• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಲ್ಮೀಕಿ ಜಯಂತಿ ಹಿನ್ನೆಲೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ!

|

ಬೆಂಗಳೂರು, ಅ. 31: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ವಿಶ್ವದ ಅನೇಕ ಭಾಷೆಗಳಿಗೆ ತರ್ಜುಮೆಯಾಗಿದೆ. ಜನ ಹಿತಕ್ಕಾಗಿ ದುಡಿದ ತಪಸ್ವಿ ವಾಲ್ಮೀಕಿ. ಜಾತಿ, ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ಬೆಂಗಳೂರಿನ ಶಾಸಕರ ಭವನದ ತಪೋವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಪುಷ್ಟಾರ್ಚನೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.

ವಾಲ್ಮೀಕಿ ಜಯಂತಿ: ಸಚಿವ ಶ್ರೀರಾಮುಲು ಎದುರು ಮೀಸಲಾತಿಗಾಗಿ ಘೋಷಣೆ!

ದೇಶಕ್ಕೆ ವಾಲ್ಮೀಕಿ‌ ಸಮುದಾಯದ ಕೊಡುಗೆ ಅಪಾರ. ಸಮುದಾಯದ ಅಭಿವೃದ್ದಿಗಾಗಿ ನಮ್ಮ ಬಿಜೆಪಿ ಸರ್ಕಾರ ಬದ್ಧವಾಗಿದೆ. ಅವರ ತತ್ವಗಳು ನಮಗೆ ದಾರಿ ದೀಪವಾಗಲಿ ಎಂದು ಯಡಿಯೂರಪ್ಪ ಅವರು ಆಶಿಸಿದರು. ರಾಜ್ಯದಲ್ಲಿ ಐವರು ಗಣ್ಯರನ್ನು ಮಹರ್ಷಿ ವಾಲ್ಮೀಕಿ‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಹಿತ್ಯ, ಶೈಕ್ಷಣಿಕ ಹಾಗೂ ಇತರ ಕ್ಷೇತರಗಳಲ್ಲಿ ಗಣನೀಯ ಸೇವೆ ಸಲ್ಲಿರುಸವ ಕೆ.ಆರ್. ಪಾಟೀಲ, ಬಿ.ಎಲ್. ವೇಣು, ಗೌರಿ ಕೊರಗ, ಮಾರಪ್ಪ ನಾಯಕ ಹಾಗೂ ತಿಪ್ಪೇಸ್ವಾಮಿ ಎಸ್. ಅವರು ಈ ಸಲದ ಪ್ರಶಸ್ತಿ ಪುರಸ್ಕೃತರು ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದರು.

English summary
Chief Minister Yediyurappa paid homage to the Valmiki statue in the wake of Maharishi Valmiki Jayanti at the Tapovana at Legislatures house in Bengaluru. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X