• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಕೆಟ್ ಇಲ್ಲ ಆದ್ರೆ ಆರ್‌ ಶಂಕರ್‌ಗೆ ಯಡಿಯೂಪ್ಪರಿಂದ ಹೊಸ ಆಫರ್

|
Google Oneindia Kannada News

ಬೆಂಗಳೂರು, ನವೆಂಬರ್ 15: ನಾನು ಎಂಎಲ್‌ಸಿ ಆಗಿ ಮಂತ್ರಿ ಆಗ್ತೀನಿ, ನನಗೆ ಮಂತ್ರಿ ಮಾಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಎಂದು ಬಿಜೆಪಿಗೆ ಸೇರ್ಪಡೆಯಾಗಿರುವ ಆರ್ ಶಂಕರ್ ಹೇಳಿದ್ದಾರೆ.

ರಾಣೆಬೆನ್ನೂರಿನಲ್ಲಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆ ಸಿಎಂ ಮನೆಗೆ ಆರ್ ಶಂಕರ್ ಹಾಗೂ ಬೆಂಬಲಿಗರು ಇಂದು ಬೆಳಗ್ಗೆ ದೌಡಾಯಿಸಿದ್ದರು. ಸಿಎಂ ಜೊತೆ ಮಾತುಕತೆ ಬಳಿಕ ಸ್ಪಷ್ಟನೆ ನೀಡಿರುವ ಅವರು ನಾನು ಎಂಎಲ್‌ಸಿ ಆಗ್ತೀನಿ ಬಳಿಕ ಮಂತ್ರಿಯಾಗ್ತೀನಿ ಎಂದಿದ್ದಾರೆ.

ಆರ್ ಶಂಕರ್ ಗೆ ಟಿಕೆಟ್ ಗೆ ನೀಡುವಂತೆ ಗಲಾಟೆ ಮಾಡುತ್ತಿದ್ದಾರೆ. ಸಿಎಂ ಮನೆಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಮುಂದಾಗಿದ್ದಾರೆ.

ಆರ್ ಶಂಕರ್ ಗೆ ಟಿಕೇಟ್ ಕೊಡಬೇಕು,ಇಲ್ಲದಿದ್ದರೆ ಈ ಸ್ಥಳ‌ ಬಿಟ್ಟು ಕದಲಲ್ಲ,ಬಿಜೆಪಿ ನಾಯಕರು ಬೇಕಾದಾಗ ನಮ್ಮ ಶಂಕರಣ್ಣನನ್ನು ಬಳಸಿಕೊಂಡ್ರು,ಇವಾಗ ಬೇಡ ಅಂತಾ ಒಬ್ಬೊಬ್ಬರನ್ನೇ ಕೈ ಬಿಡುತ್ತಿದ್ದಾರೆ.

ಗೆಲ್ಲುವ ಮೊದಲೇ ಎಲ್ಲರಿಗೂ ಸಚಿವ ಸ್ಥಾನದ ಭರವಸೆ ನೀಡಿದ ಯಡಿಯೂರಪ್ಪ ಗೆಲ್ಲುವ ಮೊದಲೇ ಎಲ್ಲರಿಗೂ ಸಚಿವ ಸ್ಥಾನದ ಭರವಸೆ ನೀಡಿದ ಯಡಿಯೂರಪ್ಪ

ನಮ್ಮ ನಾಯಕ ಶಂಕರ್ ಸರ್ಕಾರ ರಚನೆಗಾಗಿ ರಾಜೀನಾಮೆ ಕೊಟ್ಟು ಹೊರಗೆ ಬಂದ್ರು. ಇವಾಗ ಅವರನ್ನು ಬೀದಿಗೆ ತಂದಿದ್ದಾರೆ. ನಾವು ಇದನ್ನು ಸಹಿಸೋದಿಲ್ಲ ಎಂದು ಬೆಂಬಲಿಗರು ಪ್ರತಿಭಟನೆ ಮುಂದುವರೆಸಿದ್ದಾರೆ.

