ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಯಡಿಯೂರಪ್ಪ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ'

|
Google Oneindia Kannada News

ಬೆಂಗಳೂರು, ಜುಲೈ 30: 'ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷ ಅಧಿಕಾರದಲ್ಲಿರುತ್ತಾರೆ. ಮುಂದಿನ ಚುನಾವಣೆಯನ್ನು ಅವರ ನಾಯಕತ್ವದಲ್ಲಿಯೇ ಎದುರಿಸುತ್ತೇವೆ' ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Recommended Video

ಏನಿದು ಹೊಸ ಶಿಕ್ಷಣ ರೀತಿ?ಏನಿದು ಹೊಸ ಸಚಿವಾಲಯ ಬದಲಾವಣೆ? | Oneindia Kannada

'ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ' ಎಂದು ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ಸೋಮಣ್ಣ ಘೋಷಿಸಿದರು.

ಡಿಕೆಶಿ ಹಗಲು ಹೊತ್ತು ಮಾತ್ರ ಕಾಂಗ್ರೆಸ್ ಅಧ್ಯಕ್ಷ, ಜೋಡೆತ್ತು ವಿರುದ್ಧ ಯೋಗೇಶ್ವರ್ ವಾರ್ಡಿಕೆಶಿ ಹಗಲು ಹೊತ್ತು ಮಾತ್ರ ಕಾಂಗ್ರೆಸ್ ಅಧ್ಯಕ್ಷ, ಜೋಡೆತ್ತು ವಿರುದ್ಧ ಯೋಗೇಶ್ವರ್ ವಾರ್

'ಯಡಿಯೂರಪ್ಪ ಹೆಸರಿನಲ್ಲಿಯೇ ಪ್ರಣಾಳಿಕೆ ಮಾಡಿ ಅವರ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಿದ್ದೇವೆ. ಅವರ ನೇತೃತ್ವದಲ್ಲಿ ಒಂದು ವರ್ಷದಲ್ಲಿ ಬಂದಿರುವ ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಕೃತಿ ವಿಕೋಪ ಕೊವಿಡ್ ಸಮಸ್ಯೆ ಎಲ್ಲವನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ' ಎಂದು ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಸೋಮಣ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಮೊಸರಲ್ಲಿ ಕಲ್ಲು ಹುಡುಕುವುದು ಬೇಡ

ಮೊಸರಲ್ಲಿ ಕಲ್ಲು ಹುಡುಕುವುದು ಬೇಡ

'ಅನಗತ್ಯವಾಗಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುವುದು ಬೇಡ, ಅವರ ನಾಯಕತ್ವದಲ್ಲಿಯೇ ಮುಂದಿನ ಮೂರು ವರ್ಷ ಅಧಿಕಾರದಲ್ಲಿರುತ್ತಾರೆ. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲದಲ್ಲಿಯೇ ಎದುರಿಸುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷ ಹಾಗೂ ಬೇರೆಯವರೂ ಯಾರೂ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುವುದು ಬೇಡ. ನಾವು ಅವರನ್ನು ನಾಯಕರನ್ನಾಗಿ ಒಪ್ಪಿಕೊಂಡಿದ್ದೇವೆ. ಅವರ ನಾಯಕತ್ವದಲ್ಲಿಯೆ ಮುಂದುವರೆಯುತ್ತೇವೆ. ನಾವು 105 ಜನ ಇದ್ದೆವು ಮುಖ್ಯಮಂತ್ರಿ ಹೊರಗಿನಿಂದ ಬಂದವರಿಗೆ ಅವರ ನಿರೀಕ್ಷೆಗಿಂತ ಹೆಚ್ಚಿಗೆ ಕೊಟ್ಟಿದ್ದೇವೆ. ಅವರು ನಮ್ಮ ಮನೆಯವರಾಗಿದ್ದಾರೆ' ಎಂದು ಸೋಮಣ್ಣ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಕುಮಾರಸ್ವಾಮಿ ಅರಿತು ಮಾತನಾಡುತ್ತಿದ್ದಾರೆ

ಕುಮಾರಸ್ವಾಮಿ ಅರಿತು ಮಾತನಾಡುತ್ತಿದ್ದಾರೆ

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ವಾಸ್ತವಾಂಶ ಅರಿತುಕೊಂಡು ಸರ್ಕಾರಕ್ಕೆ ಸಹಕಾರ ನೀಡುತ್ತಿದ್ದಾರೆ. ಅವರು ದೇವೇಗೌಡರ ಗರಡಿಯಲ್ಲಿ ಪಳಗಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂದು ಅವರಿಗೆ ಗೊತ್ತಿದೆ. ಜನರು ಸಂಕಷ್ಟ ಓಡುತ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ಕುಮಾರಸ್ವಾಮಿ ಅರಿತು ಮಾತನಾಡುತ್ತಿದ್ದಾರೆ' ಎಂದು ಕುಮಾರಸ್ವಾಮಿ ಬಗ್ಗೆ ಮೃದು ಧೋರಣೆ ತೋರಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ; ಯಾರು, ಏನು ಹೇಳಿದರು?ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ; ಯಾರು, ಏನು ಹೇಳಿದರು?

ಕಾಂಗ್ರೆಸ್ ತಿಳಿದು ಕೆಲಸ ಮಾಡಬೇಕಿದೆ

ಕಾಂಗ್ರೆಸ್ ತಿಳಿದು ಕೆಲಸ ಮಾಡಬೇಕಿದೆ

'ಕಾಂಗ್ರೆಸ್ ನವರು ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು. ಏನೂ ಆಗದಿದ್ದರೂ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರು ರಾಷ್ಟ್ರೀಯ ಪಕ್ಷದ ನಾಯಕರಂತೆ ನಡೆದುಕೊಳ್ಳಬೇಕು' ಎಂದು ಕಿವಿ ಮಾತು ಹೇಳಿದ್ದಾರೆ.

ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ

ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ

ಇದಕ್ಕೂ ಮುಂಚೆ ನೂತನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ 'ಭಾರತೀಯ ಜನತಾ ಪಕ್ಷದ ಇಡಿ ಕುಟುಂಬ ನಮಗೆ ಆಶೀರ್ವಾದ ಮಾಡಿರುವುದು ಸಂತೋಷವಾಗಿದೆ. ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕೊರೊನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಎಲ್ಲ ಜನ ಪ್ರತಿನಿಧಿಗಳು ಕೊರೊನಾ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನಾವೂ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ. ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ, ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ, ನಾವೆಲ್ಲ ಅವರ ಬೆಂಬಲಕ್ಕೆ ಇದೀವಿ'' ಎಂದಿದ್ದಾರೆ.

English summary
BS Yediyurappa is the our leader, He will be lead next election also said Housing minister V Somanna at bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X