ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಕುತೂಹಲ ಮೂಡಿಸಿದ ಯಡಿಯೂರಪ್ಪ ದೇವೇಂದ್ರ ಫಡ್ನವಿಸ್ ಭೇಟಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 3: ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಇದೀಗ ಯಡಿಯೂರಪ್ಪ ಹೊರ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ಮಹಾರಾಷ್ಟ್ರಕ್ಕೆ ತೆರಳಿದ್ದು ಅವರ ಈ ನಡೆ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಅಲ್ಲಿ ಯಾವ್ಯಾವ ವಿಚಾರಗಳಿಗೆ ಕುರಿತಂತೆ ಚರ್ಚೆಯಾಗಬಹುದು ಎಂದು ಈಗಾಗಲೇ ಗುಸುಗುಸು ಆರಂಭವಾಗಿದೆ.

ಮಹಾರಾಷ್ಟ್ರ ಸಂಪುಟ ವಿಸ್ತರಣೆ; ಹದಿಮೂರು ಮಂದಿ ಸೇರ್ಪಡೆಮಹಾರಾಷ್ಟ್ರ ಸಂಪುಟ ವಿಸ್ತರಣೆ; ಹದಿಮೂರು ಮಂದಿ ಸೇರ್ಪಡೆ

ಅವರು ಮಹಾರಾಷ್ಟ್ರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಜಿ ಫಡ್ನವಿಸ್ ಭೇಟಿಯಾಗ್ತಿದ್ದೇನೆ, ಪ್ರಮುಖವಾಗಿ ಮಹಾದಾಯಿ ವಿಚಾರವಾಗಿ ಚರ್ಚೆ ಮಾಡುತ್ತೇವೆ, ಜೊತೆಗೆ ಕೃಷ್ಣಾ ಮೆಲ್ದಂಡೆ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆಯೂ ಮಾತುಕತೆ ನಡೆಸುತ್ತೇವೆ ಎಂದರು.

Yediyurappa Is Going To Meet Devendra Fadnavis

ಕೃಷ್ಣಾ ಯೋಜನೆ ಬಗ್ಗೆ ಪ್ರಧಾನಿ ಜೊತೆ ಮಾತನಾಡಿದ್ದೇವೆ, ನೀವು ಸಹಕಾರ ಕೊಡಬೇಕು ಎಂದು ಕೇಳುತ್ತೇವೆ. ಸೆಪ್ಟೆಂಬರ್ 6ರಂದು ಸಚಿವ ಸಂಪುಟ ಸಭೆ ಇದೆ, ಆ ಸಭೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ಮಾಡುತ್ತೇವೆ.

ಸೆಪ್ಟೆಂಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಅವರಿಗೆ ರಾಜ್ಯದ ಪ್ರವಾಹ ಬಗ್ಗೆ ಮನವರಿಕೆ ಮಾಡಿಕೊಟ್ಟು, ಪರಿಹಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಜೊತೆ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಸಾಥ್ ನೀಡಿದ್ದಾರೆ.

English summary
After Cabinet Expansion Chief minister BS Yediyurappa will Going to meet Maharashtra Cheif minister Decendra Fadnavis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X