನ್ನೇ ಮುನಿರತ್ನ ಅವರು ಪಣಕ್ಕಿಟ್ಟಂತಾಗಿತ್ತು.

   RRNagar Congress Candidate Kusuma Exclusive Interview | ನಾನು ಯಾರನ್ನೂ ನಂಬೋಲ್ಲ !! | Oneindia Kannada

   ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರೂ ಅವರ ಮೇಲಿನ ಚುನಾವಣಾ ಅಕ್ರಮ ಪ್ರಕರಣದಿಂದ ಖುಲಾಸೆ ಆಗಿರಲಿಲ್ಲ. ಹಿಂದೆ ಬಿಜೆಪಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜುಗೌಡ ಅವರು ಹೈಕೋರ್ಟ್‌ನಲ್ಲಿ ಪ್ರಕರಣ ಬಿದ್ದರೂ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಹೀಗಾಗಿ ಮುನಿರತ್ನ ಅವರ ರಾಜಕೀಯವೇ ಮುಗಿದೋಯ್ತು ಅಂತಾ ಮಾತನಾಡಿಕೊಂಡಿದ್ದು ಕೂಡ ಬಿಜೆಪಿಯಲ್ಲಿಯೇ. ಹೀಗಾಗಿ ಆ ಕಡೆ ಶಾಸಕಸ್ಥಾನವೂ ಇಲ್ಲದೆ, ಈ ಕಡೆ ಬಿಜೆಪಿಯಲ್ಲಿಯೂ ಅತಂತ್ರರಾಗಿದ್ದ ಮುನಿರತ್ನ ಅವರ ಸಹಾಯಕ್ಕೆ ಈಗ ಮೆತ್ತ ಬಂದಿರುವುದು ಸಿಎಂ ಯಡಿಯೂರಪ್ಪ ಅವರು.

   ಮುನಿರತ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸ್!

   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರದಿಂದಾಗಿ ಇದೀಗ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನಿರಾಳರಾಗಿದ್ದಾರೆ. ಅದು ಹೇಗೆ? ಇಲ್ಲಿದೆ ಮಾಹಿತಿ!

    ಮುನಿರತ್ನ ಪರವಾಗಿ ಸಿನಿಮಾ ಮಂದಿ

   ಮುನಿರತ್ನ ಪರವಾಗಿ ಸಿನಿಮಾ ಮಂದಿ

   ನಿರ್ಮಾಪಕರೂ ಆಗಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಆರ್ ಆರ್ ನಗರ ಕ್ಷೇತ್ರದಲ್ಲಿ ಸ್ಟಾರ್ ನಟರ ಡಂಡೆ ಬೀಡು ಬಿಟ್ಟಿದೆ. ದರ್ಶನ್ ತುಗೂದೀಪ್ ಸೇರಿದಂತೆ ಬಹಳಷ್ಟು ನಟರು ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೂ ಅವರಿಗೆ ಸಮಾಧಾನವಿರಲಿಲ್ಲ. ಯಾಕೆಂದರೆ ಸಿನಿಮಾ ನಟರನ್ನು ಮತದಾರರು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಬಹುದು ಎಂಬ ಅಳಕು ಬಿಜೆಪಿ ಅರ್ಬೈರ್ಥಿ ಮುನಿರತ್ನ ಟವರಿಗೆ ಇದ್ದಂತಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಅವರ ತೀರ್ಮಾನದಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

   ನಾನೆಲ್ಲೂ ಪ್ರಚಾರಕ್ಕೆ ಹೋಗುವುದಿಲ್ಲ!

   ನಾನೆಲ್ಲೂ ಪ್ರಚಾರಕ್ಕೆ ಹೋಗುವುದಿಲ್ಲ!

   ಉಪ ಚುನಾವಣೆಯಲ್ಲಿ ನಾನೆಲ್ಲೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದರು. ಅದಾದ ಬಳಿಕ ಒಂದು ದಿನದ ಮಟ್ಟಿಗೆ ಶಿರಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದರು. ಆಗಲೇ ಮುನಿರತ್ನ ಅವರಿಗೆ ಟೆನ್ಶನ್ ಶುರುವಾಗಿದ್ದು. ಶಿರಾದಲ್ಲಿ ಪ್ರಚಾರ ಮಾಡಿ ಆರ್ ಆರ್ ನಗರದಲ್ಲಿ ಸಿಎಂ ಪ್ರಚಾರ ಮಾಡದಿದ್ದರೆ ಬೇರೆಯದ್ದೆ ಸಂದೇಶ ಮತದಾರರಿಗೆ ಹೋಗುತ್ತಿತ್ತು. ಅದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು. ಆದರೆ ಕೊನೆ ಘಳಿಗೆಯಲ್ಲಿ ಆರ್ ಆರ್ ನಗರದಲ್ಲೂ ಪ್ರಚಾರ ಮಾಡಲು ಸಿಎಂ ಯಡಿಯೂರಪ್ಪ ಒಪ್ಪಿಕೊಂಡರು.