 ಶಂಕರ್ ವಿರುದ್ಧ ತಿರುಗಿಬಿದ್ದ ಬೆಂಬಲಿಗರು

ಶಂಕರ್ ವಿರುದ್ಧ ತಿರುಗಿಬಿದ್ದ ಬೆಂಬಲಿಗರು

ನಿಮಗೆ ರಾಣೆ ಬೆನ್ನೂರಿನಲ್ಲಿ ಟಿಕೆಟ್ ಕೈತಪ್ಪಿ ಹೋಯಿತು ಎನ್ನುವ ಬೇಸರದಿಂದ ನಾವು ಟಿಕೆಟ್ ಕೇಳಲು ಬಂದರೆ ನೀವು ಎಂಎಲ್‌ಸಿಯಾಗಲು ಒಪ್ಪಿಕೊಂಡು ಬಂದಿದ್ದೀರಿ, ಒಳಗೆ ಒಂದು ರೀತಿ ಹೊರಗೆ ಒಂದು ರೀತಿ ವರ್ತಿಸುತ್ತಿದ್ದೀರಾ ಎಂದು ಆರ್ ಶಂಕರ್ ವಿರುದ್ಧ ಅವರ ಬೆಂಬಲಿಗರೇ ತಿರುಗಿಬಿದ್ದಿದ್ದಾರೆ.

 ಆರ್‌ ಶಂಕರ್‌ಗೆ ಟಿಕೆಟ್ ಕೊಡಿ

ಆರ್‌ ಶಂಕರ್‌ಗೆ ಟಿಕೆಟ್ ಕೊಡಿ

ರಾಣೆಬೆನ್ನೂರಿನಿಂದ ಆರ್‌ಶಂಕರ್‌ಗೆ ಟಿಕೆಟ್ ಕೈತಪ್ಪಿರುವ ವಿಚಾರ ಬೆಳ್ಳಂಬೆಳಗ್ಗೆಯೇ ಸಿಎಂ ಮನೆಗೆ ಶಂಕರ್ ದೌಡಾಯಿಸಿದ್ದರು.

ಆರ್‌ ಶಂಕರ್‌ಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿರುವ ಶಂಕರ್ ಬೆಂಬಲಿಗರು, ಒಂದೊಮ್ಮೆ ಬೇರೆಯವರಿಗೆ ಟಿಕೆಟ್ ನೀಡಿದರೆ ನಾವು ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

 ಎಂಎಲ್ ಸಿ ಆಗಿ ಸಚಿವರಾಗಿ ಶಂಕರ್ ಒಪ್ಪಿಗೆ

ಎಂಎಲ್ ಸಿ ಆಗಿ ಸಚಿವರಾಗಿ ಶಂಕರ್ ಒಪ್ಪಿಗೆ

ಯಡಿಯೂರಪ್ಪ ಮಾತಿಗೆ ಒಪ್ಪಿದ್ದೇನೆ, ಯಾರಿಗೆ ಟಿಕೆಟ್ ಕೊಟ್ರು ನಾನು ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಮಂತ್ರಿ ಮಾಡೋ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ನಾನು ಯಡಿಯೂರಪ್ಪ ಮಾತು ಒಪ್ಪಿ ಎಂಎಲ್ ಸಿ ಆಗ್ತೀನಿ. ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡ್ತೀನಿ ಎಂದು ಹೇಳಿದ್ದಾರೆ.

 ಟಿಕೆಟ್ ಕೊಡದಿದ್ದರೆ ರಾಜೀನಾಮೆ ಕೊಡಬೇಕು ಅಂತ ಇದ್ದೆ

ಟಿಕೆಟ್ ಕೊಡದಿದ್ದರೆ ರಾಜೀನಾಮೆ ಕೊಡಬೇಕು ಅಂತ ಇದ್ದೆ

ಟಿಕೆಟ್ ಕೊಡದೇ ಇದ್ದರೆ ರಾಜೀನಾಮೆ ಕೊಡಬೇಕು ಅಂತ ಇದ್ದೆ, ಆದ್ರೆ ಯಡಿಯೂರಪ್ಪ ನನಗೆ ಭರವಸೆ ಕೊಟ್ಟಿದ್ದಾರೆ.ಹೀಗಾಗಿ ನಾನು ರಾಜೀನಾಮೆ ನೀಡೊಲ್ಲ. ಬಿಜೆಪಿ ಪರ ಕೆಲಸ ಮಾಡ್ತೀನಿ.ಯಾರೇ ಅಭ್ಯರ್ಥಿ ಆದ್ರು ಕೆಲಸ ಮಾಡ್ತೀನಿ. ಎಂಎಲ್ ಸಿ‌ ಆಗೋಕೆ ನನಗೆ ಒಪ್ಪಿಗೆ ಇದೆ. ಎಂಎಲ್ ಸಿ ಆಗಿ ನಾನು ಮಂತ್ರಿ ಆಗ್ತೀನಿ ಎಂದು ಹೇಳಿದ್ದಾರೆ.

English summary
R Shankar says that Yediyurappa promises to make me minister,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X