   ಆರ್. ಆರ್. ನಗರ ಚುನಾವಣೆ; ಮುನಿರತ್ನ ಪರವಾಗಿ ದರ್ಶನ್ ರೋಡ್ ಶೋ

   ಆರ್‌ಆರ್‌ ನಗರ ಪ್ರಚಾರ ಕಣಕ್ಕೆ ಯಡಿಯೂರಪ್ಪ

   ಆರ್‌ಆರ್‌ ನಗರ ಪ್ರಚಾರ ಕಣಕ್ಕೆ ಯಡಿಯೂರಪ್ಪ

   ಆರ್ ಆರ್ ನಗರ ಉಪಚುನಾವನೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು (ಅ.31) ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ವರ್ಚುವಲ್ ರಾಲಿ, ರೋಡ್ ಶೋ ಹೀಗೆ ಇಡೀ ದಿನ ಯಡಿಯೂರಪ್ಪ ಅವರು ಆರ್ ಆರ್ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ. ಪ್ರತಿ ಪಕ್ಷಗಳ ಈವರೆಗಿನ ಟೀಕೆ, ವಾಗ್ದಾಳಿಗಳಿಗೆ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಅವರು ತಿರುಗೇಟು ಕೊಡಲಿದ್ದಾರೆ.

   ಇದುವರೆಗೂ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸದೇ ಮುಮ್ಮನಿದ್ದ ಸಿಎಂ ಯಡಿಯೂರಪ್ಪ ಅವರು ಇಂದು‌ ಮೌನ ಮುರಿದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಇದು ಮುನಿರತ್ನ ಅವರು ನಿರಾಳರಾಗಲು ಕಾರಣವಾಗಿದೆ. ಯಡಿಯೂರಪ್ಪ ಅವರು ಮುನಿರತ್ನ ಪರವಾಗಿ ಪ್ರಚಾರ ಮಾಡದಿದ್ದರೆ ಪ್ರಮುಖವಾಗಿ ಎರಡು ಆರೋಪಗಳಿಗೆ ಪುಷ್ಟಿ ಬಂದಂತಾಗುತ್ತಿತ್ತು.

   ಮುನಿರತ್ನ ಪರ ಬಿಜೆಪಿ ನಾಯಕರೇ ಬರ್ತಿಲ್ಲ

   ಮುನಿರತ್ನ ಪರ ಬಿಜೆಪಿ ನಾಯಕರೇ ಬರ್ತಿಲ್ಲ

   ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಬಿಜೆಪಿ ನಾಯಕರೇ ಪ್ರಚಾರಕ್ಕೆ ಬರುತ್ತಿಲ್ಲ. ಅವರು ಮಾಡಿರುವ ಚುನಾವಣಾ ಅಲ್ರಮಗಳೇ ಹಾಗಿವೆ. ಹೀಗಾಗಿ ಪ್ರಮುಖವಾಗಿ ಸಿಎಂ ಯಡಿಯೂರಪ್ಪ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದರು. ಜೊತೆಗೆ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರೂ ಪ್ರಚಾರಕ್ಕೆ ಬಂದಿರಲಿಲ್ಲ. ಈ ಎರಡೂ ಕಾರಣಗಳಿಂದ ಮುನಿರತ್ನ ಅವರಿಗೆ ಟೆನ್ಶನ್ ಆಗಿತ್ತು.

   ಇದೀಗ ಯಡಿಯೂರಪ್ಪ ಅವರೂ ಇಂದು ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ತುಳಸಿ ಮುನಿರಾಜುಗೌಡ ಅವರು ನಾನು ಮುನಿರತ್ನ ಪರವಾಗಿ ಅಲ್ಲ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರವ ಮಾಡುತ್ತಿದ್ದೇನೆ ಎಂದು ಪ್ರಚಾರ ಶುರು ಮಾಡಿದ್ದಾರೆ. ಯಡಿಯೂರಪ್ಪ ಅವರು ಪ್ರಚಾರಕ್ಕೆ ಬರದಿದ್ದರೆ ತುಳಸಿ ಮುನಿರಾಜು ಅವರೂ ಪ್ರಚಾರಕ್ಕೆ ಬರುತ್ತಿಲ್ಲ. ಹೀಗಾಗಿ ಇದೀಗ ಯಡಿಯೂರಪ್ಪ ಅವರ ನಿರ್ಧಾರದಿಂದ ಮುನಿರತ್ನ ಅವರು ಟೆನ್ಶನ್ ಫ್ರೀ ಆಗಿದ್ದಾರೆ ಎನ್ನಲಾಗಿದೆ.

   English summary
   Chief Minister B.S. Yediyurappa's decision now RR Nagara BJP candidate muniratna's winning streak, How it is possible? Know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X